ಮಿರ್ಜಾಪುರ, ಏಪ್ರಿಲ್ 23: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಬೃಹತ್ ಟ್ರಕ್ಗಳ ನಡುವೆ ಡಿಕ್ಕಿ ಸಂಭವಿಸಿದೆ, ಅದರ ನಡುವೆ ಕಾರು ಸಿಕ್ಕಿಹಾಕಿಕೊಂಡ ಪರಿಣಾಮ 11 ಮಂದಿ ಸಜೀವದಹನವಾಗಿದ್ದಾರೆ. ಎರಡು ಭಾರೀ ವಾಹನಗಳ ನಡುವೆ ಸಿಲುಕಿದ್ದ ಕಾರು ನಜ್ಜುಗುಜ್ಜಾಗಿದ್ದು, ನಂತರ ಬೆಂಕಿ ಹೊತ್ತಿಕೊಂಡಿತ್ತು. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬ್ರೇಕ್ ಫೇಲ್ ಆದ ಟ್ರಕ್ ಇಳಿಜಾರಿನಲ್ಲೊ ವೇಗವಾಗಿ ಬಂದು ಮತ್ತೊಂದು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಆ ಟ್ರಕ್ ಹಿಂದೆ ಕಾರು ಕೂಡ ಇತ್ತು.ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ 2 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.