
‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ನಡುವೆ ಕ್ಲ್ಯಾಶ್ ಆಗಲಿದೆ ಎಂಬ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಯಾವಾಗ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಯಿತೋ ಆಗ ಈ ಚರ್ಚೆ ಕೂಡ ಕೊನೆ ಆಯಿತು. ಈಗ ‘ಧುರಂದರ್ 2’ ಹಾಗೂ ‘ಟಾಕ್ಸಿಕ್’ ಒಂದೇ ಸಮಯದಲ್ಲಿ ರಿಲೀಸ್ ಆಗಲಿವೆ! ಅರೆ ಇದೇನು ಅಂತೀರಾ? ಆ ಬಗ್ಗೆ ಇಲ್ಲಿದೆ ವಿವರ.
ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಅವರು ‘ಧುರಂಧರ್: ದಿ ರಿವೇಂಜ್’ ಮೂಲಕ ಹಲ್ಚಲ್ ಸೃಷ್ಟಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಎಷ್ಟೇ ದೊಡ್ಡ ಬಜೆಟ್ ಸಿನಿಮಾ ಆದರೂ, ಎಷ್ಟೇ ಜನಪ್ರಿಯತೆ ಪಡೆದರೂ 50 ದಿನಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ. ಆದರೆ, ‘ಧುರಂಧರ್ 2’ ವಿಷಯದಲ್ಲಿ ಆ ರೀತಿ ಆಗುವುದಿಲ್ಲ ಎನ್ನಲಾಗಿದೆ. ಮಾರ್ಚ್ 19ರಲ್ಲಿ ರಣವೀರ್ ನಟನೆಯ ಈ ಸಿನಿಮಾ ರಿಲೀಸ್ ಆಗಿದೆ. ಎರಡು ತಿಂಗಳ ಅವಧಿ ಎಂದರೂ ಮೇ 15ಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಬೇಕಿತ್ತು.
ಆದರೆ, ಒಟಿಟಿ ರಿಲೀಸ್ ಪ್ಲ್ಯಾನ್ ಬೇರೆಯದೇ ಇದೆ ಎನ್ನಲಾಗಿದೆ. ಸದ್ಯ ಎಲ್ಲೆಲ್ಲೂ ಐಪಿಎಲ್ ಹವಾ ಜೋರಾಗಿದೆ. ಐಪಿಎಲ್ ಜ್ವರ ಮೇ 31ರವರೆಗೆ ಇರಲಿದೆ. ಇದು ಸಿನಿಮಾ ಒಟಿಟಿ ರಿಲೀಸ್ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಾ ಇದೆ. ಐಪಿಎಲ್ ಪ್ರಸಾರ ಕಾಣುತ್ತಿರುವುದು ಜಿಯೋ ಹಾಟ್ ಸ್ಟಾರ್ನಲ್ಲಿ. ಈ ಸಿನಿಮಾ ಪ್ರಸಾರ ಕಾಣೋದು ಕೂಡ ಇದೇ ಒಟಿಟಿಯಲ್ಲಿ.
‘ಧುರಂಧರ್ 2’ ಸಿನಿಮಾ ಥಿಯೇಟರ್ನಲ್ಲಿ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದಿದೆ. ಈ ದಾಖಲೆಯನ್ನು ಒಟಿಟಿಯಲ್ಲಿಯೂ ‘ಬರೆಯಲು ಈ ಸಿನಿಮಾ ಸಿದ್ಧವಾಗಿದೆ. ಇದಕ್ಕೆ ಕ್ರಿಕೆಟ್ ಅಡ್ಡಿ ಆಗಬಹುದು ಎಂಬ ಭಯ ಇದೆ. ಹೀಗಾಗಿ, ಜೂನ್ 1ರ ಬಳಿಕ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಬಹುದು.
ಇದನ್ನೂ ಓದಿ: ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್
ಜೂನ್ 4ರಂದು ‘ಟಾಕ್ಸಿಕ್’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗುತ್ತಿದೆ. ಇದೇ ವೇಳೆ ‘ಧುರಂಧರ್ 2’ ಒಟಿಟಿಗೆ ಬಂದರೆ ಎರಡೂ ಸಿನಿಮಾಗಳ ಮಧ್ಯೆ ಸಣ್ಣ ಕ್ಲ್ಯಾಶ್ ಅನ್ನು ನಿರೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.