Headlines

ಮುದ್ದಾಡಿದ ಮೇಕೆಯೇ ಮಧ್ಯಾಹ್ನ ಬಿರಿಯಾನಿ; ಸತ್ಯ ತಿಳಿದು ವಾಂತಿ ಮಾಡಿಕೊಂಡ ನಟಿ ಅನುಪಮಾ – Kannada News | Dhruv Vikram Reveals Shocking Set Incident: Anupama Parameswaran Reacts On Bison Kaalamaadan Sets

ತಮಿಳಿನ ಬಹುನಿರೀಕ್ಷಿತ ‘ಬೈಸನ್ ಕಾಳಮಾಡನ್’ ಸಿನಿಮಾದಲ್ಲಿ ನಟ ಧ್ರುವ ವಿಕ್ರಮ್ ಹಾಗೂ ನಟಿ ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ 2025ರಲ್ಲಿ ರಿಲೀಸ್ ಆಯಿತು. ಆ ಸಮಯದಲ್ಲಿ ನಡೆದ ಚಾಟ್ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಈ ಜೋಡಿ, ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದ ಅತ್ಯಂತ ತಮಾಷೆಯ ಹಾಗೂ ಆಘಾತಕಾರಿ ಘಟನೆಯೊಂದನ್ನು ನೆನಪಿಸಿಕೊಂಡಿತ್ತು. ಆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.

ಸೆಟ್‌ನಲ್ಲಿ ನಡೆದಿದ್ದೇನು?

ಸಂದರ್ಶನದಲ್ಲಿ ಮಾತನಾಡಿದ ಧ್ರುವ ವಿಕ್ರಮ್, ‘ನಟಿ ಅನುಪಮಾ ಸೆಟ್‌ನಲ್ಲಿ ಮೇಕೆ ಮರಿಯೊಂದರ ಜೊತೆ ಆಟವಾಡುತ್ತಿದ್ದರು. ಆದರೆ ಅದೇ ದಿನ ಸಂಜೆ ಅವರು ಅದೇ ಮೇಕೆಯ ಮಾಂಸವನ್ನು ತಿಂದರು’ ಎಂದು ತಮಾಷೆಯಾಗಿ ಕಾಲೆಳೆದರು.

ಇದಕ್ಕೆ ಸ್ಪಷ್ಟನೆ ನೀಡಿದ ನಟಿ ಅನುಪಮಾ ಪರಮೇಶ್ವರನ್, ‘ಶೂಟಿಂಗ್ ಸೆಟ್‌ನಲ್ಲಿ ಮೇಕೆ ಮರಿಗಳಿದ್ದವು, ನಾನು ಅವುಗಳ ಜೊತೆ ಆಟವಾಡುತ್ತಿದ್ದೆ. ಮಧ್ಯಾಹ್ನದ ಊಟಕ್ಕೆ ನನಗೆ ಮಟನ್ ಬಿರಿಯಾನಿ ನೀಡಲಾಗಿತ್ತು. ಎರಡು ತುತ್ತು ತಿಂದ ನಂತರ ನನ್ನ ಅಸಿಸ್ಟೆಂಟ್ ಬಂದು ‘ಮ್ಯಾಮ್, ನೀವು ಬೆಳಿಗ್ಗೆ ಆಟವಾಡುತ್ತಿದ್ದರಲ್ಲ ಅದೇ ಮೇಕೆ ಬಿರಿಯಾನಿ ಇದು ಎಂದು ನಗುತ್ತಾ ಹೇಳಿದರು’ಎಂದು ಘಟನೆಯನ್ನು ವಿವರಿಸಿದರು.

ಅಂದಿನಿಂದ ಮಟನ್ ತಿಂದಿಲ್ಲ!

ಅಸಿಸ್ಟೆಂಟ್ ಹೇಳಿದ ಮಾತಿನಿಂದ ದಿಗ್ಭ್ರಮೆಗೊಂಡ ಅನುಪಮಾ, ತಕ್ಷಣವೇ ವಾಂತಿ ಮಾಡಿಕೊಂಡರಂತೆ. ‘ಆ ಘಟನೆ ನನಗೆ ತುಂಬಾ ಆಘಾತ ನೀಡಿತು. ಆ ಘಟನೆಯ ನಂತರ ನಾನು ಇದುವರೆಗೂ ಮತ್ತೆ ಎಂದಿಗೂ ಮಟನ್ ಮುಟ್ಟಿಲ್ಲ’ ಎಂದು ಅನುಪಮಾ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ಬ್ರೇಕಪ್ ಬಗ್ಗೆ ಹಾಗೂ ಟಾಕ್ಸಿಕ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ಧ್ರುವ್ ಜೊತೆ ಅವರು ರಿಲೇಶನ್​ಶಿಪ್​ನಲ್ಲಿ ಇದ್ದರು ಎಂದು ಕೂಡ ಹೇಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *