Headlines

ಮೂವರು ಸ್ಟಾರ್ ನಟಿಯರ ಸಿನಿಮಾ ವಿಳಂಬಕ್ಕೆ ಪ್ರಿಯಾಂಕಾ ಕಾರಣ? ವಿವರಿಸಿದ ನಿರ್ದೇಶಕ – Kannada News | Jee Le Zaraa: Farhan Akhtar on Delays and Star Cast | Priyanka, Katrina, Alia Film Update

‘ಜೀ ಲೇ ಜರಾ’ ಸಿನಿಮಾ ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಟ ಫರ್ಹಾನ್ ಅಖ್ತರ್ ಅವರ ಕನಸಿನ ಪ್ರಾಜೆಕ್ಟ್ ಎನಿಸಿಕೊಂಡಿದೆ. ಈ ಚಿತ್ರ ಘೋಷಣೆಯಾದ ದಿನದಿಂದಲೂ ಚಿತ್ರರಂಗದಲ್ಲಿ ಈ ಸಿನಿಮಾ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಈ ಚಿತ್ರ ಗಮನ ಸೆಳೆಯಲು ಈ ಚಿತ್ರದ ತಾರಾಗಣ ಕೂಡ ಕಾರಣ ಆಗಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ರೋಡ್ ಟ್ರಿಪ್ ಸುತ್ತ ಸಾಗುತ್ತದೆ ಎನ್ನಲಾಗಿದೆ. ಈಗ ಈ ಸಿನಿಮಾ ಸೆಟ್ಟೇರುವುದು ಅನುಮಾನ ಎನ್ನಲಾಗುತ್ತಿದೆ.  ಹೀಗಿರುವಾಗಲೇ ಫರ್ಹಾನ್ ಅಖ್ತರ್ (Farhan Akhtar) ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

‘ಜೀ ಲೇ ಜರಾ’ ಸಿನಿಮಾದ ಅತಿದೊಡ್ಡ ಆಕರ್ಷಣೆ ಎಂದರೆ ಅದರ ತಾರಾಗಣ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ಗ್ಲಾಮರ್ ಗೊಂಬೆ ಕತ್ರಿನಾ ಕೈಫ್ ಮತ್ತು ಪ್ರತಿಭಾವಂತ ನಟಿ ಆಲಿಯಾ ಭಟ್ ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಬೇಕಿತ್ತು. ಬಾಲಿವುಡ್‌ನ ಮೂವರು ಟಾಪ್ ನಟಿಯರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಕೇವಲ ನಟಿಯರಷ್ಟೇ ಅಲ್ಲದೆ, ಚಿತ್ರದ ಹಿಂದಿರುವ ತಾಂತ್ರಿಕ ತಂಡವೂ ಅಷ್ಟೇ ಪ್ರಬಲವಾಗಿದೆ. ಈ ಹಿಂದೆ ‘ಜಿಂದಗಿ ನಾ ಮಿಲೇಗಿ ದೊಬಾರಾ’ ಅಂತಹ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ ಫರ್ಹಾನ್ ಅಖ್ತರ್, ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಈ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಈ ತ್ರಿಮೂರ್ತಿಗಳ ಲೇಖನಿಯಲ್ಲಿ ಮೂಡಿಬರುವ ಸಿನಿಮಾಗಳು ಸಾಮಾನ್ಯವಾಗಿ ಸ್ನೇಹ ಮತ್ತು ಜೀವನದ ಮೌಲ್ಯಗಳನ್ನು ಸಾರುತ್ತವೆ.  ಹಾಗಾಗಿ ‘ಜೀ ಲೇ ಜರಾ’ ಮೇಲೆ ನಿರೀಕ್ಷೆಗಳು ಇಮ್ಮಡಿಯಾಗಿವೆ.

ಈ ಬಗ್ಗೆ ಮಾತನಾಡಿರುವ ಫರ್ಹಾನ್ ಅಖ್ತರ್, ‘ ಪ್ರತಿದಿನ ಕೆಲಸಕ್ಕೆ ಉತ್ಸಾಹದಿಂದ ಹೋಗಬೇಕು ಎನ್ನುವುದು ನನ್ನ ಆಶಯ. ಹಿಂದೆ ಕೆಲವು ಸಿನಿಮಾಗಳನ್ನು ಕೇವಲ ಆ ಕ್ಷಣದ ಕುತೂಹಲಕ್ಕೆ ಒಪ್ಪಿಕೊಂಡಿದ್ದೆ. ಆದರೆ ಚಿತ್ರೀಕರಣದ ಸಮಯದಲ್ಲಿ ಅವು ನನಗೆ ತೃಪ್ತಿ ನೀಡುತ್ತಿಲ್ಲ ಎಂಬುದು ಅರಿವಾಯಿತು. ಅಂತಹ ಸಂದರ್ಭಗಳಲ್ಲಿ ಆ ಕೆಲಸವನ್ನು ಪ್ರಾಮಾಣಿಕವಾಗಿ ಪೂರೈಸಿ, ಅದರಿಂದ ಪಾಠ ಕಲಿಯುವುದು ಮುಖ್ಯ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ ಅವರು.

‘ಕಳೆದ ನಾಲ್ಕುವರೆ ವರ್ಷಗಳಿಂದ ಈ ಚಿತ್ರವನ್ನು ಸೆಟ್ಟೇರಿಸಲು ನಾನು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಯಾವುದೋ ಒಂದು ಕಾರಣದಿಂದಾಗಿ ಕೆಲಸಗಳು ಮುಂದೂಡಲ್ಪಡುತ್ತಿವೆ. ಈ ಅಡೆತಡೆಗಳನ್ನು ಕಂಡರೆ, ಬ್ರಹ್ಮಾಂಡವು ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದೆಯೇನೋ ಮತ್ತು ಈ ಸಿನಿಮಾ ಮಾಡಲು ನಾನು ಎಷ್ಟು ಹಂಬಲಿಸುತ್ತಿದ್ದೇನೆ ಎಂದು ನೋಡುತ್ತಿದೆ ಎಂದು ನನಗನ್ನಿಸುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಡಾನ್ 3’ ಸಿನಿಮಾ ವಿವಾದ: ಬಗ್ಗೆ ಕೊನೆಗೂ ಬಾಯ್ಬಿಟ್ಟ ಫರ್ಹಾನ್ ಅಖ್ತರ್

2021ರ ಆಗಸ್ಟ್‌ನಲ್ಲಿ ಅಧಿಕೃತವಾಗಿ ಘೋಷಣೆಯಾದ ಈ ಚಿತ್ರವನ್ನು ಎಕ್ಸೆಲ್ ಎಂಟರ್ಟೈನ್‌ಮೆಂಟ್ ಮತ್ತು ಟೈಗರ್ ಬೇಬಿ ಫಿಲ್ಮ್ಸ್ ಸಂಸ್ಥೆಗಳು ಅದ್ಧೂರಿಯಾಗಿ ನಿರ್ಮಿಸುತ್ತಿವೆ. ಡೇಟ್ಸ್ ಹೊಂದಾಣಿಕೆಯ ಸಮಸ್ಯೆ ಹಾಗೂ ನಟಿಯರ ವೈಯಕ್ತಿಕ ಬದ್ಧತೆಗಳಿಂದಾಗಿ ಚಿತ್ರದ ಕೆಲಸಗಳು ಸ್ವಲ್ಪ ವಿಳಂಬವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *