ಮಂಡ್ಯ, ಜೂನ್ 21: ಮೇಕೆದಾಟು ಯೋಜನೆಗೆ ತಮಿಳುನಾಡು ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಮತ್ತು ಸುತ್ತಮುತ್ತ ಕುಡಿಯುವ ನೀರಿಗಾಗಿ ಮಾಡಲಾಗುತ್ತಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ಸಹಮತ ಕೊಡಬೇಕು.ರಾಜಕೀಯ, ಪ್ರತಿಷ್ಠೆಗಾಗಿ ಅಲ್ಲಿನ ಪಕ್ಷಗಳು ದಬ್ಬಾಳಿಕೆ ಮಾಡಬಾರದು. ಈ ಕ್ಯಾತೆ 50 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಉತ್ತಮ ಮಳೆಯಾದಾಗ ಕರ್ನಾಟಕವು ನ್ಯಾಯಮಂಡಳಿ ಆದೇಶಕ್ಕಿಂತಲೂ ಎರಡು ಪಟ್ಟು ಹೆಚ್ಚು ನೀರನ್ನು ಬಿಡುಗಡೆ ಮಾಡಿದೆ. ಆದರೆ ನಮ್ಮಲ್ಲಿಯೇ ಜಲಾಶಯಗಳು ಭರ್ತಿಯಾಗದಿದ್ದಾಗಲೂ ನೀರಿಗಾಗಿ ಒತ್ತಾಯಿಸುವುದು ಸೂಕ್ತವಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.