Headlines

ಮೇಜರ್ ಸರ್ಜರಿ… ಟೀಮ್ ಇಂಡಿಯಾದಿಂದ ಕೋಚ್​ ಒಬ್ಬರಿಗೆ ಗೇಟ್​ ಪಾಸ್! – Kannada News | Team India is likely to undergo a coaching reset,

ಟೀಮ್ ಇಂಡಿಯಾ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಭಾರತ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ. ಈ ಬದಲಾವಣೆಯೊಂದಿಗೆ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಸಪೋರ್ಟ್ ಸ್ಟಾಫ್ ಪೈಕಿ ಕನಿಷ್ಠ ಒಬ್ಬರು ತಂಡದಿಂದ ಹೊರಬೀಳಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಎದುರಾದ ಐತಿಹಾಸಿಕ ಸೋಲು ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿನ ಕಳಪೆ ಪ್ರದರ್ಶನಗಳ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಜುಲೈ 19 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯಗೊಂಡ ತಕ್ಷಣವೇ ಬಿಸಿಸಿಐ ಮಹತ್ವದ ಪ್ರದರ್ಶನ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಯ ಬಳಿಕ ಕೋಚಿಂಗ್ ಸಿಬ್ಬಂದಿಯನ್ನು ಕೈ ಬಿಡುವ ಬಗ್ಗೆ ಪ್ರಕಟಣೆ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಡ್ರೆಸ್ಸಿಂಗ್ ರೂಮ್​ನಲ್ಲಿ ಭಿನ್ನಾಭಿಪ್ರಾಯ?

ತಂಡದ ಒಳಗೆ ತಾಂತ್ರಿಕ ಮತ್ತು ತಂತ್ರಗಾರಿಕೆಯ ವಿಷಯಗಳಲ್ಲಿ ಕೋಚಿಂಗ್ ಸಿಬ್ಬಂದಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ವರದಿಗಳು ತಿಳಿಸಿವೆ. ಇದೇ ಕಾರಣದಿಂದಾಗಿ ಕೋಚಿಂಗ್ ಸಿಬ್ಬಂದಿಯನ್ನು ಬದಲಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

2024ರಲ್ಲಿ ಗೌತಮ್ ಗಂಭೀರ್ ಜೊತೆಗೆ 2+1 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಸಪೋರ್ಟ್ ಸ್ಟಾಫ್ ಪೈಕಿ ಪ್ರಮುಖ ಕೋಚ್ ಒಬ್ಬರು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಐಪಿಎಲ್ ಫ್ರಾಂಚೈಸಿಯೊಂದರ ಜೊತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅವರ ಆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಗಳು:

  • ಗೌತಮ್ ಗಂಭೀರ್– ಮುಖ್ಯ ಕೋಚ್
  • ರಿಯಾನ್ ಟೆನ್ ಡೊಶ್ಚಾಟೆ – ಸಹಾಯಕ ಕೋಚ್
  • ಮೋರ್ನೆ ಮೋರ್ಕೆಲ್– ವೇಗದ ಬೌಲಿಂಗ್ ಕೋಚ್
  • ಸಾಯಿರಾಜ್ ಬಹುತುಲೆ– ಸ್ಪಿನ್ ಬೌಲಿಂಗ್ ಕೋಚ್
  • ಸಿತಾಂಶು ಕೋಟಕ್– ಬ್ಯಾಟಿಂಗ್ ಕೋಚ್
  • ಟಿ. ದಿಲೀಪ್– ಫೀಲ್ಡಿಂಗ್ ಕೋಚ್

ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಕಂಡು ಸರಣಿ ಕೈಚೆಲ್ಲಿದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಿಯಾನ್ ಟೆನ್ ಡೊಶ್ಚಾಟೆ , ಟೀಮ್ ಇಂಡಿಯಾದ ಪ್ರದರ್ಶನದ ವಿಮರ್ಶಿಸಿದ್ದರು.

ಪ್ರಸ್ತುತ ಟಿ20 ವಿಶ್ವಚಾಂಪಿಯನ್ ಆಗಿರುವ ಭಾರತ ತಂಡವು, ವಿದೇಶಿ ಮಣ್ಣಿನಲ್ಲಿ ಅನುಭವಿಸುತ್ತಿರುವ ಸರಣಿ ಸೋಲುಗಳಿಂದಾಗಿ, ಇದೀಗ ವಿದೇಶಿ ಪಿಚ್​ನಲ್ಲಿ ​”ಕಡಿಮೆ ಸಾಧನೆ ಮಾಡುವವರು” ಎಂಬ ಹಣೆಪಟ್ಟಿ ಹೊಂದಿದೆ. ಇದನ್ನು ಮೊದಲು ಕಳಚಬೇಕಾದ ತುರ್ತು ಅಗತ್ಯವಿದೆ ಎಂದು ರಿಯಾನ್ ಟೆನ್ ಡೊಶ್ಚಾಟೆ ಹೇಳಿದ್ದರು.

ಭಾರತದ ಫ್ಲ್ಯಾಟ್ ಪಿಚ್‌ಗಳಲ್ಲಿ ರನ್ ಮಳೆ ಹರಿಸುವ ಬ್ಯಾಟರ್‌ಗಳು, ಐರ್ಲೆಂಡ್ ಮತ್ತು ಇಂಗ್ಲೆಂಡ್‌ನ ಸೀಮ್-ಫ್ರೆಂಡ್ಲಿ  ಮತ್ತು ತೇವಾಂಶಭರಿತ ಪಿಚ್‌ಗಳ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಟೆನ್ ಡೊಶ್ಚಾಟೆ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಲಾರ್ಡ್ಸ್ ಮೈದಾನದಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ

ಈ ಹೇಳಿಕೆಗಳು ಟೆನ್ ಡೊಶ್ಚಾಟೆ ಪಾಲಿಗೆ ಮುಳುವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಹೀಗಾಗಿ ಗೌತಮ್ ಗಂಭೀರ್ ಕೋಚಿಂಗ್ ಬಳಗದಿಂದ ರಿಯಾನ್ ಟೆನ್ ಡೊಶ್ಚಾಟೆ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.

Source link

Leave a Reply

Your email address will not be published. Required fields are marked *