Headlines

ಮೊಬೈಲ್ ಗೇಮಿಂಗ್ ಚಟ; ದುಬಾರಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ – Kannada News | Actor Shakeela Undergoes Rs 3 Lakh Neck Surgery Due to Mobile Gaming Habit

ಖ್ಯಾತ ನಟಿ ಶಕೀಲಾ (Shakeela) ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಇತ್ತೀಚೆಗೆ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅತಿಯಾದ ಮೊಬೈಲ್ ಬಳಕೆಯೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಆರೋಗ್ಯ ಪರಿಸ್ಥಿತಿಯ ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ನೆಕ್ ಕಾಲರ್ ಬಳಸಲು ವೈದ್ಯರು ಸೂಚಿಸಿದ್ದಾರೆ. ವಿಡಿಯೋದಲ್ಲಿ ಅವರು ನೆಕ್ ಕಾಲರ್ ಧರಿಸಿ ಕಾಣಿಸಿಕೊಂಡಿದ್ದಾರೆ. ಹಾಸಿಗೆಯಲ್ಲಿ ಸತತವಾಗಿ ಒಂದು ಮಗ್ಗಲಿಗೆ ಮಲಗಿ ಮೊಬೈಲ್ ಗೇಮ್ ಆಡುತ್ತಿದ್ದರು. ಇದರಿಂದ ಅವರ ಕುತ್ತಿಗೆಯ ಮುಖ್ಯ ನರಗಳಿಗೆ ತೊಂದರೆಯಾಯಿತು. ಪರಿಣಾಮವಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಶಸ್ತ್ರಚಿಕಿತ್ಸೆಗೆ 3 ಲಕ್ಷ ರೂಪಾಯಿ ವೆಚ್ಚವಾಗಿದೆ.

ತಮ್ಮ ವೀಡಿಯೊದಲ್ಲಿ ಶಕೀಲಾ ಸ್ವತಃ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಹಾಸಿಗೆಯಿಂದ ಏಳಲು ಮತ್ತು ಆಹಾರ ಸೇವಿಸಲು ಸಹಾಯ ಬೇಕಾಗಿದೆ ಎಂದಿದ್ದಾರೆ. ‘ನನಗೆ ಇತ್ತೀಚೆಗೆ ದೊಡ್ಡ ಶಸ್ತ್ರಚಿಕಿತ್ಸೆ ನಡೆದಿದೆ. ಫೋನ್ ತುಂಬಾ ಉಪಯುಕ್ತ ವಸ್ತುವಾಗಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ’ ಎಂದು ಶಕೀಲಾ ಎಚ್ಚರಿಸಿದ್ದಾರೆ.

‘ನಾನು ಹಾಸಿಗೆಯಲ್ಲಿ ಮಲಗಿ ನಾಲ್ಕು ಗಂಟೆ ಕಾಲ ಗೇಮ್ ಆಡುತ್ತಿದ್ದೆ. ಕಾಫಿ ಕುಡಿಯಲು ಮಾತ್ರ ಎದ್ದು ಬರುವೆ. ನಂತರ ಮತ್ತೆ ಗೇಮ್ ಆಡಲು ಶುರು ಮಾಡುತ್ತಿದ್ದೆ. ಆ ಬಳಿಕ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುತ್ತಿದ್ದೆ. ತಪ್ಪಾದ ಭಂಗಿ ಮತ್ತು ಅತಿಯಾದ ಫೋನ್ ಬಳಕೆ ನರಗಳ ಮೇಲೆ ಪ್ರಭಾವ ಬೀರಿದೆ. ಇದು ನನ್ನನ್ನು ಶಸ್ತ್ರಚಿಕಿತ್ಸೆಯ ಕೊಠಡಿಗೆ ಕರೆದೊಯ್ಯಿತು’ ಎಂದು ಶಕೀಲಾ ವಿವರಿಸಿದ್ದಾರೆ.

ಮಕ್ಕಳಿಗೆ ಫೋನ್ ನೀಡದಂತೆ ಹೆತ್ತವರಿಗೆ ಅವರು ಸಲಹೆ ನೀಡಿದ್ದಾರೆ. ‘ಅಗತ್ಯ ಕೆಲಸಗಳಿಗೆ ಮಾತ್ರ ಫೋನ್ ಬಳಸಿ. ಅನಗತ್ಯ ವೀಡಿಯೊಗಳನ್ನು ನೋಡಬೇಡಿ. ಇಲ್ಲದಿದ್ದರೆ 3 ಲಕ್ಷ ರೂಪಾಯಿ ಕಳೆದುಕೊಳ್ಳುತ್ತೀರಿ. ಜೊತೆಗೆ ತಡೆಯಲಾಗದ ನೋವು ಅನುಭವಿಸಬೇಕಾಗುತ್ತದೆ’ ಎಂದು ಶಕೀಲಾ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಡಲು ರೆಡಿ ಆದ ಶಕೀಲಾ; ಸಿಗುತ್ತಿದೆ ಭರ್ಜರಿ ಸಂಭಾವನೆ

ಆಂಧ್ರಪ್ರದೇಶದ ನೆಲ್ಲೂರು ಮೂಲದ ಶಕೀಲಾ ‘ಕಿನ್ನಾರತುಂಬಿಗಳು’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಹುದೊಡ್ಡ ಯಶಸ್ಸು ಕಂಡಿತು. ಆ ಬಳಿಕ ಅವರು ಪ್ರಸಿದ್ಧ ನಟಿಯಾಗಿದರು. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಕೆಂಪ’, ‘ಶ್ರೀ’, ‘ಲವ್ ಯೂ ಆಲಿಯಾ’ ಮೊದಲಾದ ಸಿನಿಮಾಗಳಲ್ಲಿಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *