
ನವದೆಹಲಿ, ಏಪ್ರಿಲ್ 11: ಪಶ್ಚಿಮ ಬಂಗಾಳದ ಪುರ್ಬಾ ವರ್ಧಮಾನ್ನಲ್ಲಿ ತಮ್ಮ ರ್ಯಾಲಿಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನರನ್ನು ಉದ್ದೇಶಿಸಿ ಒಂದು ವಿಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಮೂಲಕ ಪ್ರಧಾನಿ ಮೋದಿ (PM Modi) ವ್ಲಾಗರ್ ಆಗಿ ಬದಲಾಗಿದ್ದಾರೆ. ಪಶ್ಚಿಮ ಬಂಗಾಳದ ಹೆಲಿಪ್ಯಾಡ್ನಲ್ಲಿ ನೆರೆದಿದ್ದ ದೊಡ್ಡ ಜನಸಮೂಹವನ್ನು ಅದ್ಭುತ ದೃಶ್ಯ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಬಿಸಿಲಿನ ಬೇಗೆಯ ಹೊರತಾಗಿಯೂ ಜನರ ಉತ್ಸಾಹ ಕಡಿಮೆಯಾಗದೆ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಬಿಸಿಲಿನ ಬೇಗೆಯ ಹೊರತಾಗಿಯೂ ಮಧ್ಯಾಹ್ನಕ್ಕೂ ಮೊದಲೇ ಹೆಲಿಪ್ಯಾಡ್ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಇದು ಈ ದಿನದ ಮೋದಿಯವರ ಮೊದಲ ಸಭೆಯಾಗಿದ್ದು, ಅವರು ಸ್ಥಳಕ್ಕೆ ಬರುವ ಮೊದಲೇ ಹೆಚ್ಚಿನ ಸಂಖ್ಯೆಯ ಜನರು ಅವರಿಗಾಗಿ ಕಾಯುತ್ತಿದ್ದರು ಎಂಬುದನ್ನು ಮೋದಿ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ರೀತಿ ಮೋದಿ ತಮ್ಮ ಚುನಾವಣಾ ರ್ಯಾಲಿಯ ನೇರಪ್ರಸಾರ ಮಾಡುತ್ತಾ, ಲೈವ್ ಕಮೆಂಟರಿ ನೀಡಿದ್ದು ಇದೇ ಮೊದಲು. ಈ ಮೂಲಕ ಪ್ರಧಾನಿ ಮೋದಿ ಹೊಸ ಪ್ರಯೋಗ ಮಾಡಿದ್ದಾರೆ.
ಇದನ್ನೂ ಓದಿ: ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ
ಪುರ್ಬಾ ಬರ್ಧಮಾನ್ನಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಗೆ ಮುನ್ನ ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಸಣ್ಣ ವೀಡಿಯೊ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಭಾರೀ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ