Headlines

ಮೌಂಟ್ ಎವರೆಸ್ಟ್ ಏರಿದ ಬೆಂಗಳೂರಿನ ಪರ್ವತಾರೋಹಿಗಳು: ಕೆಎಂಎ 60ನೇ ವರ್ಷಾಚರಣೆ ಪ್ರಯುಕ್ತ ಸಾಧನೆ – Kannada News | Bengaluru Duo Scales Mount Everest: Santhosh Devarajappa and Dr Chinmayee Thrishulamurthy Conquered World’s Highest Peak

ಮೌಂಟ್ ಎವರೆಸ್ಟ್ ತುತ್ತತುದಿಯಲ್ಲಿ ಡಾ. ಚಿನ್ಮಯಿ ತ್ರಿಶೂಲಮೂರ್ತಿ, ಸಂತೋಷ್ ದೇವರಾಜಪ್ಪ ಸಂಭ್ರಮದ ಕ್ಷಣImage Credit source: The New Indian Express

ಬೆಂಗಳೂರು, ಮೇ 25: ಕರ್ನಾಟಕ (Karnataka) ಪರ್ವತಾರೋಹಣ ಸಂಸ್ಥೆಯ (KMA) 60ನೇ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲಿ ಬೆಂಗಳೂರಿನ ಇಬ್ಬರು ಸಾಹಸಿಗಳು ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬೆಂಗಳೂರು ಮೂಲದ 40 ವರ್ಷದ ಉದ್ಯಮಿ ಸಂತೋಷ್ ದೇವರಾಜಪ್ಪ ಮತ್ತು 45 ವರ್ಷದ ನೇತ್ರ ತಜ್ಞೆ (Ophthalmologist) ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರೇ ಈ ಅಪೂರ್ವ ಸಾಧನೆ ಮಾಡಿದವರು. ನೇಪಾಳದ ಆಗ್ನೇಯ ಸೌತ್ ಕೋಲ್ ಮಾರ್ಗದ ಮೂಲಕ ಇವರಿಬ್ಬರು ಮೇ 21ರಂದು ಮಧ್ಯಾಹ್ನ 12:10ಕ್ಕೆ 29,031 ಅಡಿ ಎತ್ತರದ ಎವರೆಸ್ಟ್ ಶಿಖರದ ತುತ್ತತುದಿಯನ್ನು ತಲುಪಿದ್ದಾರೆ.

ಮುಖ್ಯಾಂಶಗಳು

  • ಎವರೆಸ್ಟ್ ಶಿಖರ ಏರಿ ಬೆಂಗಳೂರಿಗರ ಸಾಧನೆ.
  • ಕರ್ನಾಟಕ ಪರ್ವತಾರೋಹಣ ಸಂಸ್ಥೆಯ 60ನೇ ವರ್ಷಾಚರಣೆ ಪ್ರಯುಕ್ತ ಚಾರಣ.
  • 46 ದಿನಗಳ ಜರ್ನಿ ಬಳಿಕ ಎವರೆಸ್ಟ್ ಏರಿದ ಉದ್ಯಮಿ ಹಾಗೂ ವೈದ್ಯೆ.

46 ದಿನಗಳ ಕಠಿಣ ಸವಾಲಿನ ಯಾನ

ಈ ಇಬ್ಬರು ಪರ್ವತಾರೋಹಿಗಳು ಏಪ್ರಿಲ್ 4 ರಂದು ಬೆಂಗಳೂರಿನಿಂದ ಸಾಹಸಯಾತ್ರೆ ಆರಂಭಿಸಿದ್ದರು. ಕಠಿಣ ಹವಾಮಾನಕ್ಕೆ ದೇಹವನ್ನು ಒಗ್ಗಿಸಿಕೊಳ್ಳುವ (Acclimatisation) ಭಾಗವಾಗಿ ಇವರು ಮೊದಲು ಏಪ್ರಿಲ್ 22 ರಂದು 20,070 ಅಡಿ ಎತ್ತರದ ಲೋಬುಚೆ ಈಸ್ಟ್ ಶಿಖರವನ್ನು ಏರಿದ್ದರು. ತದನಂತರ ಕಠಿಣ ಸವಾಲುಗಳನ್ನು ಎದುರಿಸಿ 46 ದಿನಗಳ ಸುದೀರ್ಘ ಪರಿಶ್ರಮದ ಬಳಿಕ ಮೌಂಟ್ ಎವರೆಸ್ಟ್ ಏರಿದ್ದಾರೆ. ಈ ಐತಿಹಾಸಿಕ ಪರ್ವತಾರೋಹಣಕ್ಕೆ ಮಾರ್ಚ್ 9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗ ಚಾಲನೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ: ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್!

ಕರ್ನಾಟಕ ಪರ್ವತಾರೋಹಣ ಸಂಸ್ಥೆಯು60 ವರ್ಷಗಳ ಯಶಸ್ವಿ ಪಯಣದಲ್ಲಿ ಇದುವರೆಗೆ 20,000ಕ್ಕೂ ಹೆಚ್ಚು ಸದಸ್ಯರಿಗೆ ತರಬೇತಿ ನೀಡಿದೆ. ಇದೀಗ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿಗರು ಎವರೆಸ್ಟ್ ಏರಿ ಸಾಧನೆ ಮಾಡಿದ್ದು, ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಸದ್ಯ ಈ ಪರ್ವತಾರೋಹಿಗಳ ಸಾಧನೆಗೆ ರಾಜ್ಯಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *