Headlines

ಯಶ್ ಅಭಿಮಾನಿಗಳಿಗೆ ಶುರುವಾಗಿದೆ ಸಿಬಿಎಫ್​​ಸಿ ಭಯ – Kannada News | Toxic movie teaser released, Yash fans worried about CBFC

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಜುಲೈ 01) ಬಿಡುಗಡೆ ಆಗಿದೆ. ಇಂದು ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಿನಿಮಾದ ನಟಿಯರ ಬಗ್ಗೆ ಪರಿಚಯ ನೀಡಲಾಗಿದೆ. ನಟಿಯರ ಪಾತ್ರಗಳ ಸಣ್ಣ ಗ್ಲಿಂಪ್ಸ್ ತೋರಿಸಲಾಗಿದೆ. ಆದರೆ ಈ ಟೀಸರ್​​ನಲ್ಲಿಯೂ ಸಹ ಲೈಂಗಿಕತೆಯ ದೃಶ್ಯಗಳು ಹಲವು ಇವೆ. ಯಶ್ ಪಾತ್ರ, ಬೇರೆ ಬೇರೆ ಯುವತಿಯರೊಟ್ಟಿಗೆ ‘ಕ್ರೀಡೆ’ಯಲ್ಲಿ ತೊಡಗಿರು ದೃಶ್ಯಗಳು ಟೀಸರ್​​ನಲ್ಲಿ ಬಂದು ಹೋಗುತ್ತಲೇ ಇರುತ್ತವೆ. ಮಾತ್ರವಲ್ಲದೆ, ಟೀಸರ್​​ನ ಹಿನ್ನೆಲೆ ಧ್ವನಿಯಲ್ಲೂ ಸಹ ಲೈಂಗಿಕತೆಗೆ ಸಂಬಂಧಿಸಿದ ಕೆಲ ಸಂಭಾಷಣೆಗಳು ಇವೆ. ‘ಟೀಸರ್’ ಇಷ್ಟವಾಗಿದೆಯಾದರೂ ಸಿಬಿಎಫ್​​ಸಿ ಬಗ್ಗೆ ಭಯ ಯಶ್ ಅಭಿಮಾನಿಗಳಿಗೆ ಶುರುವಾಗಿದೆ.

ಸಿಬಿಎಫ್​​ಸಿ, ಇತ್ತೀಚೆಗಿನ ದಿನಗಳಲ್ಲಿ ತೀರ ಕಟುವಾಗಿ ವರ್ತಿಸುತ್ತಿದೆ. ಹೀಗಿರುವಾಗ ‘ಟಾಕ್ಸಿಕ್’ ಸಿನಿಮಾನಲ್ಲಿ ಹಲವು ಲೈಂಗಿಕತೆ ದೃಶ್ಯಗಳಿವೆ, ಸಂಭಾಷಣೆಗಳಿವೆ, ತೀರ ವೈಯಲೆಂಟ್ ಆದ ಆಕ್ಷನ್ ದೃಶ್ಯಗಳು ಸಹ ಇವೆ. ಹೀಗಿರುವಾಗ ಸಿಬಿಎಫ್​​ಸಿ ಇವಕ್ಕೆಲ್ಲ ಬಿಡದೆ ಕತ್ತರಿ ಹಾಕಲಿದೆ. ಯಶ್ ಅವರು ತಮ್ಮ ಸಿನಿಮಾದ ಹಲವು ಭಾಗಗಳನ್ನು ಕತ್ತರಿಸಬೇಕಾಗಿ ಬರಬಹುದು ಎಂಬ ಭೀತಿ ಯಶ್ ಅಭಿಮಾನಿಗಳಿಗೆ ಈಗಾಗಲೇ ಶುರುವಾಗಿದೆ.

ಈ ಹಿಂದೆ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದ್ದಾಗಲೇ ಕೆಲವರು ಸಿಬಿಎಫ್​​ಸಿಗೆ ಈ ಬಗ್ಗೆ ದೂರು ನೀಡಿದ್ದರು. ಮೊದಲ ಟೀಸರ್​​ನಲ್ಲಿ ಕಾರಿನಲ್ಲಿ ಯಶ್ ಯುವತಿಯೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗಿಕೊಂಡಿರುವ ದೃಶ್ಯ ಇತ್ತು, ಅದರ ವಿರುದ್ಧ ಸಿಬಿಎಫ್​​ಸಿಗೆ ಪತ್ರ ಬರೆದು ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಲಾಗಿತ್ತು. ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು. ಈಗ ಬಿಡುಗಡೆ ಆಗಿರುವ ಎರಡನೇ ಟೀಸರ್​​ನಲ್ಲೂ ಅದು ಮುಂದುವರೆದಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಶಾರುಖ್ ಖಾನ್ ಸಿನಿಮಾವನ್ನು ಹಿಂದಿಕ್ಕಿದ ಯಶ್ ಸಿನಿಮಾಗಳು

ಗೀತು ಮೋಹನ್​​ದಾಸ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ನಟಿಸಿರುವ ನಟಿಯರು ಬೇರೆ ಬೇರೆ ಸಂದರ್ಶನಗಳಲ್ಲಿ ಮಾತನಾಡಿರುವಂತೆ ‘ಟಾಕ್ಸಿಕ್’ ಮಹಿಳಾ ಪ್ರಧಾನ ಸಿನಿಮಾ. ಟೀಸರ್​​ನಲ್ಲಿ ತೋರಿಸಿರುವುದಕ್ಕೂ ಸಿನಿಮಾದ ಮುಖ್ಯ ಆಶಯಕ್ಕೂ ಯಾವುದೇ ಸಂಬಂಧ ಇಲ್ಲ. ನಾಯಕಿಯರೇ ಪ್ರಧಾನವಾಗಿರುವ ಕತೆಯನ್ನು ಸಿನಿಮಾ ಒಳಗೊಂಡಿದೆಯಂತೆ. ಆದರೆ ಈ ವರೆಗೆ ಬಿಡುಗಡೆ ಆಗಿರುವ ಟೀಸರ್​​ ಬೇರೆಯದ್ದೇ ಕತೆಯನ್ನು ಹೇಳುತ್ತಿವೆ. ಸಿನಿಮಾನಲ್ಲಿ ಐವರು ನಾಯಕಿಯರಿದ್ದಾರೆ. ನಯನತಾರಾ. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್. ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾ ಆಗಸ್ಟ್ರರ 24ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:50 pm, Wed, 1 July 26

Source link

Leave a Reply

Your email address will not be published. Required fields are marked *