ಬೆಂಗಳೂರು, ಆಗಸ್ಟ್ 08: ನಟ ಯಶ್ ಅಭಿನಯದ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದ ಬಹು ತಾರಾಗಣವಿರುವ ‘ಟಾಕ್ಸಿಕ್’ (Toxic) ಚಿತ್ರದ ಟ್ರೇಲರ್ ಇಂದು ಬಿಡುಗಡೆ ಆಗಿದೆ. ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ನೋಡಿ ಬಳಿಕ ಮಾತನಾಡಿದ ಶಿವಣ್ಣ, ‘ಅದ್ಭುತವಾಗಿ ಮೂಡಿಬಂದಿದೆ. ನಾನು ಕೂಡ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನೇ ಸಿನಿಮಾ ಮಾಡಿದಷ್ಟು ಸಂತೋಷವಾಯ್ತು. ಯಶ್ ಈ ಮಟ್ಟಕ್ಕೆ ಬೆಳೆದು ಇಷ್ಟು ದೊಡ್ಡ ಸಿನಿಮಾ ಮಾಡಿರುವುದು ಕನ್ನಡಿಗರಾಗಿ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯಶ್ ನನ್ನ ಸ್ವಂತ ಸಹೋದರ ಇದ್ದಂತೆ, ಅವರು ಬೆಳೆಯುತ್ತಿರುವುದನ್ನು ಕಂಡು ನನಗೆ ಸಂತೋಷವಾಯಿತು’ ಎಂದರು.
ಮತ್ತಷ್ಟು ಸಿನಿಮಾ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.