ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ (Yash) ಮೊದಾದವರು ನಟಿಸಿರೋ ‘ರಾಮಾಯಣ’ ಸಿನಿಮಾದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಹನುಮಂತ ಜಯಂತಿ ಪ್ರಯುಕ್ತ ಟೀಸರ್ ತೆರೆಗೆ ಬಂದಿದೆ. ಈ ಸಿನಿಮಾದ ಟೀಸರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ. ಆದರೆ, ಮಹೇಶ್ ಬಾಬು ಹಾಗೂ ರಾಜಮೌಳಿ ಅಭಿಮಾನಿಗಳು ಮಾತ್ರ ನೆಗೆಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

‘ರಾಮಾಯಣ’ ಸಿನಿಮಾದ ಮೊದಲ ಭಾಗ ಈ ಬಾರಿ ದೀಪಾವಳಿಗೆ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾ ಎಷ್ಟು ರಿಚ್ ಆಗಿರಲಿದೆ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಟೀಸರ್​ ಅಲ್ಲಿ ಗ್ರಾಫಿಕ್ಸ್ ಗಮನ ಸೆಳೆದಿದೆ. ರಾಮನಾಗಿ ರಣಬೀರ್ ಕಪೂರ್ ಗಮನ ಸೆಳೆದಿದ್ದಾರೆ. ಅವರ ಪಾತ್ರ ಮಾತ್ರ ಹೈಲೈಟ್ ಆಗಿದೆ. ಸೀತೆಯನ್ನು ದೂರದಿಂದ ಹಾಗೂ ರಾವಣನ ಪಾತ್ರವನ್ನು ಹಿಂಭಾಗದಿಂದ ತೋರಿಸಲಾಗಿದೆ.

ಇದನ್ನೂ ಓದಿ: ‘ರಾಮಾಯಣ’ ಟೀಸರ್ ಅಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿದೆ ಫೋಟೋಸ್

ಟೀಸರ್ ಇಷ್ಟು ಮೆಚ್ಚುಗೆ ಪಡೆದರೂ ಮಹೇಶ್ ಬಾಬು ಅಭಿಮಾನಿಗಳು ಅಸಮಾಧಾನಗೊಂಡಿದ್ದೇಕೆ? ಆ ಪ್ರಶ್ನೆಗೂ ಉತ್ತರ ಇದೆ. ಮಹೇಶ್ ಬಾಬು ಅವರು ರಾಜಮೌಳಿ ಜೊತೆ ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ‘ರಾಮಾಯಣ’ ಕಥೆಯನ್ನು ಆಧರಿಸಿ ಇರಲಿದೆಯಂತೆ. ಅದಕ್ಕೂ ಮೊದಲೇ ‘ರಾಮಾಯಣ’ ಚಿತ್ರ ಒಂದು ತೆರೆಗೆ ಬರುತ್ತಿರುವುದು ‘ವಾರಣಾಸಿ’ಗೆ ಹಿನ್ನಡೆ ಆಗಬಹುದು ಎಂಬದು ಮಹೇಶ್ ಬಾಬು ಹಾಗೂ ರಾಜಮೌಳಿ ಫ್ಯಾನ್ಸ್ ಲೆಕ್ಕಾಚಾರ.

‘ಮಹೇಶ್ ಬಾಬು ಮತ್ತು ರಾಜಮೌಳಿ ಅಭಿಮಾನಿಗಳಿಗೆ ನಿದ್ದೆಯಿಲ್ಲದ ರಾತ್ರಿಗಳು ಬರಲಿವೆ. ಅವರು ನಿಜಕ್ಕೂ ಅಳುತ್ತಿದ್ದಾರೆ. ‘ವಾರಣಾಸಿ’ ಸಿನಿಮಾನ ಈ ಚಿತ್ರ ಮೀರಿಸುತ್ತದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಮಹೇಶ್ ಬಾಬು ಅಭಿಮಾನಿಗಳು ಉದ್ದೇಶಪೂರ್ವಕವಾಗಿ ಟೀಸರ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *