Headlines

ಯಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್ – Kannada News | Jannik sinner wimbledon champion in 2026

2026ರ ವಿಂಬಲ್ಡನ್​ ಟೆನಿಸ್ ಚಾಂಪಿಯನ್​​ಶಿಪ್​ನಲ್ಲಿ ವಿಶ್ವದ ನಂ. 1 ಟೆನಿಸ್ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್‌​ ಕೋರ್ಟ್​ನಲ್ಲಿ​ ಭಾನುವಾರ (ಜುಲೈ 12, 2026) ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಅವರನ್ನು ಮಣಿಸಿ, ಸತತ ಎರಡನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ನಾಲ್ಕು ಸೆಟ್​​ಗಳಲ್ಲಿ ಪಂದ್ಯ ಅಂತ್ಯ:

ನಾಲ್ಕು ಸೆಟ್‌ಗಳ ಕಾಲ ನಡೆದ ಈ ರೋಚಕ ಹೋರಾಟದಲ್ಲಿ ಯಾನಿಕ್ ಸಿನ್ನರ್ 6–7(7), 7–6(2), 6–3, 6–4 ಸೆಟ್‌ಗಳಿಂದ ಝ್ವೆರೆಫ್ ವಿರುದ್ಧ ಜಯಭೇರಿ ಬಾರಿಸಿದರು.

ಸುಮಾರು 3 ಗಂಟೆ 46 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ, ಮೊದಲ ಸೆಟ್ ಸೋತರೂ ಅದ್ಭುತವಾಗಿ ಪುನರಾಗಮನ ಮಾಡಿದ ಸಿನ್ನರ್, ಝ್ವೆರೆಫ್ ವಿರುದ್ಧ ಸತತ 10ನೇ ಜಯ ದಾಖಲಿಸಿದರು.

  • ಮೊದಲ ಸೆಟ್: 6–7(7)- ಅಲೆಕ್ಸಾಂಡರ್ ಝ್ವೆರೆಫ್​ಗೆ ಜಯ
  • ಎರಡನೇ ಸೆಟ್: 7–6(2)- ಯಾನಿಕ್ ಸಿನ್ನರ್​ಗೆ ಜಯ
  • ಮೂರನೇ ಸೆಟ್: 6–3- ಯಾನಿಕ್ ಸಿನ್ನರ್​ಗೆ ಜಯ
  • ನಾಲ್ಕನೇ ಸೆಟ್: 6–4- ಯಾನಿಕ್ ಸಿನ್ನರ್​ಗೆ ಜಯ

ಸಿನ್ನರ್ ಸಾಧನೆ:

  • ಸತತ ಎರಡನೇ ಪ್ರಶಸ್ತಿ: ವಿಂಬಲ್ಡನ್ ಇತಿಹಾಸದಲ್ಲಿ (ಓಪನ್ ಎರಾ) ಸತತವಾಗಿ ಎರಡು ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೇವಲ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸಿನ್ನರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2025 ರಲ್ಲಿ ಸಿನ್ನರ್ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
  • 5ನೇ ಗ್ರಾಂಡ್ ಸ್ಲಾಮ್: ಇದು ಸಿನ್ನರ್ ವೃತ್ತಿಜೀವನದ 5ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, 2026ರ ಸಾಲಿನ ಅವರ ಮೊದಲ ಮೇಜರ್ ಪ್ರಶಸ್ತಿಯಾಗಿದೆ.
  •  100ನೇ ಜಯದ ಸಂಭ್ರಮ: ಈ ಗೆಲುವಿನೊಂದಿಗೆ ಯಾನಿಕ್ ಸಿನ್ನರ್ ಗ್ರಾಂಡ್ ಸ್ಲಾಮ್ ಇತಿಹಾಸದಲ್ಲಿ ತಮ್ಮ 100ನೇ ಪಂದ್ಯದ ಗೆಲುವು ಸಾಧಿಸಿದ್ದಾರೆ.

ಚಾಂಪಿಯನ್ ಕಂಬ್ಯಾಕ್:

ಫ್ರೆಂಚ್ ಓಪನ್‌ನಲ್ಲಿ ಬೇಗನೆ ಹೊರಬಿದ್ದಿದ್ದ ಯಾನಿಕ್ ಸಿನ್ನರ್, ಈ ಬಾರಿ ಯಾವುದೇ ಗ್ರಾಸ್-ಕೋರ್ಟ್ ಅಭ್ಯಾಸ ಪಂದ್ಯಗಳನ್ನು ಆಡದೆ ನೇರವಾಗಿ ವಿಂಬಲ್ಡನ್‌ಗೆ ಬಂದಿದ್ದರು. ಆರಂಭಿಕ ಸುತ್ತಿನಲ್ಲಿ ಮಿಯೋಮಿರ್ ಕೆಕ್ಮನೋವಿಕ್ ವಿರುದ್ಧ 5 ಸೆಟ್‌ಗಳ ಕಠಿಣ ಹೋರಾಟ ಎದುರಿಸಿದ ಅವರು, ಸೆಮಿಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

ಇದನ್ನೂ ಓದಿ: ಗೆಳೆತಿಯನ್ನು ಸೋಲಿಸಿ ವಿಂಬಲ್ಡನ್ ಕಿರೀಟ ಗೆದ್ದ ಲಿಂಡಾ ನೊಸ್ಕೋವಾ!

ಇತ್ತ ನೊವಾಕ್ ಜೊಕೊವಿಚ್ ಅವರಿಗೆ ಸೋಲುಣಿಸಿದ ಉತ್ಸಾಹದಲ್ಲೇ ಕಣಕ್ಕಿಳಿದಿದ್ದ ಯಾನಿಕ್ ಸಿನ್ನರ್ ಮೊದಲ ಸೆಟ್​ ಅನ್ನು ಹೊರತುಪಡಿಸಿ, ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಪರಿಣಾಮ ಮೊದಲ ಸೆಟ್ ಸೋತರೂ, ಆ ಬಳಿಕ ಬ್ಯಾಕ್ ಟು ಬ್ಯಾಕ್ 3 ಸೆಟ್​ಗಳನ್ನು ಗೆದ್ದು 2ನೇ ಬಾರಿ ವಿಂಬಲ್ಡನ್ ಅಂಗಳದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

Published On – 7:37 am, Mon, 13 July 26

Source link

Leave a Reply

Your email address will not be published. Required fields are marked *