ಯಾರೋ ಫಾಲೋ ಮಾಡ್ತಿದ್ದಾರೆ, ಪ್ಲೀಸ್ ಸಹಾಯ ಮಾಡಿ, ಕೆನಡಾದಲ್ಲಿ ಭಾರತೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಗ್ರೌಂಡ್​ಗೆ ಬಂದು ಸಹಾಯ ಬೇಡಿದ ಯುವತಿ – Kannada News

ಟೊರೊಂಟೊ, ಜೂನ್ 08: ಅಪರಿಚಿತ ದೇಶದಲ್ಲೂ ಮಾನವೀಯತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಭಾರತೀಯರು ನೀಡುವ ಗೌರವವನ್ನು ಸಾಬೀತುಪಡಿಸುವ ರೋಮಾಂಚನಕಾರಿ ಘಟನೆಯೊಂದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕೆನಡಾದ ತೆರೆದ ಮೈದಾನವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ಭಾರತೀಯ ಯುವಕರ ಗುಂಪು, ಸಂಕಷ್ಟದಲ್ಲಿದ್ದ ಸ್ಥಳೀಯ ಯುವತಿಯೊಬ್ಬಳನ್ನು ವ್ಯಕ್ತಿಯಿಂದ ಅತ್ಯಂತ ಧೈರ್ಯ ಹಾಗೂ ಚಾಣಾಕ್ಷತನದಿಂದ ರಕ್ಷಿಸಿ ಜಾಗತಿಕ ಮಟ್ಟದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

ಯುವತಿಯೊಬ್ಬರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಪುರುಷರ ಗುಂಪಿನ ಬಳಿಗೆ ಓಡಿಬಂದು ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ (Stalking) ಎಂದು ಹೇಳಿ ಸಹಾಯ ಕೋರುತ್ತಾರೆ. ತಕ್ಷಣವೇ ಅವಳನ್ನು ತಮ್ಮ ಬೆನ್ನ ಹಿಂದೆ ನಿಲ್ಲಿಸಿಕೊಂಡು ಆಟಗಾರರು ರಕ್ಷಣೆ ನೀಡುತ್ತಾರೆ. ಕೆಲವೇ ಕ್ಷಣಗಳಲ್ಲಿ, ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಬಿಳಿಯ ವ್ಯಕ್ತಿಯೊಬ್ಬ ಮೈದಾನ ಪ್ರವೇಶಿಸಿ ನೇರವಾಗಿ ಮಹಿಳೆಯ ಕಡೆಗೆ ಹೆಜ್ಜೆ ಇಡುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭಾರತೀಯ ಕ್ರಿಕೆಟಿಗರು ತಕ್ಷಣವೇ ಆ ವ್ಯಕ್ತಿಯನ್ನು ಎದುರಿಸಿ, ಅವನ ಮತ್ತು ಮಹಿಳೆಯ ನಡುವೆ ಭದ್ರವಾದ ಗೋಡೆಯಂತೆ ನಿಲ್ಲುತ್ತಾರೆ. ಬಳಿಕ ಗದರಿಸಿ ಆತನನ್ನು ಅಲ್ಲಿಂದ ಕಳುಹಿಸುತ್ತಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

Leave a Reply

Your email address will not be published. Required fields are marked *