Headlines

‘ಯಾವುದಕ್ಕೂ ತಲೆಕೆಡಿಸಿಕೊಳ್ಳದಿರುವುದು ನಮ್ಮ ಕೈಯಲ್ಲೇ ಇದೆ’; ತ್ರಿಷಾ – Kannada News | Trisha Krishnan’s Unbothered Post Goes Viral Amid Udhayanidhi Stalin Remarks Controversy

ನಟಿ ತ್ರಿಷಾ ಕೃಷ್ಣನ್ ಅವರು (Trisha) ಇತ್ತೀಚೆಗೆ ಫುಟ್​​ಬಾಲ್ ರೀತಿ ಆಗಿದ್ದಾರೆ. ಅವರ ಹೆಸರನ್ನು ಬೇಕಾದರವರು ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ವಿಜಯ್ ಹೆಸರನ್ನು ಮುಂದಿಟ್ಟುಕೊಂಡು ಅಣಕಿಸುತ್ತಿದ್ದಾರೆ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹೇಳಿಕೆ ಬೆನ್ನಲ್ಲೇ ತ್ರಿಷಾ ಅವರ ಹಳೆಯ ಮಾರ್ಮಿಪಕ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ತಂಜಾವೂರಿನ ಪ್ರತಿಭಟನೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದರು. ಈ ವೇಳೆ ಜನರು ತ್ರಿಷಾ ಹೆಸರು ಕೂಗಿದರು. ಆಗ ಉದಯನಿಧಿ ದ್ವಂದ್ವ ಅರ್ಥದ ಹೇಳಿಕೆ ನೀಡಿದರು. ಈ ಮಾತು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ತ್ರಿಷಾ ಪೋಸ್ಟ್ ಮತ್ತು ಫ್ಯಾನ್ಸ್ ರಿಯಾಕ್ಷನ್

ತ್ರಿಷಾ ಒಂದು ವಾರದ ಹಿಂದೆ ಫೋಟೋ ಹಂಚಿಕೊಂಡಿದ್ದರು. ‘ಯಾವುದಕ್ಕೂ ತಲೆಕೆಡಿಸಿಕೊಳ್ಳದಿರುವುದು ನಮ್ಮ ಕೈಯಲ್ಲೇ ಇದೆ. ಅದನ್ನೇ ಆಯ್ಕೆ ಮಾಡಿಕೊಳ್ಳಿ’ ಎಂದು ಬರೆದುಕೊಂಡಿದ್ದರು. ಈಗ ಈ ಪೋಸ್ಟ್ ವೈರಲ್ ಆಗುತ್ತಿದೆ. ಸಾವಿರಾರು ಜನರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ‘ಮಹಿಳೆಯರಿಗೆ ಗೌರವ ಸಿಗಬೇಕು’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕುಟುಂಬದ ಜೊತೆ ‘ಜನ ನಾಯಗನ್’ ಸಿನಿಮಾ ನೋಡಿ ಎಂಜಾಯ್ ಮಾಡಿದ ತ್ರಿಷಾ ಕೃಷ್ಣನ್

ರಾಜಕೀಯ ವಲಯದಲ್ಲಿ ಕಾವೇರಿದ ಚರ್ಚೆ

ಕಾವೇರಿ ನದಿ ವಿಷಯದಲ್ಲಿ ಮಾತನಾಡುವಾಗ ಉದಯನಿಧಿ ಅವರು ನಾಲಿಗೆ ಹರಿಬಿಟ್ಟಿದ್ದರು. ವಿಜಯ್ ಅವರ ಟಿವಿಕೆ ಪಕ್ಷ ಈ ಹೇಳಿಕೆಯನ್ನು ಖಂಡಿಸಿದೆ. ಅವರ ಪಕ್ಷವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಪೊಲೀಸರಿಗೂ ದೂರು ಸಲ್ಲಿಕೆಯಾಗಿದೆ. ಮಹಿಳೆಯರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.
ಉದಯನಿಧಿ ಅವರು ಈ ಹೇಳಿಕೆಗೆ ಸಂಬಂಧಿಸಿ ಅರೆಸ್ಟ್ ಕೂಡ ಆದರು. ಅದೇ ದಿನ ಅವರು ಬಿಡುಗಡೆ ಆದರು. ಈ ಘಟನೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಉದಯನಿಧಿ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ಡಿಎಂಕೆ ನಾಯಕನನ್ನು ಟೀಕಿಸುತ್ತಿದ್ದಾರೆ. ತ್ರಿಷಾ ಅವರನ್ನು ‘ಸಾಫ್ಟ್ ಪವರ್’ ಎಂದು ಕರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *