ಬಾಲಿವುಡ್‌ನ ಪ್ರತಿಭಾವಂತ ನಟಿ ಭೂಮಿ ಪೆಡ್ನೇಕರ್ ಇಂದು (ಜುಲೈ 18) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆ ಹಾಗೂ ಅದ್ಭುತ ಬಾಡಿ ಟ್ರಾನ್ಸ್‌ಫರ್ಮೇಷನ್ ಮೂಲಕ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನ ಕಠಿಣ ಸೌಂದರ್ಯದ ಮಾನದಂಡಗಳ ನಡುವೆಯೂ ಭೂಮಿ ತಮ್ಮ ಫಿಟ್‌ನೆಸ್ ಜರ್ನಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವರು ಎಂದಿಗೂ ಯಾವುದೇ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳದೆ ತಮಗೆ ಸೂಕ್ತವಾದ ಆರೋಗ್ಯಕರ ಹಾದಿಯನ್ನು ಆರಿಸಿಕೊಂಡಿದ್ದಾರೆ.
ತೂಕ ಹೆಚ್ಚಳದಿಂದ ತೂಕ ಇಳಿಕೆಯವರೆಗಿನ ಜರ್ನಿ
ಭೂಮಿ ಪೆಡ್ನೇಕರ್ ತಮ್ಮ ಚೊಚ್ಚಲ ಸಿನಿಮಾ ‘ದಮ್ ಲಗಾ ಕೆ ಹೈಶಾ’ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಸಿನಿಮಾದ ಪಾತ್ರಕ್ಕಾಗಿ ಅವರು ಬರೋಬ್ಬರಿ 30 ಕೆಜಿಗಿಂತ ಹೆಚ್ಚು ತೂಕವನ್ನು ಹೆಚ್ಚಿಸಿಕೊಂಡಿದ್ದರು. ಇದು ಬಾಲಿವುಡ್‌ನ ಸಾಂಪ್ರದಾಯಿಕ ನಾಯಕಿಯರ ಇಮೇಜನ್ನು ಬದಿಗೆ ಸರಿಸಿತ್ತು. ಆ ನಂತರ ಅವರು ಯಾವುದೇ ಕ್ರ್ಯಾಶ್ ಡಯಟ್ ಅಥವಾ ಕಠಿಣ ವರ್ಕೌಟ್ ಇಲ್ಲದೆ 35 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡರು. ಕೇವಲ ಸಮತೋಲಿತ ದಿನಚರಿ ಮತ್ತು ಸ್ವಯಂ ಕಾಳಜಿಯ ಮೂಲಕ ಅವರು ಈ ಸಾಧನೆ ಮಾಡಿದರು.
ಸರಳ ಮತ್ತು ಆರೋಗ್ಯಕರ ಬೆಳಗಿನ ದಿನಚರಿ
ಭೂಮಿ ಪೆಡ್ನೇಕರ್ ಅವರ ಫಿಟ್‌ನೆಸ್ ದಿನಚರಿ ಅತ್ಯಂತ ಸರಳವಾಗಿದೆ. ಅವರ ಬೆಳಗಿನ ದಿನಚರಿಯು ಹಣ್ಣುಗಳು ಮತ್ತು ಒಣಹಣ್ಣುಗಳನ್ನು ಒಳಗೊಂಡ ಪೌಷ್ಟಿಕಾಂಶದ ಉಪಹಾರದೊಂದಿಗೆ ಪ್ರಾರಂಭವಾಗುತ್ತದೆ. ಇದು ಅವರಿಗೆ ದಿನವಿಡೀ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಇದರ ನಂತರ ಅವರು ರನ್ನಿಂಗ್ ಮಾಡುತ್ತಾರೆ. ಇದು ಅವರ ಮೂಡ್ ಸುಧಾರಿಸಲು ಹಾಗೂ ಮೆಟಬಾಲಿಸಂ ಹೆಚ್ಚಿಸಲು ಸಹಾಯ ಮಾಡುತ್ತದೆ. ರನ್ನಿಂಗ್ ಅವರ ಹೃದಯ ಮತ್ತು ಮೂಳೆಗಳ ಆರೋಗ್ಯಕ್ಕೂ ಉತ್ತಮವಾಗಿದೆ.
ಫಿಟ್‌ನೆಸ್ ಒಂದು ಜೀವನಶೈಲಿ
ಫಿಟ್‌ನೆಸ್ ಈಗ ಭೂಮಿ ಅವರ ಜೀವನದ ಒಂದು ನಿಯಮಿತ ಭಾಗವಾಗಿದೆ. ಅವರು ದಿನಾಲೂ ಪೈಲೇಟ್ಸ್, ರನ್ನಿಂಗ್ ಮತ್ತು ವೇಟ್ ಟ್ರೈನಿಂಗ್‌ನಂತಹ ವಿಭಿನ್ನ ವರ್ಕೌಟ್‌ಗಳನ್ನು ಮಾಡುತ್ತಾರೆ. ಅವರು ಪ್ರತಿದಿನ ಸುಮಾರು ಒಂದು ಗಂಟೆ ಕಾಲ ವ್ಯಾಯಾಮಕ್ಕಾಗಿ ಸಮಯ ಮೀಸಲಿಡುತ್ತಾರೆ. ಇದರೊಂದಿಗೆ ಪ್ರತಿದಿನ 7,000 ರಿಂದ 8,000 ಹೆಜ್ಜೆಗಳನ್ನು ನಡೆಯುತ್ತಾರೆ.
ಮಾನಸಿಕ ಶಕ್ತಿ ಮತ್ತು ಯಶಸ್ಸಿನ ಹಾದಿ
ಭೂಮಿ ತಮ್ಮ ಮೊದಲ ಸಿನಿಮಾದಲ್ಲಿ ತೂಕ ಹೆಚ್ಚಿಸಿಕೊಂಡಾಗಲೂ ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಿದ್ದರು. ಅವರು ಯಾವುದೇ ಟೀಕೆಗಳನ್ನು ಎದುರಿಸಲಿಲ್ಲ. ಪ್ರೇಕ್ಷಕರ ಈ ಬೆಂಬಲ ಅವರಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿತು. ಆನಂತರ ಅವರು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’, ‘ಶುಭ್ ಮಂಗಲ್ ಸಾವಧಾನ್’ ಮತ್ತು ‘ಬಾಲಾ’ ನಂತಹ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ವಿಶೇಷ ಸೂಚನೆ: ಪ್ರತಿಯೊಬ್ಬರ ದೇಹದ ಪ್ರಕೃತಿ, ಮೆಟಾಬಾಲಿಸಂ ಮತ್ತು ಆರೋಗ್ಯದ ಸ್ಥಿತಿಗಳು ವಿಭಿನ್ನವಾಗಿರುತ್ತವೆ. ನಟಿ ಭೂಮಿ ಪೆಡ್ನೇಕರ್ ಅವರಿಗೆ ಸೂಕ್ತವಾದ ಡಯಟ್ ಪ್ಲಾನ್ ನಿಮಗೂ ಅನ್ವಯಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದರೆ, ಯಾವುದೇ ಸೆಲೆಬ್ರಿಟಿಗಳ ಡಯಟ್ ಅನ್ನು ಕುರುಡಾಗಿ ಅನುಸರಿಸಬೇಡಿ. ಯಾವುದೇ ಹೊಸ ಡಯಟ್ ಅಥವಾ ತೀವ್ರವಾದ ವ್ಯಾಯಾಮವನ್ನು ಪ್ರಾರಂಭಿಸುವ ಮುನ್ನ ಅರ್ಹ ಪೌಷ್ಟಿಕತಜ್ಞರು ಅಥವಾ ವೈದ್ಯರ ಸಲಹೆಯನ್ನು ಪಡೆಯುವುದು ಕಡ್ಡಾಯ ಮತ್ತು ಅತ್ಯಂತ ಸುರಕ್ಷಿತ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.