Headlines

ರಕ್ತ ಸಿಕ್ತ ಲುಕ್​​ನಲ್ಲಿ ಪ್ರಭಾಸ್, ಘೋಷಣೆಯಾಯ್ತು ‘ಫೌಜಿ’ ರಿಲೀಸ್ ಡೇಟ್ – Kannada News | Prabhas’s Fauzi movie release date announced

ಪ್ರಭಾಸ್ (Prabhs) ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಮತ್ತು ‘ಸ್ಪಿರಿಟ್’ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟನೆ ಆರಂಭಿಸಿದ್ದಾರೆ. ‘ಫೌಜಿ’ ಸಿನಿಮಾನಲ್ಲಿಯೂ ಅವರು ನಟಿಸುತ್ತಿದ್ದಾರೆ. ಅಂದಹಾಗೆ, ‘ಕಲ್ಕಿ’, ‘ಸ್ಪಿರಿಟ್’ ಸಿನಿಮಾಗಳ ಕತೆಯನ್ನು ಮೊದಲೇ ಕೇಳಿದ್ದರೂ ಸಹ ಪ್ರಭಾಸ್ ‘ಫೌಜಿ’ ಸಿನಿಮಾದ ಚಿತ್ರೀಕರಣವನ್ನು ಆ ಎರಡೂ ಸಿನಿಮಾಗಳಿಗಿಂತಲೂ ಬೇಗನೇ ಪ್ರಾರಂಭಿಸಿದರು. ಪ್ರಭಾಸ್ ಅವರಿಗೆ ‘ಫೌಜಿ’ ಸಿನಿಮಾದ ಕತೆ ಬಹುವಾಗಿ ಇಷ್ಟವಾಗಿದ್ದು, ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರಂತೆ. ಇದೀಗ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ, ಕಲ್ಟ್ ಸಿನಿಮಾ ಎನಿಸಿಕೊಂಡಿರುವ ‘ಸೀತಾ ರಾಮಂ’ ಸಿನಿಮಾ ನಿರ್ದೇಶಿಸಿರುವ ಹನು ರಘುಪುಡಿ ಅವರು ‘ಫೌಜಿ’ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಪ್ರಭಾಸ್, ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ರಘು ಅವರ ಈ ಹಿಂದಿನ ಸಿನಿಮಾ ‘ಸೀತಾ ರಾಮಂ’ ಸಿನಿಮಾ ಸಹ ಸೈನಿಕನ ಪ್ರೇಮಕತೆಯನ್ನು ಒಳಗೊಂಡಿದೆ.

ಇದೀಗ ‘ಫೌಜಿ’ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿದೆ. ಪೋಸ್ಟರ್​​ನಲ್ಲಿ ಪ್ರಭಾಸ್ ಪಂಚೆ ಕಟ್ಟಿಕೊಂಡು ಮದುವೆ ವರನ ಲುಕ್​​ನಲ್ಲಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದುಕೊಂಡು ಕುಳಿತಿದ್ದಾರೆ. ಅವರ ದೇಹವೆಲ್ಲ ರಕ್ತದಿಂದ ಒದ್ದೆಯಾಗಿದೆ. ಹಲವಾರು ಶವಗಳು ಅವರ ಹಿನ್ನೆಲೆಯಲ್ಲಿವೆ. ‘ಬಟಾಲಿಯನ್ ಹೂ ಫೈಟ್ಸ್ ಅಲೋನ್’ ಎಂಬ ಟ್ಯಾಗ್ ಲೈನ್ ಪೋಸ್ಟರ್​​ನಲ್ಲಿದೆ. ಸಿನಿಮಾ ಡಿಸೆಂಬರ್ 3 ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಎದುರು ಸ್ಪರ್ಧೆ ತಪ್ಪಿಸಿಕೊಂಡ ಮತ್ತೊಂದು ಸಿನಿಮಾ

ಭರ್ಜರಿ ಆಕ್ಷನ್ ಜೊತೆಗೆ ಸಿನಿಮಾನಲ್ಲಿ ಪ್ರೇಮಕತೆಯೂ ಇರಲಿದೆ ಎನ್ನಲಾಗಿದೆ. ಪ್ರಭಾಸ್ ಸೈನಿಕನಾಗಿ ನಟಿಸುತ್ತಿದ್ದು, ಸಿನಿಮಾನಲ್ಲಿ ಇಮಾನ್ವಿ ಇಸ್ಮಾಯಿಲ್ ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ಅಮೆರಿಕನಲ್ಲಿ ಡ್ಯಾನ್ಸ್ ಸ್ಟುಡಿಯೋ ಹೊಂದಿರುವ ಇಮಾನ್ವಿ ಒಳ್ಳೆಯ ಡ್ಯಾನ್ಸರ್ ಮತ್ತು ಒಳ್ಳೆಯ ನಟಿ ಸಹ. ಇದೀಗ ಅವರು ಪ್ರಭಾಸ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಘು ಹನುಪುಡಿ ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *