ವಿನಯ್ ಹಾಗೂ ರಜತ್ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಗೆಳೆತನ ಮೂಡಿದೆ. ಇಬ್ಬರೂ ಮಚ್ಚು ಹಿಡಿದು ರೀಲ್ಸ್ ಮಾಡಿ ಸುದ್ದಿ ಆಗಿದ್ದರು. ಇತ್ತೀಚೆಗೆ ನಡೆದ ‘ಬಲರಾಮನ ದಿನಗಳು’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ರಜತ್ ಅವರನ್ನು ವಿನಯ್ ‘ಮಚ್ ಬ್ರದರ್’ ಎಂದು ಕರೆದಿದ್ದಾರೆ. ‘ನಮ್ಮ ಮಚ್ ಬ್ರದರ್ ರಜತ್ ಅವರು ಸುದ್ದಿಗೋಷ್ಠಿಗೆ ಬರಬೇಕಿತ್ತು. ಆದರೆ, ಅವನು ಶೂಟ್ನಲ್ಲಿ ಇರೋದ್ರಿ ಬರೋಕೆ ಆಗಿಲ್ಲ’ ಎಂದಿದ್ದಾರೆ. ಬಲರಾಮನ ದಿನಗಳು ಚಿತ್ರಕ್ಕೆ ವಿನೋದ್ ರಾಜ್ ಹೀರೋ. 80ರ ದಶಕದ ಕಥೆ ಸಿನಿಮಾದಲ್ಲಿದ್ದು, ಚಿತ್ರ ಗೆಲ್ಲುತ್ತದೆ ಎಂಬ ಭರವಸೆ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.