
ಹುಬ್ಬಳ್ಳಿ, (ಏಪ್ರಿಲ್ 09): ಪೊಲೀಸ್ ಆಯುಕ್ತ (Hubballi-Dharwad Police Commissioner ) ಎನ್ ಶಶಿಕುಮಾರ್ ಅವರು ಇಂದು (ಏಪ್ರಿಲ್ 09) ಹುಬ್ಬಳ್ಳಿ ಹಳೇ ಸಿಎಆರ್ ಮೈದಾನದಲ್ಲಿ ಅವಳಿ ನಗರದ ವಿವಿಧ ಠಾಣೆಗಳ ರೌಡಿಶೀಟರ್ಗಳ ಪರೇಡ್ ನಡೆಸಿದರು. ಈ ವೇಳೆ ಅಪರಾಧ ಕೃತ್ಯ ಮುಂದುವರಿಸಿದ ರೌಡಿಶೀಟರ್ಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೆಲ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇನ್ನು ರೌಡಿಶೀಟರ್ನಲ್ಲಿರೋ ಅಪ್ಪ ಮಗನಿಗೂ ಕಮಿಷನರ್ ಶಶಿಕುಮಾರ್ ತರಾಟೆ ತೆಗೆದುಕೊಂಡಿದ್ದು, ಹೀಗೆ ಮುಂದುವರೆಸಿ ರಸ್ತೆಯಲ್ಲಿ ಸಾಯ್ತಿರಿ. ಯಾವನಾದರೂ ಹೊಡೆದು ಹಾಕುತ್ತಾರೆ ಅಷ್ಟೇ ಎಂದು ಕ್ಲಾಸ್ ತೆಗೆದುಕೊಂಡರು.