ರಾಮನಮವಿಗಲ್ಲ ಹನುಮ ಜಯಂತಿಗೆ ‘ರಾಮಾಯಣ’ ಅಪ್​​ಡೇಟ್

ರಾಮನಮವಿಗಲ್ಲ ಹನುಮ ಜಯಂತಿಗೆ ‘ರಾಮಾಯಣ’ ಅಪ್​​ಡೇಟ್

ರಣ್​​ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಹಾಲಿವುಡ್​​ನಲ್ಲಿ ನಡೆಯುತ್ತಿದೆ. ಇಂದು (ಮಾರ್ಚ್ 27) ರಾಮನವಮಿ ಆಗಿದ್ದು, ಇಂದು ಸಿನಿಮಾದ ಅಪ್​​ಡೇಟ್ ಹೊರಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಇತ್ತು. ಆದರೆ ಹಾಗಾಗಿಲ್ಲ. ಆದರೆ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದು, ಅಪ್​​ಡೇಟ್ ಯಾವಾಗ ಬರಲಿದೆ ಎಂದು ತಿಳಿಸಿದ್ದಾರೆ.

ರಾಮನವಮಿಯ ಶುಭ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಏಪ್ರಿಲ್ 2ಕ್ಕೆ ಅಂದರೆ ಹನುಮ ಜಯಂತಿಯಂತೆ ರಣಬೀರ್ ಕಪೂರ್ ಅವರ ‘ರಾಮಾಯಣ’ ಸಿನಿಮಾದ ಅಪ್​​ಡೇಟ್ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಸಿನಿಮಾದ ಅಪ್​​ಡೇಟ್ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ನಮಿತ್ ಮಲ್ಹೋತ್ರಾ ಹಂಚಿಕೊಂಡಿರುವ ಮಾಹಿತಿಯಿಂದ ಸಹಜಾಗಿಯೇ ಅಭಿಮಾನಿಗಳಿಗೆ ಕಾತರತೆ ಹೆಚ್ಚಾಗಿದೆ.

ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಮಿತ್ ಮಲ್ಹೋತ್ರಾ, ‘ಇದು (ರಾಮಾಯಣ) ನಮ್ಮೆಲ್ಲರಿಗೂ ಸೇರಿದ ಕಥೆ. ನಮ್ಮದೇ ಆದ ‘ರಾಮಾಯಣ’ವನ್ನು ಅದರ ನೈಜತೆ ಮತ್ತು ಭವ್ಯತೆಯೊಂದಿಗೆ, ಅತ್ಯಂತ ಪ್ರಾಮಾಣಿಕತೆಯಿಂದ ತೆರೆಯ ಮೇಲೆ ತರಲು ನಾವು ಪ್ರತಿ ಹೆಜ್ಜೆಯನ್ನು ಭಕ್ತಿ, ಕಾಳಜಿ ಮತ್ತು ಪ್ರಾಮಾಣಿಕತೆಯಿಂದ ಇಡುತ್ತಿದ್ದೇವೆ. ಹನುಮ ಜಯಂತಿಯ ಶುಭ ಸಂದರ್ಭದಲ್ಲಿ, ಅಂದರೆ ಏಪ್ರಿಲ್ 2ರಂದು, ‘ರಾಮ’ನ ಹೊಸ ದೃಶ್ಯದ ತುಣುಕೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಇಷ್ಟು ವರ್ಷಗಳ ನಮ್ಮ ಶ್ರಮವನ್ನು ಜಗತ್ತಿನಾದ್ಯಂತ ಇರುವ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಅನಾವರಣಗೊಳಿಸುವ ಮೂಲಕ ಈ ಕ್ಷಣವನ್ನು ಆಚರಿಸಲಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್

‘ರಾಮಾಯಣ’ ಸಿನಿಮಾದ ಕೆಲ ಕ್ಯಾರೆಕ್ಟರ್ ಟೀಸರ್​​ಗಳು ಈಗಾಗಲೇ ಬಿಡುಗಡೆ ಆಗಿವೆ. ರಣ್​​ಬೀರ್ ಅವರ ಪಾತ್ರ, ಯಶ್ ಅವರ ಪಾತ್ರದ ಸಣ್ಣ ವಿಡಿಯೋ ತುಣುಕುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಇದೀಗ ಏಪ್ರಿಲ್ 2 ಕ್ಕೆ ಶ್ರೀರಾಮನ ಪಾತ್ರದ ವಿಡಿಯೋ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ರಣ್​​ಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ಅವರದ್ದು ರಾವಣನ ಪಾತ್ರವಾಗಿದ್ದು, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಮೊದಲ ಭಾಗ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರುಗಳಾಗ ಎಆರ್ ರೆಹಮಾನ್ ಮತ್ತು ಹಾಲಿವುಡ್​​ನ ಹಾನ್ಸ್ ಜೀಮರ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯದ ಮೇಲುಸ್ತುವಾರಿ ಮಾಡುತ್ತಿರುವುದು ವಿಶ್ವ ಶ್ರೇಷ್ಠ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಕ್ರಿಸ್ಟೊಫರ್ ನೋಲನ್.

ಹಲವು ಆಸ್ಕರ್​​ಗಳನ್ನು ಗೆದ್ದಿರುವ ಡಿಎನ್​​ಇಜಿ ವಿಎಫ್​​ಎಕ್ಸ್ ಸಂಸ್ಥೆಯ ಸಿಇಓ ಆಗಿರುವ ನಮಿತ್ ಮಲ್ಹೋತ್ರಾ ಅವರು ಭಾರಿ ಬಜೆಟ್​​ನಲ್ಲಿ ‘ರಾಮಾಯಣ’ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಯಶ್ ಅವರು ಸಹ ಬಂಡವಾಳ ಹೂಡಿದ್ದು, ಅವರ ಮಾನ್​​ಸ್ಟರ್ ಮೈಂಡ್ ಸಹ ಹೂಡಿಕೆ ಮಾಡಿದೆ. ಈ ಸಿನಿಮಾವು IMAX ಫಾರ್ಮ್ಯಾಟ್‌ನಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಭವ್ಯವಾಗಿ ಪ್ರಚಾರ ಪಡಿಸುವ ಗುರಿಯನ್ನು ಹೊಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *