Headlines

‘ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ; ಯಶ್ ರೌದ್ರಾವತಾರ ನೋಡಿ ನೆಟ್ಟಿಗರು ಹೇಳಿದ್ದಿಷ್ಟು – Kannada News | Ramayana Trailer Response: Fans Hail Rocking Star Yash’s Dominance As Ravana In Theatres

‘ರಾಕಿಂಗ್ ಸ್ಟಾರ್ ಯಶ್​..’2 ಈ ಹೆಸರು ಈಗ ವಿಶ್ವಮಟ್ಟದಲ್ಲಿ ತಿಳಿದಿದೆ. ಕಿರುತೆರೆ ಮೂಲಕ ಜರ್ನಿ ಆರಂಭಿಸಿ, ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಏನಾದರೂ ಮಾಡಿಯೇ ಮಾಡುತ್ತೇನೆ ಎಂದು ಅವರು ಬಲವಾಗಿ ಅಂದುಕೊಂಡಿದ್ದರು. ‘ಕೆಜಿಎಫ್’ ಚಿತ್ರದ ಮೂಲ ಅದನ್ನು ಸಾಧಿಸಿದರು. ಅಲ್ಲಿಗೆ ಅವರು ನಿಲ್ಲಿಸಲಿಲ್ಲ. ‘ಕೆಜಿಎಫ್ 2’ ಮಾಡಿದರು. ಈಗ ‘ಟಾಕ್ಸಿಕ್’ ರಿಲೀಸ್​​ಗೆ ರೆಡಿ ಆಗುತ್ತಿದ್ದಾರೆ. ಇದರ ಜೊತೆಗೆ ‘ರಾಮಾಯಣ’ ಟ್ರೇಲರ್ ಮೂಲಕ ಧೂಳೆಬ್ಬಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಈ ಟ್ರೇಲರ್ ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭರ್ಜರಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಡೀ ಟ್ರೇಲರ್‌ನಲ್ಲಿ ಲಂಕೇಶ್ವರ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಸಂಪೂರ್ಣ ಅಧಿಪತ್ಯ ಎದ್ದು ಕಾಣುತ್ತಿದೆ ಎಂದು ಅನೇಕರು ಬಣ್ಣಿಸುತ್ತಿದ್ದಾರೆ.

ರೋಮಾಂಚನ ಮೂಡಿಸಿದ ಯಶ್ ಕಣ್ಣುಗಳು

ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರು ಯಶ್ ಅವರ ನಟನೆಗೆ ಫುಲ್ ಫಿದಾ ಆಗಿದ್ದಾರೆ. ‘ಇಡೀ ರಾಮಾಯಣ ಟ್ರೇಲರ್‌ನಲ್ಲಿ ಅತ್ಯಂತ ರೋಮಾಂಚನ ನೀಡಿದ ಕ್ಷಣ ಎಂದರೆ ಅದು ಯಶ್ ಅವರ ರಾವಣನ ಅವತಾರ. ಅವರ ಕಣ್ಣುಗಳಲ್ಲಿನ ತೀವ್ರತೆ, ಗಾಂಭೀರ್ಯದ ವ್ಯಕ್ತಿತ್ವ ಮತ್ತು ಪರದೆಯ ಮೇಲಿನ ಅವರ ಅಪ್ರತಿಮ ಕ್ರೌರ್ಯದ ನಟನೆ ಎಂದಿಗೂ ಮರೆಯಲಾಗದ ಮೊದಲ ಆಕರ್ಷಣೆ’ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ

ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಗ್ಯಾರಂಟಿ

ಚಿತ್ರಮಂದಿರಗಳಲ್ಲಿ ಟ್ರೇಲರ್ ಪ್ರದರ್ಶನವಾಗುವಾಗ ರಾವಣನ ಎಂಟ್ರಿ ದೃಶ್ಯಕ್ಕೆ ಪ್ರೇಕ್ಷಕರಿಂದ ಹುಚ್ಚೆದ್ದು ಕೂಗಿದ್ದಾರೆ. ‘ಯಶ್ ಅವರು ಇಡೀ ಟ್ರೇಲರ್ ಅನ್ನು ಅತ್ಯಂತ ಸುಲಭವಾಗಿ ಡಾಮಿನೇಟ್ ಮಾಡಿದ್ದಾರೆ’ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ಭವ್ಯ ವಿಶ್ಯುಯಲ್ ವೈಭವ ಹಾಗೂ ಯಶ್ ಅವರ ರೌದ್ರಾವತಾರವನ್ನು ನೋಡುತ್ತಿದ್ದರೆ, ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ, ಸುನಾಮಿ ಎಬ್ಬಿಸುವುದು ಖಚಿತ ಎಂದು ಸಿನಿವಿಶ್ಲೇಷಕರು ಹಾಗೂ ಪ್ರೇಕ್ಷಕರು ಜಂಟಿಯಾಗಿ ಭವಿಷ್ಯ ನುಡಿಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ಮಾಡಿ

Source link

Leave a Reply

Your email address will not be published. Required fields are marked *