Headlines

‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ – Kannada News | Ramayana Trailer Lara Dutta Modern look as Kaikeyi sparks debate

ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಜುಲೈ 30ರಂದು ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ (Yash) ನಟಿಸಿದ್ದಾರೆ. ಈ ಟ್ರೇಲರ್‌ನಲ್ಲಿ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಲಾರಾ ದತ್ತಾ (Lara Dutta) ಅವರ ಮಾಡರ್ನ್ ಲುಕ್ ಈಗ ನೆಟ್ಟಿಗರ ಟೀಕೆಗೆ ಒಳಗಾಗಿದೆ.

ದಶರಥ ಮಹಾರಾಜನ ಪತ್ನಿ ಹಾಗೂ ಶ್ರೀರಾಮನ ಮಲತಾಯಿ ಕೈಕೇಯಿಯ ಪಾತ್ರವನ್ನು ಲಾರಾ ದತ್ತಾ ನಿಭಾಯಿಸಿದ್ದಾರೆ. ಟ್ರೇಲರ್‌ನಲ್ಲಿ ಶ್ರೀರಾಮನನ್ನು 14 ವರ್ಷಗಳ ವನವಾಸಕ್ಕೆ ಕಳುಹಿಸುವ ಸನ್ನಿವೇಶದಲ್ಲಿ ಲಾರಾ ದತ್ತಾ ಧರಿಸಿರುವ ಬಾರ್ಡರ್ ಸೀರೆ ಮತ್ತು ಅವರ ಹೇರ್‌ಸ್ಟೈಲ್ ಅತ್ಯಂತ ಆಧುನಿಕವಾಗಿ ಕಾಣುತ್ತಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಯಾವ ಕಾಲದ ಪಾತ್ರ?

ನೆಟ್ಟಿಗರೊಬ್ಬರು ಕಮೆಂಟ್ ಮಾಡಿ, ‘ಮಾಡರ್ನ್ ಸೀರೆ, ಸಲೂನ್‌ನಲ್ಲಿ ಮಾಡಿಸಿದ ಕೇಶವಿನ್ಯಾಸ… ಇದು ತ್ರೇತಾಯುಗವೋ ಅಥವಾ 2026ರ ಕಾಲವೋ?’ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ‘ನನಗೆ ಸ್ಟಾರ್ ಪ್ಲಸ್ ಸೀರಿಯಲ್ ನೋಡಿದ ಅನುಭವವಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಲಾರಾ ದತ್ತಾ ಮತ್ತು ರಣಬೀರ್ ಕಪೂರ್ ನಡುವಿನ ವಯಸ್ಸಿನ ಅಂತರವನ್ನು ಪ್ರಶ್ನಿಸಿದ್ದಾರೆ. ರಣಬೀರ್‌ಗಿಂತ ಲಾರಾ ದತ್ತಾ ಕೇವಲ 4 ವರ್ಷ ದೊಡ್ಡವರಾಗಿದ್ದರೂ ಅವರಿಗೆ ತಾಯಿಯ ಪಾತ್ರ ನೀಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ರಾಮಾಯಣ’ ಸಿನಿಮಾದ ಟ್ರೇಲರ್:

ಮೆಚ್ಚುಗೆ ಪಡೆದ ಲಾರಾ ದತ್ತಾ:

ಈ ಎಲ್ಲ ಟೀಕೆಗಳ ನಡುವೆಯೂ ಲಾರಾ ದತ್ತಾ ಅವರ ಗಂಭೀರ ನಟನೆ ಹಾಗೂ ಸ್ಕ್ರೀನ್ ಪ್ರೆಸೆಂನ್ಸ್​ಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ‘ಲಾರಾ ದತ್ತಾ ಅವರ ಗಂಭೀರ ಲುಕ್ ನೋಡಿದರೆ ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ನೆನಪಾಗುತ್ತದೆ. ಟ್ರೇಲರ್‌ನಲ್ಲಿ ಅವರ ಅಭಿನಯ ನನಗೆ ತುಂಬಾ ಇಷ್ಟವಾಯಿತು’ ಎಂದು ಕೆಲವು ಅಭಿಮಾನಿಗಳು ಬೆಂಬಲಿಸಿದ್ದಾರೆ. ಒಟ್ಟಿನಲ್ಲಿ ಈ ಪಾತ್ರದ ಬಗ್ಗೆ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ರಾಮಾಯಣ ಟ್ರೇಲರ್​ನಲ್ಲಿ ರಾವಣನ ಪಾತ್ರದ ಮೂಲಕ ಅಬ್ಬರಿಸಿ ಬೊಬ್ಬಿರಿದ ಯಶ್

ಸಾಯಿ ಪಲ್ಲವಿ ಪಾತ್ರಕ್ಕೂ ಟೀಕೆ:

‘ರಾಮಾಯಣ’ ಟ್ರೇಲರ್ ನೋಡಿದ ಪ್ರೇಕ್ಷಕರು ಹಲವು ಬಗೆಯ ಅಭಿಪ್ರಾಯ ತಿಳಿಸುತ್ತಿದ್ದಾರೆ. ರಣಬೀರ್ ಕಪೂರ್ ಮಾಡಿರುವ ರಾಮನ ಪಾತ್ರ ಹಾಗೂ ಯಶ್ ನಟಿಸಿರುವ ರಾವಣನ ಪಾತ್ರಗಳಿಗೆ ಜನರ ಮೆಚ್ಚುಗೆ ಸಿಗುತ್ತಿದೆ. ಆದರೆ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಅಲ್ಲ ಎಂದು ಜನರು ಹೇಳುತ್ತಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರಿಗೆ ಜೋಡಿ ಸರಿಯಾಗಿಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *