Headlines

ರೈಲು ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗ, ತಾಳಗುಪ್ಪ ಮಾರ್ಗದ ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ | Mportant! Bengaluru Train Schedule Changes August 2026: Check Your Route for Cancellations and Diversions.

ಬೆಂಗಳೂರು, ಆ.19: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವೆ ಅತ್ಯಗತ್ಯ ಇಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ತಾಳಗುಪ್ಪ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮಾರ್ಗದ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲು ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸಲು ಕೋರಲಾಗಿದೆ.

ಭಾಗಶಃ ಹಾಗೂ ಸಂಪೂರ್ಣ ರದ್ದಾಗಿರುವ ರೈಲುಗಳು:

ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652): ಆಗಸ್ಟ್ 19, 22, 23 ಮತ್ತು 26 ರಂದು ಈ ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲಿಯೇ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ.

ಆಗಸ್ಟ್ 19 ಮತ್ತು 26 ರಂದು ಸಂಪೂರ್ಣ ರದ್ದಾಗಿರುವ ರೈಲುಗಳು:

ಚಿಕ್ಕಮಗಳೂರು–ಯಶವಂತಪುರ (16239)

ಯಶವಂತಪುರ–ಚಿಕ್ಕಮಗಳೂರು (16240)

ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ (12614)

ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (66567)

ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (66572)

ಆಗಸ್ಟ್ 19, 22 ಮತ್ತು 26 ರಂದು ರದ್ದಾಗಿರುವ ರೈಲುಗಳು:

ಯಲಹಂಕ–ಅರಸೀಕೆರೆ (66505) ಮೆಮು

ಅರಸೀಕೆರೆ–ಯಲಹಂಕ (66506) ಮೆಮು

ಮಾರ್ಗ ಬದಲಾವಣೆಯಾಗಿರುವ ರೈಲುಗಳು:

ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (20689): ಆಗಸ್ಟ್ 19, 22, 23 ಮತ್ತು 26 ರಂದು ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಪರಿಣಾಮ, ಈ ರೈಲಿಗೆ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಇದನ್ನೂ ಓದಿ: ‘ಪಿಎಂ-ಇ ಡ್ರೈವ್’ ಯೋಜನೆಯಡಿ 4,500 ಇವಿ ಬಸ್: ಬಿಎಂಟಿಸಿಯ ಡ್ರೈವರ್​ಗಳನ್ನೇ ನೇಮಕ ಮಾಡುವಂತೆ ಆಗ್ರಹ

ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳು:

ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (17310)

ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (20676) (ಈ ರೈಲುಗಳು ತಿಪಟೂರು ಮತ್ತು ತುಮಕೂರು ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ).

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *