Headlines

ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ? – Kannada News | Indian railways update, WhatsApp screenshot, photos, pdf valid or invalid, what are new digital ticket rules

ರೈಲಿನ ಸಾಂದರ್ಭಿಕ ಚಿತ್ರImage Credit source: Firdous Nazir/NurPhoto via Getty Images

ನವದೆಹಲಿ, ಜುಲೈ 11: ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ಸಹೋದರ ವಾಟ್ಸಾಪ್ (WhatsApp) ಮೂಲಕ ಕಳುಹಿಸಿದ್ದ ಡಿಜಿಟಲ್ ಅನ್ ರಿಸರ್ವ್ಡ್ (ಸಾಮಾನ್ಯ/ಜನರಲ್) ಟಿಕೆಟ್‌ನ ಸ್ಕ್ರೀನ್‌ಶಾಟ್ ಅನ್ನು ಟಿಕೆಟ್ ತಪಾಸಣಾಧಿಕಾರಿಗೆ (TTE) ತೋರಿಸಿದ್ದರು. ಆದರೆ ಆ ಟಿಕೆಟ್ ರೈಲು ನಿಲ್ದಾಣದಿಂದ ಹೊರಟ ನಂತರ ಬುಕ್ ಆಗಿರುವುದು ಟಿಟಿಇ ಗಮನಕ್ಕೆ ಬಂದಿತು. ಹಾಗೆಯೇ, ಮಹಿಳೆಯ ಸ್ವಂತ ಮೊಬೈಲ್‌ನಿಂದ ಟಿಕೆಟ್ ಬುಕ್ ಆಗಿರಲಿಲ್ಲ. ಈ ಕಾರಣಕ್ಕೆ ಮಹಿಳೆ ತೋರಿದ ಡಿಜಿಟಲ್ ಟಿಕೆಟ್ ಅನ್ನು ಟಿಟಿಇ ಮಾನ್ಯ ಮಾಡಲಿಲ್ಲ. ಒಂದು ರೀತಿಯಲ್ಲಿ ಆ ಮಹಿಳೆಯದ್ದು ರೈಲು ಹೋದ ಮೇಲೆ ಟಿಕೆಟ್ ಕೊಂಡ ಕಥೆಯಂತಿತ್ತು. ಈ ಘಟನೆ ಬಳಿಕ ಭಾರತೀಯ ರೈಲ್ವೆಯು ತನ್ನ ಡಿಜಿಟಲ್ ಟಿಕೆಟ್ ನಿಯಮಗಳನ್ನು ಕಟ್ಟುನಿಟ್ಟಾಗಿಸಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವುಗಳ ವಿವರ ಇಲ್ಲಿದೆ:

ಭಾರತೀಯ ರೈಲ್ವೆ: ಯಾವ ರೀತಿಯ ಟಿಕೆಟ್‌ಗಳು ಅಮಾನ್ಯ?

  • ವಾಟ್ಸಾಪ್ ಅಥವಾ ಇತರೆ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಬಂದ ಟಿಕೆಟ್‌ಗಳ ಸ್ಕ್ರೀನ್‌ಶಾಟ್‌ಗಳು (Screenshots).
  • ಟಿಕೆಟ್‌ನ ಫೋಟೋಗಳು ಅಥವಾ ಕೇವಲ ಪಿಡಿಎಫ್ (PDF) ಪ್ರತಿಗಳು.
  • ಬೇರೆ ಯಾರೋ ಬುಕ್ ಮಾಡಿ ಕಳುಹಿಸಿದ ಫೋಟೋಗಳು.

ಇಂತಹ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದರೆ ನೀವು ಸೂಕ್ತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದೀರಿ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ?

ಭಾರತೀಯ ರೈಲ್ವೆ: ಹೊಸ ನಿಯಮಗಳ ಪ್ರಕಾರ ಯಾವುದು ಸಿಂಧು?

  • ಡಿಜಿಟಲ್ ಅನ್ ರಿಸರ್ವ್ಡ್ (Unreserved/General) ಟಿಕೆಟ್‌ಗಳಾಗಿದ್ದರೆ, ನೀವು ಅಧಿಕೃತ ‘ರೈಲ್ ಒನ್’ (Rail One) ಅಥವಾ ಆಯಾ ಅಧಿಕೃತ ಆ್ಯಪ್ ಮೂಲಕವೇ ಮೂಲ (Original) ಟಿಕೆಟ್ ಅನ್ನು ಲೈವ್ ಆಗಿ ತೋರಿಸಬೇಕು.
  • ಯಾವ ಮೊಬೈಲ್ ಸಂಖ್ಯೆ ಮತ್ತು ಸಾಧನದಿಂದ ಟಿಕೆಟ್ ಬುಕ್ ಆಗಿದೆಯೋ, ಅದೇ ಮೊಬೈಲ್ ಸಾಧನದಲ್ಲಿ ಟಿಕೆಟ್ ಅನ್ನು ತೋರಿಸುವುದು ಕಡ್ಡಾಯ.
  • ರೈಲು ನಿಲ್ದಾಣದಿಂದ ಹೊರಡುವ ಮುನ್ನವೇ ಈ ಡಿಜಿಟಲ್ ಅನ್ ರಿಸರ್ವ್ಡ್ ಟಿಕೆಟ್‌ಗಳನ್ನು ಬುಕ್ ಮಾಡಿರಬೇಕು. ರೈಲು ಹೊರಟ ನಂತರ ಬುಕ್ ಮಾಡಿದರೆ ಅದು ಮಾನ್ಯವಾಗುವುದಿಲ್ಲ.

ರಿಸರ್ವ್ಡ್ (ಕಾಯ್ದಿರಿಸಿದ) ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸುತ್ತದೆಯೇ?

ರಿಸರ್ವ್ಡ್ ಟಿಕೆಟ್​ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ಕಟ್ಟುನಿಟ್ಟಾದ ಸ್ಕ್ರೀನ್‌ಶಾಟ್ ನಿಯಮವು ಮುಖ್ಯವಾಗಿ ಡಿಜಿಟಲ್ ಅನ್ ರಿಸರ್ವ್ಡ್ (ಸಾಮಾನ್ಯ) ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ರಿಸರ್ವ್ಡ್ (IRCTC ಮೂಲಕ ಬುಕ್ ಮಾಡಿದ ಸ್ಲೀಪರ್, AC ಇತ್ಯಾದಿ) ಟಿಕೆಟ್‌ಗಳನ್ನು ಹೊಂದಿರುವವರು ಅಧಿಕೃತ ಆ್ಯಪ್, SMS ದೃಢೀಕರಣ ಅಥವಾ ಇ-ಟಿಕೆಟ್ ಪ್ರತಿಯೊಂದಿಗೆ ತಮ್ಮ ಸರ್ಕಾರದ ಅಧಿಕೃತ ಗುರುತಿನ ಚೀಟಿ (Aadhaar, PAN, Voter ID ಇತ್ಯಾದಿ) ತೋರಿಸಿ ಪ್ರಯಾಣಿಸಬಹುದು.

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ

ಪ್ರಯಾಣಿಕರಿಗೆ ರೈಲ್ವೆಯ ಸಲಹೆಗಳು

  • ನಿಮ್ಮ ಪ್ರಯಾಣದ ಉದ್ದಕ್ಕೂ ಟಿಕೆಟ್ ಬುಕ್ ಮಾಡಿದ ಮೊಬೈಲ್ ಫೋನ್ ಅನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ.
  • ಫೋನ್‌ನಲ್ಲಿ ಸಾಕಷ್ಟು ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ (TTE ತಪಾಸಣೆ ಮಾಡುವಾಗ ಫೋನ್ ಆಫ್ ಆಗಿದ್ದರೆ ಸಮಸ್ಯೆ ಎದುರಾಗಬಹುದು).

ಯಾವುದೇ ವಂಚನೆ ಅಥವಾ ತಪ್ಪುಗಳನ್ನು ತಡೆಯಲು ರೈಲ್ವೆ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *