ಲೇಡಿ ಫಿಟ್ನೆಸ್ ಇನ್​ಫ್ಲುಯೆನ್ಸರ್​​ಗೆ ಲೈಂಗಿಕ ಕಿರುಕುಳ: ಹರಿಯಾಣ ವ್ಯಕ್ತಿ ಅರೆಸ್ಟ್​​ – Kannada News | Bengaluru Gym Trainer Harassed by Haryana Man, Accused Arrested

ಬೆಂಗಳೂರು, ಜನವರಿ 21: ಯುವತಿಗೆ ಅಶ್ಲೀಲ ಮೆಸೇಜ್​ ಮಾಡುತ್ತಿದ್ದ ಹರಿಯಾಣ ಮೂಲದ ಸುಧೀರ್ ಕುಮಾರ್‌ ಎಂಬಾತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಲೇಡಿ ಫಿಟ್ನೆಸ್ ಇನ್​ಫ್ಲುಯೆನ್ಸರ್​ ಆಗಿರುವ ಯುವತಿಯನ್ನುಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡಿದ್ದ ಆರೋಪಿ ಅಶ್ಲೀಲ ಮೆಸೇಜ್ ಮಾಡ್ತಿದ್ದ. ಲೈಂಗಿಕವಾಗಿ ಪ್ರಚೋದಿಸುವ ಮೆಸೇಜ್​ ಮಾಡಿ ಹಿಂಸೆ ಕೊಡ್ತಿದ್ದ. ನಂತರ ಯುವತಿಗಾಗಿ ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ ಈತ, ಬೆಂಗಳೂರಿಗೆ ಬಂದು ಜಿಮ್ ಹಾಗೂ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರಿಗೆ ಯುವತಿ ದೂರು ನೀಡಿದ್ದು, ಸದ್ಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *