ಸಲ್ಮಾನ್ ಖಾನ್ (Salman Khan), ಬಾಲಿವುಡ್ನ (Bollywood) ಕೆಲ ಯುವನಟರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ಅವರಲ್ಲಿ ವರುಣ್ ಧವನ್ ಸಹ ಒಬ್ಬರು. ವರುಣ್ ಧವನ್ ತಂದೆ ಡೇವಿಡ್ ಧವನ್ ಸಹ ಸಲ್ಮಾನ್ ಖಾನ್ಗೆ ಬಹಳ ಆಪ್ತರು. ಇದೀಗ ವರುಣ್ ಧವನ್ ಅವರು ತಂದೆ ಡೇವಿಡ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದು ಸಿನಿಮಾದ ಶೂಟಿಂಗ್ ಸೆಟ್ಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ‘ವಿವಾಹ್ ಕರವಾದೊ ಜೀ’ (ಮದುವೆ ಮಾಡಿಸಿಬಿಡಿ) ಎಂಬ ಹಾಡಿನ ಚಿತ್ರೀಕರಣ ನೋಡಲು ಸಲ್ಮಾನ್ ಖಾನ್ ಬಂದಿದ್ದು, ‘ಭಾರತದ ಸ್ಟಾರ್ ಬ್ಯಾಚುಲರ್’ ಎದುರು ಡ್ಯಾನ್ಸ್ ಮಾಡಲು ನರ್ವಸ್ ಆಗುತ್ತೇನೆ ಎಂದು ವರುಣ್ ಬರೆದುಕೊಂಡಿದ್ದಾರೆ. ವರುಣ್ ಅವರ ಡ್ಯಾನ್ಸಿಂಗ್ ಸ್ಕಿಲ್ ನೋಡಿ ಭೇಷ್ ಎಂದಿದ್ದಾರೆ ಸಲ್ಲು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ