Headlines

‘ವಾರಣಾಸಿ’ ಚಿತ್ರೀಕರಣಕ್ಕೆ ಐಮ್ಯಾಕ್ಸ್ ಬಳಸಿದ್ದೇಕೆ: ಕಾರಣ ನೀಡಿದ ರಾಜಮೌಳಿ – Kannada News | SS Rajamouli explains why he choose IMAX camera to Shoot Varanasi movie

ರಾಜಮೌಳಿ (Rajamouli) ನಿರ್ದೇಶಿಸಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ‘ವಾರಣಾಸಿ’ ಭಾರತದಲ್ಲಿ ಮಾತ್ರವಲ್ಲ ವಿಶ್ವ ಸಿನಿಮಾ ರಂಗದಲ್ಲಿಯೇ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಶುರುವಾಗಲಿದೆ. ಕೆಲ ವಾರಗಳ ಹಿಂದಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ದಿನ ಮಾತನಾಡಿದ್ದ ರಾಜಮೌಳಿ, ಈ ಸಿನಿಮಾಕ್ಕಾಗಿ ತಾವು ಐಮ್ಯಾಕ್ಸ್ ಕ್ಯಾಮೆರಾಗಳನ್ನು ಬಳಸಿದ್ದಾಗಿ ಹೇಳಿದ್ದರು. ಇದೀಗ ತಾವು, ಐಮ್ಯಾಕ್ಸ್ ಕ್ಯಾಮೆರಾಗಳನ್ನೇ ಬಳಸಿದ್ದು ಏಕೆಂದು ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ತಾವು ಐಮ್ಯಾಕ್ಸ್ ಕ್ಯಾಮೆರಾಗಳನ್ನು ಬಳಸಿದ್ದಕ್ಕೆ ಕಾರಣ ನೀಡಿದ್ದಾರೆ. ಸಿನಿಮಾನಲ್ಲಿ ಅಂಟಾರ್ಟಿಕಾದ ಹಿಮ ಬೆಟ್ಟದ ದೃಶ್ಯಗಳು, ರಾಮಾಯಣದ ದೃಶ್ಯಗಳು ಇವೆಲ್ಲ ಇವೆ. ಆ ದೃಶ್ಯಗಳಲ್ಲಿ ಬಳಸಿರುವ ಬೆಟ್ಟಗಳು, ಬೆಂಕಿ, ಇನ್ನೂ ಹಲವು ವಸ್ತುಗಳು ಅಗಲವಾಗಿರುವ ಜೊತೆಗೆ ಬಹಳ ಉದ್ದವಾಗಿಯೂ ಇವೆ. ಹಾಗಾಗಿ ಅವುಗಳ ಬೃಹತ್ತತೆ, ವಿಶೇಷವಾಗಿ ಎತ್ತರವನ್ನು ಸರಿಯಾಗಿ ತೋರಿಸಲೆಂದು ತಾವು ಐಮ್ಯಾಕ್ಸ್ ಕ್ಯಾಮೆರಾ ಬಳಸಿದ್ದಾಗಿ ರಾಜಮೌಳಿ ಹೇಳಿದ್ದಾರೆ.

ನಾನು ಈ ಬಾರಿ ಕ್ಯಾಮೆರಾ ಕುರಿತಾಗಿ ಯಾವುದೇ ತಾಂತ್ರಿಕತೆಯಲ್ಲಿ ತೊಡಗಿಕೊಳ್ಳಲಿಲ್ಲ. ಎಲ್ಲವನ್ನೂ ನಮ್ಮ ಡಿಓಪಿ ನೋಡಿಕೊಂಡರು. ನಾನು ಅವರಿಗೆ ನನ್ನ ವಿಷನ್ ಅಷ್ಟನ್ನೇ ಹೇಳುತ್ತಿದ್ದೆ, ಇದು ನನ್ನ ಕಲ್ಪನೆ ಹೀಗೆ ದೃಶ್ಯ ಬರಬೇಕು ಎಂಬುದು ನನ್ನ ಉದ್ದೇಶ ಎಂದಷ್ಟೆ ಹೇಳುತ್ತಿದ್ದೆ. ನಮ್ಮ ಡಿಓಪಿ ಅದಕ್ಕೆ ತಕ್ಕಂತೆ ಎಲ್ಲವನ್ನೂ ಅರೇಂಜ್ ಮಾಡಿ ನನಗೆ ಔಟ್​​ಪುಟ್ ನೀಡುತ್ತಿದ್ದರು ಎಂದಿದ್ದಾರೆ ರಾಜಮೌಳಿ. ‘ವಾರಣಾಸಿ’ ಸಿನಿಮಾಕ್ಕೆ ಡಿಓಪಿ ಆಗಿ ಕೆಲಸ ಮಾಡಿರುವುದು ಪಿಎಸ್​​ ವಿನೋದ್.

ಇತರೆ ಸಿನಿಮಾಗಳನ್ನು ಸಿನಿಮಾಸ್ಕೋಪ್ ಅಥವಾ 70 ಎಂಎಂ ಕ್ಯಾಮೆರಾಗಳು ತೋರಿಸುವುದಕ್ಕಿಂತಲೂ 26% ಹೆಚ್ಚಿನ ದೃಶ್ಯಗಳನ್ನು ಐಮ್ಯಾಕ್ಸ್ ತೋರಿಸುತ್ತದೆ. ಜೊತೆಗೆ ಇತರೆ ಕ್ಯಾಮೆರಾಗಳಿಗಿಂತಲೂ ಹೆಚ್ಚು ಶಾರ್ಪ್ ಆದ ದೃಶ್ಯಗಳನ್ನು ಐಮ್ಯಾಕ್ಸ್ ಕ್ಯಾಮೆರಾ ಮತ್ತು ಪ್ರೊಜೆಕ್ಷನ್ ನೀಡುತ್ತದೆ. ಇದೇ ಕಾರಣಕ್ಕೆ ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ಐಮ್ಯಾಕ್ಸ್​​ನಲ್ಲಿಯೇ ಚಿತ್ರೀಕರಣ ಮಾಡಲಾಗುತ್ತದೆ. ವಿಶ್ವಶ್ರೇಷ್ಠ ನಿರ್ದೇಶಕ ಎನಿಸಿಕೊಂಡಿರುವ ಕ್ರಿಸ್ಟೊಫರ್ ನೋಲನ್ ಸಹ ತಮ್ಮ ಸಿನಿಮಾಗಳನ್ನು ಐಮ್ಯಾಕ್ಸ್​​ನಲ್ಲಿ ಚಿತ್ರೀಕರಿಸುತ್ತಾರೆ. ಅದೂ ಅಲ್ಲದೆ ಅವರು ಡಿಜಿಟಲ್ ಬದಲಿಗೆ ಐಮ್ಯಾಕ್ಸ್ ರೀಲ್​​ಗಳನ್ನು ಚಿತ್ರೀಕರಣಕ್ಕೆ ಬಳಸುತ್ತಾರೆ.

ಇದನ್ನೂ ಓದಿ:94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ

‘ವಾರಣಾಸಿ’ ಸಿನಿಮಾ ಭಾರತದ ಈ ವರೆಗೆ ಭಾರಿ ಬಜೆಟ್ ಸಿನಿಮಾ ಆಗಿದೆ. ಸಿನಿಮಾಕ್ಕಾಗಿ ಸುಮಾರು 1000 ದಿಂದ 1500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಸಿನಿಮಾವು ಭಾರತದ ಪೌರಾಣಿಕ ಕತೆಗಳ ಅಂಶಗಳನ್ನು ಒಳಗೊಂಡಿದೆ. ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಇನ್ನೂ ಕೆಲವು ಜನಪ್ರಿಯ ವಿದೇಶಿ ನಟರು ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *