ಮೇ 17ರಿಂದ ಮೇ 25ರವರೆಗೆ ಪ್ರೇಮ, ಸ್ತ್ರೀ ಪುರುಷರ ನಡುವೆ ಹೊಂದಾಣಿಕೆ ಹೇಗಿದೆ ಎಂದು ತಿಳಿಯಲು ಮುಖ್ಯವಾಗಿ ನೋಡಬೇಕಾದ ಶುಕ್ರನ ಸ್ಥಾನವು ರಾಶಿಯ ಪ್ರಕಾರ ಮಿಥುನದಲ್ಲಿ, ಹೋರೆಯ ಪ್ರಕಾರ ಸಿಂಹದಲ್ಲಿ, ದ್ರೇಕ್ಕಾಣದ ಪ್ರಕಾರ ಮಿಥುನದಲ್ಲಿ, ನವಾಂಶದ ಪ್ರಕಾರ ತುಲಾದಲ್ಲಿ ಇರುವ ಕಾರಣ ತನ್ನ ಸ್ಥಾನದ ಆಧಾರದ ಮೇಲೆ ಫಲವನ್ನು ನೀಡುವನು.
ಮೇಷ ರಾಶಿ :
ಶುಕ್ರನ ಸಂಚಾರವು ಪ್ರೇಮದಲ್ಲಿ ಹೊಸ ಉತ್ಸಾಹ ತರಲಿದೆ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹಳೆ ವಿವಾದ ಮರೆತು ಸಂಗಾತಿಯ ಜೊತೆ ಸುಂದರ ಕ್ಷಣ ಕಳೆಯಿರಿ. ಕಾಮನೆಗಳ ಮೇಲೆ ಹಿಡಿತವಿರಲಿ, ಇಲ್ಲವಾದರೆ ಮನಸ್ತಾಪ ಸಂಭವ.
ವೃಷಭ ರಾಶಿ :
ನಿಮ್ಮ ರಾಶಿಯಲ್ಲಿ ಗ್ರಹಗಳ ಸಮಾಗಮವಿರುವುದರಿಂದ ಆಕರ್ಷಣೆ ಹೆಚ್ಚಲಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಆದರೆ, ಸಣ್ಣ ವಿಷಯಕ್ಕೆ ವಿಚ್ಛೇದನದ ಮಾತು ಬೇಡ. ತಾಳ್ಮೆಯಿಂದ ವರ್ತಿಸಿದರೆ ಸಂಬಂಧ ಗಟ್ಟಿಯಾಗುವುದು. ಕಾಮದ ಹಸಿವಿಗಿಂತ ಭಾವನೆಗೆ ಒತ್ತು ನೀಡಿ.
ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಈ ವಾರ ಸ್ವಲ್ಪ ಮಿಶ್ರಫಲ. ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮೂಡಬಹುದು. ಕಾಮಪ್ರಚೋದಕ ಆಲೋಚನೆಗಳು ಹೆಚ್ಚಾಗಲಿವೆ. ಸಂಬಂಧದಲ್ಲಿ ಪಾರದರ್ಶಕತೆ ಇರಲಿ. ಮದುವೆಯ ಮಾತುಕತೆ ಸದ್ಯಕ್ಕೆ ಮುಂದುೂಡುವುದು ಒಳಿತು.
ಕರ್ಕಾಟಕ ರಾಶಿ :
ಭಾವನಾತ್ಮಕ ಜೀವಿಗಳಾದ ನಿಮಗೆ ಸಂಗಾತಿಯ ಬೆಂಬಲ ಸಿಗಲಿದೆ. ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಹಳೆಯ ಸಂಬಂಧದ ನೆನಪುಗಳು ಕಾಡಬಹುದು. ದೈಹಿಕ ಸುಖಕ್ಕಿಂತ ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಿ, ಸಂಬಂಧ ಸುಸ್ಥಿರವಾಗಿರುತ್ತದೆ.
ಸಿಂಹ ರಾಶಿ :
ಸಂಗಾತಿಯ ಮೇಲೆ ಸವಾರಿಕೆ ಮಾಡಬೇಡಿ. ಪ್ರೇಮ ಜೀವನದಲ್ಲಿ ಅಹಂಕಾರ ಬೇಡ. ವಿಚ್ಛೇದನದ ಅಂಚಿನಲ್ಲಿರುವವರಿಗೆ ರಾಜಿ ಸಂಧಾನದ ಅವಕಾಶವಿದೆ. ವೈವಾಹಿಕ ಜೀವನದಲ್ಲಿ ಕಾಮ ಮತ್ತು ಸಂವಹನ ಸಮತೋಲನದಲ್ಲಿರಲಿ. ಹೊಸ ವ್ಯಕ್ತಿಯ ಪರಿಚಯ ಆಕರ್ಷಣೆಗೆ ನಾಂದಿ ಹಾಡಬಹುದು.
ಕನ್ಯಾ ರಾಶಿ :
ಅತಿಯಾದ ವಿಮರ್ಶೆ ಪ್ರೇಮವನ್ನು ಕೊಲ್ಲಬಹುದು. ಸಂಗಾತಿಯ ತಪ್ಪು ಹುಡುಕುವುದನ್ನು ಬಿಟ್ಟರೆ ವಾರ ಸುಗಮವಾಗಿರುತ್ತದೆ. ವಿವಾಹ ಪ್ರಸ್ತಾಪಗಳು ಯಶಸ್ವಿಯಾಗಲಿವೆ. ಏಕಾಂತದ ಕ್ಷಣಗಳು ಸಂಬಂಧವನ್ನು ಮತ್ತಷ್ಟು ಹತ್ತಿರ ತರಲಿವೆ. ಕಾಮನೆಗಳ ಪೂರೈಕೆಯಲ್ಲಿ ಪರಸ್ಪರ ಗೌರವವಿರಲಿ.
ತುಲಾ ರಾಶಿ :
ಶುಕ್ರನ ಪ್ರಭಾವದಿಂದ ನಿಮ್ಮ ಆಕರ್ಷಣೆ ಹೆಚ್ಚಲಿದೆ. ಪ್ರೇಮ ಸಂಬಂಧಗಳು ವಿವಾಹಕ್ಕೆ ನಾಂದಿ ಹಾಡಲಿವೆ. ಕಾಮದ ತುಡಿತ ಹೆಚ್ಚಿದ್ದರೂ, ವಿವೇಚನೆ ಮರೆಯಬೇಡಿ. ಕಾನೂನುಬದ್ಧ ವಿಚ್ಛೇದನ ಪ್ರಕ್ರಿಯೆಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಸಂಬಂಧದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ.
ವೃಶ್ಚಿಕ ರಾಶಿ :
ವಿಚ್ಛೇದನದಲ್ಲಿ ನಿಮಗೆ ತೀವ್ರವಾದ ಕಾಮನೆಗಳು ಕಾಡಲಿವೆ. ಗುಪ್ತ ಸಂಬಂಧಗಳಿಂದ ದೂರವಿರಿ, ಇದು ಸಂಸಾರದಲ್ಲಿ ಬಿರುಕು ತರಬಹುದು. ದಾಂಪತ್ಯದಲ್ಲಿ ವಿಚ್ಛೇದನದ ಆಲೋಚನೆ ಬಿಟ್ಟು ಸಮನ್ವಯಕ್ಕೆ ಪ್ರಯತ್ನಿಸಿ. ಪ್ರೇಮದಲ್ಲಿ ನಂಬಿಕೆಯೇ ಜೀವಾಳ, ಅದನ್ನು ಹೇಗಾದರೂ ಉಳಿಸಿಕೊಳ್ಳಿ.
ಧನು ರಾಶಿ :
ಸದಾ ಸ್ವಾತಂತ್ರ್ಯವನ್ನೇ ಬಯಸುವ ನಿಮಗೆ ಸಂಗಾತಿಯ ಅತಿಯಾದ ಹಸ್ತಕ್ಷೇಪ ಕಿರಿಕಿರಿ ಎನಿಸಬಹುದು. ವಿವಾಹ ಜೀವನದಲ್ಲಿ ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಪ್ರವಾಸದ ಯೋಗ ತಾನಾಗಿಯೇ ಒದಗುವ ಸಾಧ್ಯಯೆ ಇದೆ. ಕಾಮದ ವಿಷಯದಲ್ಲಿ ನವೀನತೆ ಬಯಸುವಿರಿ. ಹಳೆಯ ವಿವಾದಗಳನ್ನು ಕೆದಕದೆ ವರ್ತಮಾನದಲ್ಲಿ ಬದುಕಿದರೆ ಚೆನ್ನ.
ಮಕರ ರಾಶಿ :
ಕೆಲಸದ ಒತ್ತಡದ ನಡುವೆ ಪ್ರೇಮಕ್ಕೆ ಸಮಯ ಮೀಸಲಿಡಿ. ಸಂಗಾತಿಯ ಪ್ರೀತಿಯನ್ನು ಕೇವಲವಾಗಿ ಕಂಡು ಕಡೆಗಣಿಸಬೇಡಿ. ವಿವಾಹ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ವಿಚ್ಛೇದನ ಬಯಸುವವರಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಸಹಾಯವಾಗಲಿದೆ. ಸಂಬಂಧದಲ್ಲಿ ಸ್ಥಿರತೆ ಮತ್ತು ಬದ್ಧತೆ ಮುಖ್ಯವಾಗಲಿ.
ಇದನ್ನೂ ಓದಿ: ಮನೆಯಲ್ಲಿ ಆಮೆ ಪ್ರತಿಮೆ ಇಟ್ಟರೆ ಅದೃಷ್ಟ ಖುಲಾಯಿಸುತ್ತಾ? ವಾಸ್ತು ಶಾಸ್ತ್ರ ಹೇಳುವುದೇನು?
ಕುಂಭ ರಾಶಿ :
ವ್ಯಕ್ತಿತ್ವದಲ್ಲಿನ ಬದಲಾವಣೆ ಸಂಗಾತಿಗೆ ಅಚ್ಚರಿ ತರಬಹುದು. ಪ್ರೇಮದಲ್ಲಿ ಹೊಸತನ ಕಾಣುವಿರಿ. ದೈಹಿಕ ಆಕರ್ಷಣೆಗಿಂತ ಬೌದ್ಧಿಕ ಸಂವಾದ ಆಪ್ತವೆನಿಸಲಿದೆ. ವಿಚ್ಛೇದನ ಪ್ರಕರಣಗಳಲ್ಲಿ ನಿಮ್ಮ ಪರ ತೀರ್ಪು ಬರುವ ಸಾಧ್ಯತೆ ಇದೆ. ಮದುವೆಯ ಮಾತುಕತೆ ಯಶಸ್ವಿಯಾಗಲಿದೆ.
ಮೀನ ರಾಶಿ :
ಕನಸಿನ ಲೋಕದಿಂದ ಹೊರಬಂದು ವಾಸ್ತವದ ಪ್ರೇಮವನ್ನು ಒಪ್ಪಿಕೊಳ್ಳುವುದು ಕಷ್ಟ. ಸಂಗಾತಿಯ ಜೊತೆಗಿನ ಕಾಮನೆಗಳು ತೃಪ್ತಿ ನೀಡಲಿವೆ. ವಿವಾಹ ಆಕಾಂಕ್ಷಿಗಳಿಗೆ ಶುಭ ವಾರ್ತೆಯಿಂದ ಸಂತೋಷ. ವಿಚ್ಛೇದನದ ಭಯ ದೂರವಾಗಿ ಮತ್ತೆ ಒಂದಾಗುವ ಲಕ್ಷಣಗಳಿವೆ. ಪ್ರೀತಿಯಲ್ಲಿ ನಿಃಸ್ವಾರ್ಥತೆ ಇರಲಿ.
– ಲೋಹಿತ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ