ಮೇಷ ರಾಶಿ: ಉದ್ಯೋಗ ಹಾಗೂ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ. ಹೊಸ ಹೂಡಿಕೆಗಳಿಗೆ ಸೂಕ್ತ ಸಮಯ ಹಾಗೂ ಆರ್ಥಿಕವಾಗಿ ಶುಭ ಫಲಗಳು ದೊರೆಯಲಿವೆ. ಕೋಪ ಮತ್ತು ಅವಸರದ ನಿರ್ಧಾರಗಳಿಂದ ಕುಟುಂಬದಲ್ಲಿ ಮನಸ್ತಾಪಗಳು ಉಂಟಾಗಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ.
ವೃಷಭ ರಾಶಿ: ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು, ಆಸ್ತಿ ಖರೀದಿಗೆ ಯೋಗವಿದೆ. ಅನಗತ್ಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣದ ಸಮಯದಲ್ಲಿ ಎಚ್ಚರಿಕೆ ವಹಿಸಿ.
ಮಿಥುನ ರಾಶಿ: ಬುದ್ಧಿವಂತಿಕೆಯಿಂದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಾ. ವ್ಯಾಪಾರ-ವಹಿವಾಟಿನಲ್ಲಿ ಉತ್ತಮ ಲಾಭ ಮತ್ತು ಹೊಸ ಸವಾಲುಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಕೆಲಸದಲ್ಲಿ ಗೊಂದಲ ಹಾಗೂ ಅನಗತ್ಯ ಚಿಂತೆಗಳು ಮನಸ್ಸನ್ನು ಕಾಡಬಹುದು. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಒಳಿತು.
ಕರ್ಕಾಟಕ ರಾಶಿ: ಸೂರ್ಯ ಮತ್ತು ಗುರು ಗ್ರಹಗಳ ಅನುಕೂಲದಿಂದಾಗಿ ಕಾರ್ಯಸಿದ್ದಿ ಉಂಟಾಗಲಿದೆ. ಸಮಾಜದಲ್ಲಿ ಗೌರವ-ಆದರಗಳು ವೃದ್ಧಿಯಾಗುತ್ತವೆ. ನಿಕಟ ಸಂಬಂಧಿಕರೊಂದಿಗೆ ಮಾತನಾಡುವಾಗ ತಾಳ್ಮೆ ವಹಿಸಿ, ಇಲ್ಲದಿದ್ದರೆ ಸಣ್ಣ ವಿಷಯಕ್ಕೆ ಜಗಳವಾಗಬಹುದು.
ಸಿಂಹ ರಾಶಿ: ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸೃಜನಶೀಲ ರಂಗದಲ್ಲಿದ್ದವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಆರೋಗ್ಯ ಸಮಸ್ಯೆಗಳು ಅದಲ್ಲಿಯೂ ವಿಶೇಷವಾಗಿ ಉದರ ಸಂಬಂಧಿ ರೋಗಗಳು ಬಾಧಿಸಬಹುದು. ಖರ್ಚುಗಳ ಮೇಲೆ ನಿಯಂತ್ರಣವಿರಲಿ.
ಕನ್ಯಾ ರಾಶಿ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶವಿದೆ. ಸಾಲದ ಬಾಕಿ ಹಣ ಮರಳಿ ಬರುವ ಸಾಧ್ಯತೆ ಇದೆ. ಸಣ್ಣಪುಟ್ಟ ನಿರ್ಲಕ್ಷ್ಯವೂ ಕೆಲಸದಲ್ಲಿ ವಿಳಂಬ ತರಬಹುದು. ಸಹೋದ್ಯೋಗಿಗಳೊಂದಿಗೆ ನಯವಾಗಿ ವರ್ತಿಸಿ.
ತುಲಾ ರಾಶಿ: ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಪ್ರೇಮಿಗಳಿಗೆ ಮತ್ತು ಹೊಸ ಸಂಬಂಧಗಳನ್ನು ಪ್ರಾರಂಭಿಸುವವರಿಗೆ ಶುಭ ದಿನಗಳು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅಂಧವಾಗಿ ನಂಬಬೇಡಿ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಏರಿಳಿತವಾಗಬಹುದು.
ವೃಶ್ಚಿಕ ರಾಶಿ: ವೃತ್ತಿಬದುಕಿನಲ್ಲಿ ಹಠಾತ್ ಧನಲಾಭ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಆಲೋಚನೆಗಳಿಗೆ ಸಮಾಜದಲ್ಲಿ ಬೆಂಬಲ ಸಿಗುತ್ತದೆ. ಕೆಲಸದ ಒತ್ತಡ ಹೆಚ್ಚಾಗುವುದರಿಂದ ಆಯಾಸ ಕಾಡಬಹುದು. ವಾದ-ವಿವಾದಗಳಿಂದ ದೂರವಿರಿ.
ಧನು ರಾಶಿ: ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಗಳು ಹಾಗೂ ವಿದೇಶಿ ಪ್ರಯಾಣದ ಯೋಗವಿದೆ. ಯೋಜಿತ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ.
ಮಕರ ರಾಶಿ: ಕಠಿಣ ಸವಾಲುಗಳನ್ನು ಎದುರಿಸಿ ಗೆಲ್ಲುವ ಸಾಮರ್ಥ್ಯ ನಿಮಗಿರುತ್ತದೆ. ವ್ಯಾಪಾರಿಗಳಿಗೆ ಹೊಸ ಪಾಲುದಾರಿಕೆಗಳಿಂದ ಲಾಭ. ಶನಿಯ ಪ್ರಭಾವದಿಂದ ಕೆಲಸಗಳಲ್ಲಿ ನಿಧಾನಗತಿ ಇರಬಹುದು. ವಾಹನ ಚಾಲನೆ ಮಾಡುವಾಗ ಜಾಗ್ರತೆ ಅಗತ್ಯ.
ಕುಂಭ ರಾಶಿ: ಸಕಾರಾತ್ಮಕ ಅಂಶ: ಸಮಾಜಸೇವೆ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಒಳ್ಳೆಯ ಸಮಯ. ಆರ್ಥಿಕ ಚೇತರಿಕೆ ಕಂಡುಬರಲಿದೆ. ಶರೀರದಲ್ಲಿ ಆಲಸ್ಯ ಮತ್ತು ನಿರಾಸಕ್ತಿ ಉಂಟಾಗಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ವೈಮನಸ್ಸು ಬರಬಹುದು.
ಮೀನ ರಾಶಿ: ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಾ. ಶನಿ ವಕ್ರ ದೃಷ್ಟಿಯಿಂದ ಹಣಕಾಸಿನ ವೆಚ್ಚ ಹೆಚ್ಚಬಹುದು ಮತ್ತು ಮಾನಸಿಕ ತಂಟೆ-ತಕರಾರುಗಳು ಉಂಟಾಗಬಹುದು.
ಲೋಹಿತ್ ಹೆಬ್ಬಾರ್