ಚೆನ್ನೈ, (ಮೇ 08): ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ (Tamil Nadu Assembly Election Result) ನಂತರ ಸರ್ಕಾರ ರಚನೆಯ ಕಸರತ್ತು ಈಗ ರೋಚಕ ಹಂತಕ್ಕೆ ತಲುಪಿದೆ. ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ TVK ಪಕ್ಷವು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತ ಸಾಬೀತುಪಡಿಸುವ ಸವಾಲು ಎದುರಾಗಿದೆ. ಎರಡು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದ್ರು ಕೂಡ, ಬಹುಮತ ಇಲ್ಲದ ಕಾರಣ ರಾಜ್ಯಪಾಲರು ಒಪ್ಪಿಗೆ ಸೂಚಿಸಿಲ್ಲ, ಇದು ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇನ್ನು ಈ ಬಗ್ಗೆ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಸೂರಜ್ ಹೆಗ್ಡೆ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಸೆಕ್ಯುಲರ್ ಫೋರ್ಸಸ್, ಅದು ಒಂದು ಕಡೆ ಬರಬೇಕಾಗುತ್ತೆ. ಹಾಗಾಗಿ ಟಿವಿಕೆಗೆ ಬೆಂಬಲ. ಇಲ್ಲದೆ ಇದ್ರೆ ಇವರು ಬೇರೆ ರೀತಿ ಇಲ್ಲಿ ಬೇರೆ ತರ ಸಪೋರ್ಟ್ ಕೊಡೋಕೆ ಹೋಗಿದ್ರು. ಅವರ ಸಪೋರ್ಟ್ ಕೊಟ್ರೆ ಗವರ್ನರ್ ಅವರನ್ನ ಕರೆಯೋಕು ರೆಡಿಯಾಗಿದ್ದರು. ಈಗ ಗವರ್ನರ್ ಯಾಕೆ ಕರೆಯುತ್ತಿಲ್ಲ, ಯಾಕೆ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ ಬೆಂಬಲ ಕೊಟ್ಟಿದೆ ಅನ್ನುವಂತಹ ಒಂದೇ ಕಾರಣಕ್ಕೆ ಗವರ್ನರ್ ಅವಕಾಶ ಮಾಡಿಕೊಡುತ್ತಿಲ್ಲ.ಇದೇ ರೀತಿ ಕರ್ನಾಟಕದಲ್ಲಿ ಆದಾಗ ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟಿರಲಿಲ್ವ? ಎಂದು ಪ್ರಶ್ನಿಸಿದರು.
ಇದೇ ರೀತಿ ಮಹಾರಾಷ್ಟ್ರದಲ್ಲಿ ಆದಾಗ ಇದೇ ರೀತಿ ಗೋವಾದಲ್ಲಿ ಆದಾಗ ಯಾಕೆ ಕರೆದ್ರು? ಇವರು ಒಂದೊಂದು ರಾಜ್ಯಕ್ಕೆ ಒಂದೊಂದು ತಾರತಮ್ಯ ಮಾಡೋಕೆ ಆಗಲ್ಲ. ಇದು ನಮ್ಮ ಸಂವಿಧಾನ ಏನ್ ಹೇಳುತ್ತೆ ಅದರ ಪ್ರಕಾರ ನಡೆದುಕೊಂಡು ಹೋಗಬೇಕಾಗುತ್ತೆ. ನಾವು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುತ್ತೇವೆ. ನಾವು ಚುನಾವಣೆಗೆ ಹೋಗಲು ಸಿದ್ಧ, ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ. ಡಿಎಂಕೆ – ಎಐಎಡಿಎಂಕೆ ಒಂದಾದ್ರೆ ಅವರನ್ನು ಹೇಗೆ ಸರಕಾರ ರಚಿಸಲು ಕರೆಯುತ್ತಾರೆ? ಅವರಲ್ಲಿ ಬಹುಮತ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.