ದಳಪತಿ ವಿಜಯ್ ಚುನಾವಣೆಗೆ ಸ್ಪರ್ಧೆ ಮಾಡಿದಾಗಿನಿಂದಲೂ ತ್ರಿಷಾ ಹೆಸರು ಸದಾ ಚರ್ಚೆಯಲ್ಲಿ ಇದೆ. ವಿಜಯ್ ಹಾಗೂ ತ್ರಿಷಾ ಅವರ ಆಪ್ತತೆ ಚರ್ಚೆಗೆ ಮೂಲ ಕಾರಣ. ಇಬ್ಬರೂ ವಿವಾಹ ಆಗಬಹುದು ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದೆ. ಅದೇ ರೀತಿ ತ್ರಿಷಾ ಅವರನ್ನು ವಿಜಯ್ ರಾಜಕೀಯಕ್ಕೆ ಕರೆತರಬಹುದು ಎಂಬ ಮಾತು ಕೂಡ ಕೇಳಿ ಬಂದಿದೆ. ಈ ಮಧ್ಯೆ ಎಐಎಡಿಎಂಕೆ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ಬಿ. ಉದಯಕುಮಾರ್ ಮುಖ್ಯಮಂತ್ರಿ ವಿಜಯ್ ಹಾಗೂ ತ್ರಿಷಾ ಸಂಬಂಧವನ್ನು ಉಲ್ಲೇಖಿಸಿ ಅತ್ಯಂತ ಕಟುವಾಗಿ ವ್ಯಂಗ್ಯವಾಡಿದ್ದಾರೆ.
ವೇದಿಕೆಯಲ್ಲಿ ಮಾತನಾಡಿದ ಉದಯಕುಮಾರ್, ‘ಮುಖ್ಯಮಂತ್ರಿ ವಿಜಯ್ ಅವರನ್ನು ಮಧ್ಯರಾತ್ರಿ ಭೇಟಿ ಮಾಡಲು ಮತ್ತು ಅವರ ಜೊತೆ ಕೇಕ್ ಕತ್ತರಿಸಲು ನಟಿ ತ್ರಿಷಾ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಪರಿಸ್ಥಿತಿ ಹೀಗಿರುವಾಗ, ಶೀಘ್ರದಲ್ಲೇ ವಿಜಯ್ ಅವರು ವ ಅವರನ್ನು ತಮಿಳುನಾಡಿನ ಉಪಮುಖ್ಯಮಂತ್ರಿ ಮಾಡಿದರೂ ಯಾರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಲೇವಡಿ ಮಾಡಿದ್ದಾರೆ. ಮಾಜಿ ಸಚಿವರ ಈ ಹೇಳಿಕೆ ತಮಿಳುನಾಡು ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣ ಆಗಿದೆ.
ವಿಜಯ್ ಸಿನಿಮಾ ರಿಲೀಸ್‌ಗೆ ಅಪ್ರಕಟಿತ ರಜೆ
ಇದೇ ವೇಳೆ ಮುಖ್ಯಮಂತ್ರಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಪ್ರಕಟಿತ ರಜೆ ಘೋಷಿಸಿದ್ದನ್ನು ಉದಯಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ‘ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರವರೆಗೆ ಇಡೀ ಆಡಳಿತ ಯಂತ್ರವೇ ತಮ್ಮ ಕೆಲಸವನ್ನು ಬದಿಗಿಟ್ಟು ಸಿನಿಮಾ ನೋಡಲು ಹೋಗಿದೆ’ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ವದಂತಿಗಳಿಗೆ ಸಿಕ್ಕ ಹೊಸ ರೆಕ್ಕೆ
ವಿಜಯ್ ಅವರ ಪತ್ನಿ ಸಂಗೀತಾ ಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪತಿಯ ವಿರುದ್ಧ ಪರಸ್ತ್ರೀ ಸಂಬಂಧದ ಆರೋಪ ಮಾಡಿದಾಗಿನಿಂದಲೇ ವಿಜಯ್ ಮತ್ತು ತ್ರಿಷಾ ಸಂಬಂಧದ ಚರ್ಚೆ ಜೋರಾಯಿತು.
Former AIADMK Minister R.B. Udhayakumar commented that even Trisha becoming the Deputy Chief Minister should not surprise anyone. pic.twitter.com/9oxFyAouBq
— Vignesh Theni (@Vignesh_twitz) July 25, 2026
2004ರ ಸೂಪರ್ ಹಿಟ್ ‘ಗಿಲ್ಲಿ’ ಚಿತ್ರದಿಂದ ಹಿಡಿದು ಇತ್ತೀಚಿನ ‘ಲಿಯೋ’ ಚಿತ್ರದವರೆಗೆ ವಿಜಯ್ ಹಾಗೂ ತ್ರಿಷಾ ಜೋಡಿ ತಮಿಳು ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಇದೀಗ ರಾಜಕೀಯ ವೇದಿಕೆಯಲ್ಲೂ ಇವರ ಹೆಸರು ಮುಂಚೂಣಿಗೆ ಬಂದಿರುವುದು ತಮಿಳುನಾಡಿನಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 1:05 pm, Mon, 27 July 26