Headlines

ವಿಜಯ್ ದೇವರಕೊಂಡ ಧರಿಸಿದ್ದ ಚಿನ್ನದ ಆಭರಣಗಳು ಯಾವುವು? ವಿಶೇಷತೆಯೇನು? – Kannada News | Vijay Deverakonda gold ornaments getting viral on social media

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ನಿನ್ನೆಯಷ್ಟೆ ಮದುವೆಯಾಗಿದ್ದು ಅವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹರಿದಾಡುತ್ತಿವೆ. ಇಬ್ಬರ ಮದುವೆ ಉಡುಗೆ ಆಭರಣ ನೋಡಿದ ನೆಟ್ಟಿಗರು ಇವರ ಲುಕ್ ಅನ್ನು ದೇವತೆಗಳಿಗೆ ಹೋಲಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇಬ್ಬರೂ ಧರಿಸಿದ್ದ ಚಿನ್ನದ ಆಭರಣಗಳು. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಸಹ ಸಾಕಷ್ಟು ಆಭರಣಗಳನ್ನು ಧರಿಸಿದ್ದರು, ವಿಶೇಷವೆಂದರೆ ಇಬ್ಬರೂ ಸಹ ಪುರಾತನ ಶೈಲಿಯ ಆಭರಗಳನ್ನಷ್ಟೆ ಧರಿಸಿದ್ದರು. ಅದರಲ್ಲೂ ವಿಜಯ್ ದೇವರಕೊಂಡ ಅಂತೂ ಯಾವುದೋ ದಕ್ಷಿಣದ ರಾಜನ ರೀತಿಯ ಪೋಷಾಕು ಧರಿಸಿದ್ದರು, ರಶ್ಮಿಕಾಗಿಂತಲೂ ತುಸು ಹೆಚ್ಚೇ ಆಭರಣಗಳನ್ನು ವಿಜಯ್ ದೇವರಕೊಂಡ ಧರಿಸಿದ್ದರು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ದೇವರಕೊಂಡ ಅವರ ಆಭರಣಗಳದ್ದೇ ಚರ್ಚೆ. ಆಧುನಿಕ ರೀತಿಯದ್ದಲ್ಲದೆ ಬಹಳ ಭಿನ್ನ ಜೊತೆಗೆ ಪುರಾತನ ಲುಕ್​​ನ ವಿವಿಧ ಆಭರಣಗಳನ್ನು ವಿಜಯ್ ದೇವರಕೊಂಡ ಧರಿಸಿದ್ದರು. ಕೊರಳಿಗೆ ದೊಡ್ಡ ಕಂಠಿಹಾರವನ್ನು ವಿಜಯ್ ಧರಿಸಿದ್ದರು. ಆ ಚಿನ್ನದ ಹಾರ ಪುಲಕೇಶಿ ಕಾಲದ ರಾಜರ ಸರಗಳನ್ನು ನೆನಪಿಸುತ್ತಿದ್ದು, ಅದರ ಜೊತೆಗೆ ತುಸು ಕಿರಿದಾದ ಮತ್ತೊಂದು ಚಿನ್ನದ ಹಾರ ಧರಿಸಿದ್ದರು, ಅದನ್ನು ಗುಡಿ ಹಾರ ಅಥವಾ ದೇವಾಲಯದ ಹಾರ ಎನ್ನುತ್ತಾರಂತೆ.

ಇನ್ನು ವಿಜಯ್ ದೇವರಕೊಂಡ ಎರಡೂ ಮಣಿಕಟ್ಟಿಗೆ ಧರಿಸಿದ್ದ ಆಭರಣವಂತೂ ಅದ್ಭುತವಾಗಿತ್ತು. ಹಳೆಯ, ಧಾರಾವಾಹಿ, ಸಿನಿಮಾಗಳಲ್ಲಿ ದೇವರುಗಳು ಧರಿಸುತ್ತಿದ್ದ ಆಭರಣದಂಥಹದ್ದನ್ನೇ ವಿಜಯ್ ದೇವರಕೊಂಡ ಧರಿಸಿದ್ದರು. ಮಣಿಕಟ್ಟಿಗೆ ಧರಿಸಿದ್ದ ಆಭರಣ ದೊಡ್ಡದಾಗಿಯೂ, ಕಸೂರಿ ಕೆಲಸದಿಂದಲೂ ತುಂಬಿದ್ದು ಸಖತ್ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಆಭರಣವನ್ನು ‘ಥ್ಯಾನೋಸ್ ಜ್ಯುವೆಲರಿ’ ಎಂದು ಸಹ ಕರೆದಿದ್ದಾರೆ.

ಇದನ್ನೂ ಓದಿ:ವಿಜಯ್ ದೇವರಕೊಂಡ ತಾಳಿ ಕಟ್ಟುವಾಗ ರಶ್ಮಿಕಾ ಮಂದಣ್ಣ ಆನಂದ ಭಾಷ್ಪ

ಇನ್ನು ತೋಳಿಗೆ ತೋಳು ಬಂಧಿ ಅಥವಾ ವಂಕಿಯನ್ನು ಸಹ ಬಲಗೈ ತೋಳಿಗೆ ಧರಿಸಿದ್ದರು. ಎರಡೂ ಕಿವಿಗಳಿಗೆ ಸುಂದರವಾದ ದುಂಡನೆಯ ಓಲೆಗಳನ್ನು ವಿಜಯ್ ಧರಿಸಿದ್ದರು. ಹಣೆಗೆ ಚಿನ್ನದ ಬಾಸಿಂಗ ಧರಿಸಿದ್ದರು. ಬೆರಳುಗಳಿಗೆ ಒಂದು ನಿಶ್ಚಿತಾರ್ಥದ ಉಂಗುರ ಮತ್ತೊಂದು ಮದುವೆಯ ಉಂಗುರ ಧರಿಸಿದ್ದರು. ಎರಡೂ ಕಾಲಿಗೆ ಚಿನ್ನದ ಕಡಗ, ಸೊಂಟಕ್ಕೆ ಒಡ್ಯಾಣವನ್ನು ಸಹ ವಿಜಯ್ ದೇವರಕೊಂಡ ಧರಿಸಿದ್ದರು. ಈ ಎಲ್ಲ ಆಭರಣಗಳು ಪುರಾತನ ಡಿಸೈನ್​​ಗಳನ್ನು ಒಳಗೊಂಡಿದ್ದು ವಿಶೇಷ. ಎಲ್ಲ ಆಭರಣಗಳು ವಿಜಯ್​​ಗೆ ಒಂದು ರೀತಿ ರಾಜನ ಲುಕ್ ಅನ್ನು ನೀಡಿತ್ತು.

ಇದೀಗ ಸಾಮಾಜಿಕ ಜಾಲತಾಣದ ತುಂಬೆಲ್ಲ ವಿಜಯ್ ಅವರ ಚಿನ್ನದ ಆಭರಣದ್ದೇ ಚರ್ಚೆ ನಡೆಯುತ್ತಿದೆ. ವಿಜಯ್ ಕನಿಷ್ಟ ಒಂದು ಕೆಜಿ ಚಿನ್ನವನ್ನಾದರೂ ತಮ್ಮ ಮೈಮೇಲೆ ಧರಿಸಿಕೊಂಡಿದ್ದರು. ವಿಜಯ್ ಧರಿಸಿದ್ದ ಆಭರಣಗಳನ್ನು ನೋಡಿ, ಪುರುಷರಿಗೆ ಇಷ್ಟು ಆಭರಣ ಇದೆಯೆಂಬುದೇ ನಮಗೆ ತಿಳಿದಿರಲಿಲ್ಲ ಎಂದು ಹಲವು ಕಮೆಂಟ್​​ಗಳನ್ನು ಮಾಡಿದ್ದಾರೆ. ಇಷ್ಟು ಚಿನ್ನ ಇದ್ದರೆ ಸಾಕು ಜೀವನ ಸುಖವಾಗಿ ನಡೆಯಲು ಎಂದು ಇನ್ನು ಕೆಲವರು ಹೇಳಿದ್ದಾರೆ. ಒಟ್ಟಾರೆ ವಿಜಯ್ ಧರಿಸಿದ್ದ ಚಿನ್ನವಂತೂ ಹಲವರ ಕಣ್ಣು ಕುಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *