Headlines

ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್! ಕಾನೂನು ಪರೀಕ್ಷೆಗಾಗಿ ಅನಾರೋಗ್ಯದ ನಾಟಕ – Kannada News | VTU Syndicate Member Dileep Krishna Allegedly Faked Illness to Cheat in Law Exam

ಬೆಂಗಳೂರು, ಆಗಸ್ಟ್ 18: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸಿಂಡಿಕೇಟ್ ಸದಸ್ಯ ದಿಲೀಪ್ ಕೃಷ್ಣ ಕಾನೂನು ಪರೀಕ್ಷೆಯಲ್ಲಿ ವಂಚನೆ ಎಸಗಲು ಅನಾರೋಗ್ಯದ ನಾಟಕವಾಡಿದ ಪ್ರಕರಣ ‘ಟಿವಿ9’ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಉನ್ನತ ಸ್ಥಾನದಲ್ಲಿದ್ದುಕೊಂಡು ಈ ರೀತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪರೀಕ್ಷೆಯ ದಿನಗಳಲ್ಲಿ ದಿಲೀಪ್ ಕೃಷ್ಣ ಕುತ್ತಿಗೆ ಮತ್ತು ಕೈಗೆ ಬ್ಯಾಂಡೇಜ್ ಹಾಕಿಕೊಂಡು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದರು. ನಡೆದಾಡಲು ಸಹ ಕಷ್ಟಪಡುವಂತೆ ನಟಿಸುತ್ತಿದ್ದರು. ಆದರೆ, ಪರೀಕ್ಷೆಗೆ ರಜೆ ಇದ್ದ ದಿನಗಳಲ್ಲಿ ಅವರು ಯಾವುದೇ ಬ್ಯಾಂಡೇಜ್ ಇಲ್ಲದೆ, ಸಭೆಗಳಲ್ಲಿ ಭಾಗವಹಿಸಿ, ಆರಾಮವಾಗಿ ಓಡಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಯಲಹಂಕದ ದೀಕ್ಷಾ ಕ್ಲಿನಿಕ್‌ನ ಡಾಕ್ಟರ್ ಅರುಣ್ ಕುಮಾರ್ ಅವರಿಂದ ಸುಳ್ಳು ವೈದ್ಯಕೀಯ ವರದಿ ಪಡೆದು, ಪರೀಕ್ಷಾ ಕೇಂದ್ರದಲ್ಲಿ ಸಹಾಯಕರನ್ನು ಇಟ್ಟುಕೊಂಡು ಪರೀಕ್ಷೆ ಬರೆಯಲು ಅನುಮತಿ ಪಡೆದಿದ್ದರು. ಈ ವಂಚನೆಯಲ್ಲಿ ಕರ್ನಾಟಕ ಲಾ ಯೂನಿವರ್ಸಿಟಿ ಅಧಿಕಾರಿಗಳು, ವೈದ್ಯರು ಮತ್ತು ಪರೀಕ್ಷಾ ಕೇಂದ್ರದ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣ ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *