ವಿತ್ತೀಯ ಅರೋಗ್ಯವಿರುವ ಟಾಪ್-10 ರಾಜ್ಯಗಳಲ್ಲಿ ಕರ್ನಾಟಕ; ನಂ. 1 ಯಾವುದು?

ವಿತ್ತೀಯ ಅರೋಗ್ಯವಿರುವ ಟಾಪ್-10 ರಾಜ್ಯಗಳಲ್ಲಿ ಕರ್ನಾಟಕ; ನಂ. 1 ಯಾವುದು?

ನವದೆಹಲಿ, ಮಾರ್ಚ್ 13: ನೀತಿ ಆಯೋಗ್​ನ ವಿತ್ತೀಯ ಆರೋಗ್ಯ ಸೂಚ್ಯಂಕ 2026ರ ಪಟ್ಟಿಯಲ್ಲಿ (NITI Aayog Fiscal Health Index) ಕರ್ನಾಟಕ 9ನೇ ಸ್ಥಾನ ಪಡೆದಿದೆ. 18 ಪ್ರಮುಖ ರಾಜ್ಯಗಳನ್ನು ಈ ಇಂಡೆಕ್ಸ್​ನಲ್ಲಿ ಸೇರಿಸಲಾಗಿದೆ. ಇದರಲ್ಲಿ ಅಚೀವರ್, ಫ್ರಂಟ್ ರನ್ನರ್, ಪರ್ಫಾರ್ಮರ್, ಆಸ್ಪಿರೇಶನಲ್ ಎನ್ನುವ ನಾಲ್ಕು ಶ್ರೇಣಿಗಳನ್ನು ಮಾಡಲಾಗಿದೆ. ಅಗ್ರ ಮೂರು ರಾಜ್ಯಗಳು ಅಚೀವರ್ ಶ್ರೇಣಿ ಪಡೆದರೆ, 4ರಿಂದ 9ನೇ ಸ್ಥಾನದಲ್ಲಿರುವ ರಾಜ್ಯಗಳು ಫ್ರಂಟ್ ರನ್ನರ್ ಶ್ರೇಣಿಯಲ್ಲಿವೆ. 10-14ರ ಸ್ಥಾನದಲ್ಲಿರುವ ಐದು ರಾಜ್ಯಗಳು ಪರ್ಫಾರ್ಮರ್ ಎನಿಸಿವೆ. ಉಳಿದವು ಆಸ್ಪಿರೇಶನಲ್ ರಾಜ್ಯಗಳಾಗಿವೆ.

ಹಿಂದುಳಿದ ರಾಜ್ಯಗಳಲ್ಲೊಂದೆಂದು ಕರೆಯಿಸಿಕೊಳ್ಳುವ ಒಡಿಶಾ ಹಣಕಾಸು ಆರೋಗ್ಯ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದು ಅಚ್ಚರಿ ಮೂಡಿಸಿದೆ. ಒಡಿಶಾ ಜೊತೆ ಗೋವಾ ಮತ್ತು ಜಾರ್ಖಂಡ್ ರಾಜ್ಯಗಳು ಅಚೀವರ್ ಶ್ರೇಣಿ ಪಡೆದಿವೆ. ಪಂಜಾಬ್ ರಾಜ್ಯ ಕೊನೆಯ ಸ್ಥಾನ ಪಡೆದಿದೆ. ಈ 18 ರಾಜ್ಯಗಳನ್ನು ಹೊರತುಪಡಿಸಿ, ಉಳಿದ ಈಶಾನ್ಯ ಮತ್ತು ಹಿಮಾಲಯ ಭಾಗದ ರಾಜ್ಯಗಳನ್ನು ಪ್ರತ್ಯೇಕ ಪಟ್ಟಿಗೆ ಸೇರಿಸಲಾಗಿದೆ. ಈ ಪ್ರತ್ಯೇಕ ಪಟ್ಟಿಯಲ್ಲಿ ಅರುಣಾಚಲಪ್ರದೇಶ ಅಗ್ರಕ್ರಮಾಂಕ ಪಡೆದಿದೆ. 2023-24ರ ಸಾಲಿನ ವರ್ಷದ ದತ್ತಾಂಶದ ಆಧಾರದ ಮೇಲೆ ಫಿಸ್ಕಲ್ ಹೆಲ್ತ್ ಇಂಡೆಕ್ಸ್ 2026 ರೂಪಿಸಲಾಗಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

ನೀತಿ ಆಯೋಗ್ ಫಿಸ್ಕಲ್ ಹೆಲ್ತ್ ಇಂಡೆಕ್ಸ್ 2026, ರಾಜ್ಯಗಳು ಹಾಗೂ ಫಿಸ್ಕಲ್ ಸ್ಕೋರ್

  1. ಒಡಿಶಾ: 73.1
  2. ಗೋವಾ: 54.7
  3. ಜಾರ್ಖಂಡ್: 50.5
  4. ಗುಜರಾತ್: 49.9
  5. ಮಹಾರಾಷ್ಟ್ರ: 45
  6. ಛತ್ತೀಸ್​ಗಡ್: 44.3
  7. ತೆಲಂಗಾಣ: 44.3
  8. ಉತ್ತರಪ್ರದೇಶ: 41.9
  9. ಕರ್ನಾಟಕ: 41.7
  10. ಮಧ್ಯಪ್ರದೇಶ: 37.8
  11. ಹರ್ಯಾಣ: 34.5
  12. ಬಿಹಾರ: 30.9
  13. ತಮಿಳುನಾಡು: 29.8
  14. ರಾಜಸ್ಥಾನ್: 27.6
  15. ಕೇರಳ: 24.8
  16. ಪಶ್ಚಿಮ ಬಂಗಾಳ: 23.8
  17. ಆಂಧ್ರಪ್ರದೇಶ: 23.1
  18. ಪಂಜಾಬ್: 12.4

ವಿತ್ತೀಯ ಆರೋಗ್ಯಕ್ಕೆ ಐದು ಮಾನದಂಡಗಳು

ಫಿಸ್ಕಲ್ ಹೆಲ್ತ್ ಇಂಡೆಕ್ಸ್ ರಚಿಸಲು ಐದು ಪ್ರಮುಖ ಮಾನದಂಡಗಳನ್ನು ಇಡಲಾಗಿದೆ. ಕಂದಾಯ ಕ್ರೋಢೀಕರಣ, ವೆಚ್ಚದ ಗುಣಮಟ್ಟ, ಹಣಕಾಸು ಕಾಳಜಿ, ಸಾಲ ನಿರ್ವಹಣೆ, ಸಾಲ ಸುಸ್ಥಿರತೆ, ಈ ಐದು ವಿಚಾರಗಳಲ್ಲಿ ರಾಜ್ಯಗಳು ಎಷ್ಟು ಜವಾಬ್ದಾರಿಯುತವಾಗಿ ವರ್ತಿಸುತ್ತವೆ ಎಂಬುದನ್ನು ಗಮನಿಸಿ ಸ್ಕೋರ್ ಕೊಡಲಾಗುತ್ತದೆ.

ಇದನ್ನೂ ಓದಿ: 18 ವರ್ಷ ಅಡೋಬ್ ಸಿಇಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ

ಕರ್ನಾಟಕದ ಹಣಕಾಸು ಶಿಸ್ತು ಹೇಗಿದೆ?

ನೀತಿ ಆಯೋಗ್​ನ ಈ ಫಿಸ್ಕಲ್ ಹೆಲ್ತ್ ಇಂಡೆಕ್ಸ್ ಪ್ರಕಾರ 2023-24ರಲ್ಲಿ ಕರ್ನಾಟಕದ ಹಣಕಾಸು ಆರೋಗ್ಯ ಪರಿಸ್ಥಿತಿಯಲ್ಲಿ ಹೆಚ್ಚೇನೂ ವ್ಯತ್ಯಯ ಆಗಿಲ್ಲ. ಸರ್ಕಾರದ ವೆಚ್ಚದ ಗುಣಮಟ್ಟವು ಇತರ ಉನ್ನತ ರಾಜ್ಯಗಳಿಗಿಂತ ಉತ್ತಮವಾಗಿದೆ. ಕಂದಾಯ ಕ್ರೋಢೀಕರಣವೂ ಕೂಡ ಸಮರ್ಪಕವಾಗಿದೆ.

ಆದರೆ, ಜಿಡಿಪಿ ಮತ್ತು ವಿತ್ತೀಯ ಕೊರತೆ ಅಂತರ 2022-23ರಲ್ಲಿ ಶೇ. 2.05 ಇದ್ದದ್ದು 2023-24ರಲ್ಲಿ ಶೇ. 2.55ಕ್ಕೆ ಏರಿದೆ. ಆ ವರ್ಷ ಕಂದಾಯ ಕ್ರೋಢೀಕರಣ ಕಡಿಮೆಗೊಂಡಿದ್ದು ಅದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಜಿಡಿಪಿ ಮತ್ತು ಸಾಲದ ಅನುಪಾತ 2023-24ರಲ್ಲಿ ಹೆಚ್ಚಾಗಿದೆ. ಬಾಕಿ ಇರುವ ಸಾಲ ಜಿಡಿಪಿಯ ಶೇ. 23.49ರಷ್ಟಿದೆ. ಆದರೆ, 2026-27ನೇ ಸಾಲಿನ ಬಜೆಟ್​ನಲ್ಲಿ ಈ ಸಾಲ ಮತ್ತು ಜಿಡಿಪಿ ಅನುಪಾ ಶೇ. 25ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಹೋಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *