ಐಪಿಎಲ್ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಟೀಂ ಇಂಡಿಯಾಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಬಿಟ್ಟರೆ, ಉಳಿದ ಮೂರು ಸರಣಿಗಳಲ್ಲಿ ತಂಡದ ಪ್ರದರ್ಶನ ಹೀನಾಯವಾಗಿತ್ತು. ಅದರಲ್ಲೂ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಗಳಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಸಪ್ಪೆ ಪ್ರದರ್ಶನ ನೀಡಿತು (PC-BCCI).
ಮೊದಲಿಗೆ ಐರ್ಲೆಂಡ್ ವಿರುದ್ಧ ವೈಟ್ ವಾಶ್ ಆಗಿದ್ದ ಟೀಂ ಇಂಡಿಯಾ ಆ ಬಳಿಕ ಇಂಗ್ಲೆಂಡ್ ಪ್ರವಾಸದಲ್ಲೂ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿತು. ಮೊದಲು ಟಿ20 ಸರಣಿಯನ್ನು ಕಳೆದುಕೊಂಡ ಭಾರತ ತಂಡ ನಂತರ ಏಕದಿನ ಸರಣಿಯನ್ನೂ ಸೋತಿದೆ. ಗಮನಿಸಬೇಕಾದ ಸಂಗತಿಯೆಂದರೆ ಟೀಂ ಇಂಡಿಯಾ ಕಳೆದ ಮೂರು ವಿದೇಶಿ ಏಕದಿನ ಸರಣಿಗಳನ್ನು ಸೋತಿದೆ. ಇದಕ್ಕೆ ಕಾರಣ ಬ್ಯಾಟಿಂಗ್ ವಿಭಾಗದ ವೈಫಲ್ಯ(PC-BCCI).
ಆದಾಗ್ಯೂ ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಈ ಮೂರು ವಿದೇಶಿ ಏಕದಿನ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್ಮನ್ನನ್ನು ಏಕದಿನ ತಂಡದಿಂದ ಕೈಬಿಡಲು ತಯಾರಿ ನಡೆಸಲಾಗುತ್ತಿದೆ. ಇದಕ್ಕೆ ತದ್ವೀರುದ್ದವಾಗಿ ಈ ಮೂರು ಸರಣಿಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ ಆಟಗಾರನನ್ನು ತಂಡದಲ್ಲಿಯೇ ಮುಂದುವರೆಸಲಾಗುತ್ತಿದೆ(PC-BCCI).
ವಿದೇಶದಲ್ಲಿ ಆಡಿದ ಕೊನೆಯ ಮೂರು ಏಕದಿನ ಸರಣಿಗಳಲ್ಲಿ ಭಾರತದ ಪರ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರೋಹಿತ್ ಆಡಿರುವ 9 ಪಂದ್ಯಗಳಲ್ಲಿ 534 ರನ್ ಗಳಿಸಿದ್ದಾರೆ. ರೋಹಿತ್ ಹೊರತುಪಡಿಸಿ ತಂಡದ ಬೇರೆ ಯಾವುದೇ ಬ್ಯಾಟ್ಸ್ಮನ್ 300 ರನ್ಗಳ ಗಡಿಯನ್ನು ತಲುಪಿಲ್ಲ(PC-BCCI).
ವಿದೇಶದಲ್ಲಿ ಆಡಿದ ಕೊನೆಯ ಮೂರು ಏಕದಿನ ಸರಣಿಗಳಲ್ಲಿ, ಶುಭ್ಮನ್ ಗಿಲ್ ಆಡಿದ 9 ಪಂದ್ಯಗಳಲ್ಲಿ 288 ರನ್ ಬಾರಿಸಿದ್ದರೆ, ವಿರಾಟ್ ಕೊಹ್ಲಿ 276 ರನ್ ಮತ್ತು ಅಕ್ಷರ್ ಪಟೇಲ್ 214 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಕಳೆದ ಮೂರು ಏಕದಿನ ಸರಣಿಗಳಲ್ಲಿ ಆಡಿದ 8 ಪಂದ್ಯಗಳಲ್ಲಿ 211 ರನ್ ಬಾರಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಕೂಡ ಆಡಿದ 7 ಇನ್ನಿಂಗ್ಸ್ಗಳಲ್ಲಿ ಕೇವಲ 126 ರನ್ ಗಳಿಸಿದ್ದಾರೆ(PC-BCCI).
ಇವರನ್ನು ಹೊರತುಪಡಿಸಿದರೆ, ಕಳೆದ ಮೂರು ವಿದೇಶಿ ಏಕದಿನ ಸರಣಿಗಳಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಅವರ ಸ್ಥಿತಿ ಹೀನಾಯವಾಗಿದೆ. ಕಳೆದ ಮೂರು ವಿದೇಶ ಏಕದಿನ ಸರಣಿಗಳಲ್ಲಿ 6 ಏಕದಿನ ಪಂದ್ಯಗಳನ್ನಾಡಿರುವ ರಾಹುಲ್ ಕೇವಲ 93 ರನ್ ಗಳಿಸಿದ್ದಾರೆ. ವಿದೇಶಿ ನೆಲಗಳಲ್ಲಿ ರಾಹುಲ್ ಅವರ ಪ್ರದರ್ಶನ ಇದೇ ರೀತಿ ಮುಂದುವರೆದರೆ ಅವರ ಸ್ಥಾನಕ್ಕೆ ಕುತ್ತು ಬರುವುದು ಖಚಿತ(PC-BCCI).





