Headlines

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಶನಿವಾರ ಮುಂಜಾನೆ ತಡವಾಗಿ ಆರಂಭವಾಗಲಿವೆ ತರಗತಿಗಳು; ಏಕರೂಪದ ಶಾಲಾ ಅವಧಿ ಜಾರಿ – Kannada News | Karnataka Standardises Saturday School Timings; Uniform Schedule for All Schools

ಬೆಂಗಳೂರು, ಜೂನ್ 27: ರಾಜ್ಯದ ಶಾಲಾ ಶಿಕ್ಷಣ (Education) ಮತ್ತು ಸಾಕ್ಷರತಾ ಇಲಾಖೆಯು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಬಿಗ್ ರಿಲೀಫ್ ನೀಡಿದ್ದು, ಶನಿವಾರದ ಶಾಲಾ ಅವಧಿಯನ್ನು ಏಕರೂಪಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೂ ಅನ್ವಯವಾಗುವಂತೆ ಶನಿವಾರ ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಒಟ್ಟು 4 ಗಂಟೆಗಳ ಕಾಲ ಮಾತ್ರ ತರಗತಿಗಳನ್ನು ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಗೊಂದಲಕ್ಕೆ ತೆರೆ ಎಳೆದ ಇಲಾಖೆ

ಇದುವರೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಶನಿವಾರದ ಶಾಲಾ ಅವಧಿ ಪ್ರದೇಶವಾರು ವಿಭಿನ್ನವಾಗಿತ್ತು. ಕೆಲವು ಕಡೆಗಳಲ್ಲಿ ಬೆಳಗ್ಗೆ 7:30 ರಿಂದ 11:30ರವರೆಗೆ ತರಗತಿಗಳು ನಡೆದರೆ, ಇನ್ನು ಕೆಲವು ಶಾಲೆಗಳಲ್ಲಿ ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿತ್ತು. ಈ ಭಿನ್ನತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಮಯದಲ್ಲಿ ತೀವ್ರ ಗೊಂದಲ ಎದುರಿಸುತ್ತಿದ್ದರು. ಈಗ ಇಲಾಖೆಯು ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಹೊಸ ಸಮಯವನ್ನೇ ಪಾಲಿಸಬೇಕು ಎಂದು ಆದೇಶಿಸಿದೆ.

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಅನುಕೂಲ

ಹೊಸ ನಿಯಮದಿಂದಾಗಿ ವಿದ್ಯಾರ್ಥಿಗಳು ಇನ್ಮುಂದೆ ಶನಿವಾರದ ದಿನದಂದು ಬೆಳ್ಳಂಬೆಳಗ್ಗೆ ಏಳುವ ಅವಸರ ತಪ್ಪಿದಂತಾಗಿದೆ. ಪೋಷಕರಿಗೂ ಸಹ ನಿಗದಿತ ಸಮಯದ ಕುರಿತು ಸ್ಪಷ್ಟತೆ ಸಿಕ್ಕಿರುವುದರಿಂದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಈ ಆದೇಶದಿಂದ ದೊಡ್ಡ ಅನುಕೂಲವಾಗಲಿದೆ. ರಾಜ್ಯ ಸರ್ಕಾರವು ಈಗಾಗಲೇ ಕಡ್ಡಾಯಗೊಳಿಸಿರುವ ಶಿಕ್ಷಕರ ಆನ್‌ಲೈನ್ ಹಾಜರಾತಿ ವ್ಯವಸ್ಥೆಯನ್ನು ಸಕಾಲದಲ್ಲಿ ಅಪ್‌ಡೇಟ್ ಮಾಡಲು ಈ ಏಕರೂಪದ ಸಮಯ ಸಹಕಾರಿಯಾಗಲಿದೆ. ಇಡೀ ರಾಜ್ಯದಲ್ಲಿ ಒಂದೇ ಸಮಯದಲ್ಲಿ ಶಾಲೆ ಆರಂಭವಾಗುವುದರಿಂದ ಶಿಕ್ಷಕರು ಯಾವುದೇ ಗೊಂದಲವಿಲ್ಲದೆ ನಿಖರವಾಗಿ ಆನ್‌ಲೈನ್ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಇದನ್ನೂ ಓದಿ ನೀಟ್ ಸೋಲು ಜೀವನದ ಅಂತ್ಯವಲ್ಲ; ರೋಲ್ಸ್ ರಾಯ್ಸ್‌ನಲ್ಲಿ 72.3 ಲಕ್ಷ ರೂ. ಪ್ಯಾಕೇಜ್ ಪಡೆದು ಇತಿಹಾಸ ಸೃಷ್ಟಿಸಿದ 20ರ ಹರೆಯದ ರಿತುಪರ್ಣಾ!

ರಾಜ್ಯದ ಪ್ರತಿಯೊಂದು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಮಂಡಳಿಗಳು ಈ ಹೊಸ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಮತ್ತು ಶನಿವಾರ ಬೆಳಗ್ಗೆ 8:30 ರಿಂದ 12:30 ರ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *