ನಟ ಇಮ್ರಾನ್ ಖಾನ್ ಸಹ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ ನಟರಲ್ಲಿ ಮೊದಲಿಗರುಗಳಲ್ಲಿ ಒಬ್ಬರು. ಅವರೂ ಸಹ ಖುದ್ದು ಜಂತರ್ ಮಂಥರ್ಗೆ ಹೋಗಿ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ್ದು ಮಾತ್ರವೇ ಅಲ್ಲದೆ, ಮೌನವಾಗಿರುವ ಬಾಲಿವುಡ್ ನಟ-ನಟಿಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ಧುರಂಧರ್’ ನಟಿ ಆಯೆಷಾ ಖಾನ್ ಸಹ ವಿದ್ಯಾರ್ಥಿಗಳ ಜೊತೆಗೂಡಿ ಪ್ರತಿಭಟನೆ ನಡೆಸಿದ್ದರು, ಅವರನ್ನು ಪೊಲೀಸರು ವಶಕ್ಕೆ ಸಹ ಪಡೆದುಕೊಂಡಿದ್ದರು.