ಹನೋಯಿ, ಜುಲೈ 11: ವಿಯೆಟ್ನಾಂನ ಫೂ ಕ್ವೋಕ್ (Phu Quoc) ದ್ವೀಪದ ಬಳಿ ಇರುವ ಹಾನ್ ಮೇ ರುತ್ ನ್ಗೋಯ್ ಎಂಬಲ್ಲಿ ಇಂದು 32 ಭಾರತೀಯ ಪ್ರವಾಸಿಗರಿದ್ದ ಸ್ಪೀಡ್ಬೋಟ್ ಪಲ್ಟಿಯಾಗಿ ಮುಳುಗಡೆಯಾಗಿದೆ. ಈ ಘಟನೆ ನಡೆದ ತಕ್ಷಣವೇ ಸ್ಥಳೀಯ ಅಧಿಕಾರಿಗಳು ಭಾರಿ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಈ ಕುರಿತು ಮೈಕ್ರೋ-ಬ್ಲಾಗ್ಲಿಂಗ್ ತಾಣ ‘ಎಕ್ಸ್’ (X)ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ ಈ ಘಟನೆಯ ನಿಖರವಾದ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದೆ. ಅಲ್ಲದೆ ತಕ್ಷಣದ ನೆರವಿಗಾಗಿ ನಿಯಂತ್ರಣ ಕೊಠಡಿಯನ್ನು (Control Room) ಸ್ಥಾಪಿಸಲಾಗಿದ್ದು, +84 91 308 9165 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
ಈ ದುರಂತದಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸಲು, ಹೋ ಚಿ ಮಿನ್ ಸಿಟಿಯಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಈ +84 36 281 7930, +84 91 552 37 14 ಮತ್ತು +84 33 452 0414 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಯಾವುದೇ ರೀತಿಯ ಸಹಾಯ ಮತ್ತು ಪ್ರಶ್ನೆಗಳಿಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ರಾಯಭಾರ ಕಚೇರಿ ತಿಳಿಸಿದೆ.
In a tragic incident, a boat carrying several Indian tourists has capsized near Phu Quoc Island in Vietnam a few hours ago.
Exact details of the incident are being ascertained as search and rescue operations by local authorities are ongoing.
In order to provide information…
— India in Vietnam (@AmbHanoi) July 11, 2026
ಇದನ್ನೂ ಓದಿ: 40 ವರ್ಷದ ಬಳಿಕ ನ್ಯೂಜಿಲೆಂಡ್ಗೆ ಭಾರತದ ಪ್ರಧಾನಿ ಭೇಟಿ; ವಿಮಾನ ನಿಲ್ದಾಣದಲ್ಲೇ ಮೋದಿಯನ್ನು ಸ್ವಾಗತಿಸಿದ ನ್ಯೂಜಿಲೆಂಡ್ ಪಿಎಂ
15 ಪ್ರವಾಸಿಗರು ಸಾವನ್ನಪ್ಪಿರುವ ಶಂಕೆ:
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ಬೋಟ್ನಲ್ಲಿ ನಾಲ್ವರು ಸಿಬ್ಬಂದಿ ಸೇರಿದಂತೆ ಸುಮಾರು 32 ಭಾರತೀಯ ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ‘ವಿಎನ್ಎಕ್ಸ್ಪ್ರೆಸ್ ಇಂಟರ್ ನ್ಯಾಷನಲ್’ (VnExpress International) ವರದಿಯ ಪ್ರಕಾರ, ಈ ಅಪಘಾತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ವಿಯೆಟ್ನಾಂ ಸರ್ಕಾರಿ ಅಧಿಕಾರಿಗಳಿಂದ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಸ್ಥಳೀಯರು ಮತ್ತು ಅಧಿಕಾರಿಗಳು ಪ್ರವಾಸಿಗರನ್ನು ರಕ್ಷಿಸಿ ವೈದ್ಯಕೀಯ ನೆರವು ನೀಡುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Boat capsizes in Phu Quoc, 18 dead. Most of tourits are Indian pic.twitter.com/VmwDdha0Hn
— Linh (@holinh87) July 11, 2026
ವಿಯೆಟ್ನಾಂ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ಇದೇ ವೇಳೆ, ಭಾರತೀಯ ರಾಯಭಾರ ಕಚೇರಿಯ ಎರಡು ವಿಶೇಷ ತಂಡಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಒಂದು ತಂಡವು ಇಂದು ಸಂಜೆಯೊಳಗೆ ಸ್ಥಳಕ್ಕೆ ತಲುಪಲಿದ್ದು, ಎರಡನೇ ತಂಡವು ತಡರಾತ್ರಿ ವೇಳೆಗೆ ತಲುಪುವ ನಿರೀಕ್ಷೆಯಿದೆ.
ಇದನ್ನೂ ಓದಿ: ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ
ಈ ಘಟನೆ ನಡೆದಿದ್ದು ಹೇಗೆ?:
ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಈ ದುರಂತ ಸಂಭವಿಸಿದೆ. ಪ್ರವಾಸಿಗರನ್ನು ಹಾನ್ ಮೇ ರುತ್ನಿಂದ ಅನ್ ಥೋಯ್ ಬಂದರಿಗೆ ಕರೆದೊಯ್ಯುತ್ತಿದ್ದಾಗ ಹಾನ್ ಮೇ ರುತ್ ನ್ಗೋಯ್ನಿಂದ ಸುಮಾರು 400 ಮೀಟರ್ ದೂರದಲ್ಲಿ ಬೋಟ್ ಪಲ್ಟಿಯಾಗಿದೆ. ಹತ್ತಿರದಲ್ಲೇ ಇದ್ದ ಇತರ ಪ್ರವಾಸಿಗರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಈ ಬೋಟ್ ಅನ್ನು ‘ಓಷಿಯನ್ ಪರ್ಲ್ ಐಲ್ಯಾಂಡ್ ಕಂಪನಿ’ ನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಟ್ ತಲೆಕೆಳಗಾಗಿ ಮುಳುಗಿದ ಕಾರಣದಿಂದಾಗಿ ಬಹುತೇಕ ಪ್ರವಾಸಿಗರು ಅದರ ಒಳಗಡೆಯೇ ಸಿಲುಕಿಕೊಂಡಿದ್ದರು.
“ಭಾರೀ ಗಾಳಿಯಿಂದ ದೊಡ್ಡ ಅಲೆಗಳು ಏಳುತ್ತಿದ್ದುದರಿಂದಾಗಿ ಬೋಟ್ನ ಒಳಗಿನಿಂದ ಕೇವಲ ಕೆಲವೇ ಜನರನ್ನು ಮಾತ್ರ ಪ್ರಜ್ಞಾವಸ್ಥೆಯಲ್ಲಿದ್ದಾಗ ಹೊರಗೆ ಕರೆತರಲು ಸಾಧ್ಯವಾಯಿತು” ಎಂದು ಸ್ಥಳೀಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:44 pm, Sat, 11 July 26