
ನವದೆಹಲಿ, ಮಾರ್ಚ್ 22: ಎಟಿಎಂಗಳಲ್ಲಿ ಕ್ಯಾಷ್ ವಿತ್ಡ್ರಾ ಮಾಡಲು ನಿರ್ದಿಷ್ಟ ಮಿತಿ, ಶುಲ್ಕ ಇತ್ಯಾದಿ ನಿರ್ಬಂಧಗಳಿವೆ. ವಿವಿಧ ಬ್ಯಾಂಕುಗಳು ತಮ್ಮ ಈ ಎಟಿಎಂ ಶುಲ್ಕಗಳನ್ನು ಆಗಾಗ್ಗೆ ಪರಿಷ್ಕರಿಸುತ್ತವೆ. ಮುಂದಿನ ತಿಂಗಳಿಂದ ಹೊಸ ಎಟಿಎಂ ನಿಯಮಗಳು ಜಾರಿಗೆ ಬರಲಿವೆ. ಏಪ್ರಿಲ್ 1ರಿಂದ ಬರಲಿರುವ ಈ ನಿಯಮ ಬದಲಾವಣೆಗಳಲ್ಲಿ, ದಿನದ ವಿತ್ಡ್ರಾಯಲ್ ಮಿತಿ, ಯುಪಿಐ ಆಧಾರಿತ ಕ್ಯಾಷ್ ವಿತ್ಡ್ರಾಯಲ್ ಇತ್ಯಾದಿ ಒಳಗೊಂಡಿವೆ.
ಯುಪಿಐ ಆಧಾರಿತ ಕ್ಯಾಷ್ ವಿತ್ಡ್ರಾಯಲ್ಗೆ ಎಚ್ಡಿಎಫ್ಸಿ ಬ್ಯಾಂಕ್ನಿಂದ ಶುಲ್ಕ
ಎಚ್ಡಿಎಫ್ಸಿ ಬ್ಯಾಂಕ್ ಈಗ ಎಟಿಎಂ ವಿತ್ಡ್ರಾಯಲ್ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಉಚಿತವಾಗಿ ಎಟಿಎಂ ಟ್ರಾನ್ಸಾಕ್ಷನ್ ಮಾಡಲು ಇರುವ ಮಿತಿಯಲ್ಲಿ ಯುಪಿಐ ಆಧಾರಿತ ಕ್ಯಾಷ್ ವಿತ್ಡ್ರಾಯಲ್ ಕೂಡ ಸೇರಿರುತ್ತದೆ. ಎಟಿಎಂಗಳಲ್ಲಿ ಯುಪಿಐ ಬಳಸಿ ಕ್ಯಾಷ್ ವಿತ್ಡ್ರಾ ಮಾಡುವುದನ್ನು ಎಟಿಎಂ ಟ್ರಾನ್ಸಾಕ್ಷನ್ ಎಂದು ಪರಿಗಣಿಸಲಾಗುತ್ತದೆ. ಉಚಿತ ಟ್ರಾನ್ಸಾಕ್ಷನ್ ಮಿತಿ ಬಳಿಕ ಮಾಡಲಾಗುವ ವಹಿವಾಟುಗಳಿಗೆ ಎಚ್ಡಿಎಫ್ಸಿ ಬ್ಯಾಂಕ್ ಶುಲ್ಕ ವಿಧಿಸುತ್ತದೆ.
ಇದನ್ನೂ ಓದಿ: ಈ ಫಂಡ್ನಲ್ಲಿ 10,000 ರೂ ಎಸ್ಐಪಿ; 21 ವರ್ಷದಲ್ಲಿ ಬರೋಬ್ಬರಿ 2 ಕೋಟಿ ರೂ ರಿಟರ್ನ್ಸ್
ಎಚ್ಡಿಎಫ್ಸಿ ಬ್ಯಾಂಕ್ನ ಗ್ರಾಹಕರು ಪ್ರತೀ ತಿಂಗಳು ಆ ಬ್ಯಾಂಕ್ನ ಎಟಿಎಂಗಳಲ್ಲಿ ಉಚಿತವಾಗಿ ಐದು ಬಾರಿ ಹಣ ವಿತ್ಡ್ರಾ ಮಾಡಬಹುದು. ಬೇರೆ ಬ್ಯಾಂಕ್ನ ಎಟಿಎಂಗಳಲ್ಲಿ ಮೂರು ಬಾರಿ ಉಚಿತವಾಗಿ ಟ್ರಾನ್ಸಾಕ್ಷನ್ ಮಾಡಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ ವಿತ್ಡ್ರಾಯಲ್ ಮಿತಿ ಇಳಿಕೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಕೆಲ ನಿರ್ದಿಷ್ಟ ಡೆಬಿಟ್ ಕಾರ್ಡ್ಗಳಿಗೆ ಎಟಿಎಂ ವಿತ್ಡ್ರಾಯಲ್ ಮಿತಿಯನ್ನು ಪರಿಷ್ಕರಿಸಿದೆ. ನಿತ್ಯದ ವಿತ್ಡ್ರಾಯಲ್ ಮಿತಿಯನ್ನು ಕಡಿಮೆಗೊಳಿಸಲಾಗಿದೆ. ಆದರೆ, ಹೊಸ ಮಿತಿ ಎಷ್ಟು ಎಂಬುದು ಗೊತ್ತಾಗಿಲ್ಲ. ಏಪ್ರಿಲ್ 1ರಿಂದ ಅದು ಜಾರಿಯಾಗಲಿದೆ.
ಇದನ್ನೂ ಓದಿ: ಹೂಡಿಕೆಗೆ ಯಾವ ರೀತಿಯ ಮ್ಯೂಚುವಲ್ ಫಂಡ್ಗಳನ್ನು ಆಯ್ದುಕೊಳ್ಳಬೇಕು? ಗಮನಿಸಬೇಕಾದ ಅಂಶಗಳಿವು
ಜಿಯೋ ಪೇಮೆಂಟ್ಸ್ ಬ್ಯಾಂಕ್ನಿಂದ ಯುಪಿಐ ಕಾರ್ಡ್ಲೆಸ್ ಕ್ಯಾಷ್ ವಿತ್ಡ್ರಾಯಲ್
ಜಿಯೋ ಫೈನಾನ್ಷಿಯಲ್ ಸರ್ವಿಸಸ್ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಕಂಪನಿಯು ಯುಪಿಐ ಆಧಾರಿತ ಕ್ಯಾಷ್ ವಿತ್ಡ್ರಾಯಲ್ ಫೆಸಿಲಿಟಿ ಆರಂಭಿಸಿದೆ. ಅದರ ಬ್ಯುಸಿನೆಸ್ ಕರೆಸ್ಪಾಂಡೆಂಟ್ ನೆಟ್ವರ್ಕ್ ಮೂಲಕ ಈ ಸೇವೆ ಸಿಗುತ್ತದೆ. ಜಿಯೋದ ಯುಪಿಐ ಶಕ್ತ ಆ್ಯಪ್ ಮೂಲಕ ಯುಪಿಐ ಕ್ಯುಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಕ್ಯಾಷ್ ವಿತ್ಡ್ರಾ ಮಾಡಬಹುದು. ಎಟಿಎಂಗಳು ಹಾಗೂ ಡೆಬಿಟ್ ಕಾರ್ಡ್ ಅಗತ್ಯ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ