ಪ್ರತಿಷ್ಠಿತ ಅಂತರಾಷ್ಟ್ರೀಯ ಮ್ಯಾಗಜೀನ್ ‘ಟೈಮ್ಸ್’ ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವದ ಅತ್ಯಂತ ಪ್ರಭಾವಶಾಲಿ 100 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಟೈಮ್ಸ್ 100 ಪಟ್ಟಿಯಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಸಹ ಕೆಲವು ಭಾರತೀಯರು ಸ್ಥಾನ ಪಡೆದಿದ್ದಾರೆ. ಆದರೆ ಈ ಬಾರಿ ಈ ಪಟ್ಟಿಯಲ್ಲಿ ಕೇವಲ ಒಬ್ಬ ಭಾರತೀಯ ನಟ ಮಾತ್ರವೇ ಸ್ಥಾನ ಪಡೆದಿರುವುದು ವಿಶೇಷ. ಅದುವೇ ರಣ್ಬೀರ್ ಕಪೂರ್.
ಬಾಲಿವುಡ್ನ ಸ್ಟಾರ್ ನಟ, ಇದೀಗ ‘ರಾಮಾಯಣ’ ಸಿನಿಮಾ ಮೂಲಕ ಹಾಲಿವುಡ್ಗೂ ಹಾರುತ್ತಿರುವ ರಣ್ಬೀರ್ ಕಪೂರ್ ಅವರು ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರೊಟ್ಟಿಗೆ ಪ್ರಖ್ಯಾತ ಭಾರತೀಯ ಶೆಫ್ ವಿಕಾಸ್ ಖನ್ನಾ ಅವರು ಸಹ 100 ಪ್ರಭಾವಶಾಲಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ವಿಕಾಸ್ ಖನ್ನಾ ಅವರು ಅಂತರಾಷ್ಟ್ರೀಯ ಜನಪ್ರಿಯತೆ ಇರುವ ಬಾಣಸಿಗ ಆಗಿದ್ದು, ಹಲವು ದೇಶಗಳಲ್ಲಿ ತಮ್ಮ ರೆಸ್ಟೊರೆಂಟ್ಗಳನ್ನು ಹೊಂದಿದ್ದಾರೆ. ಹಲವು ವಿಶ್ವ ನಾಯಕರುಗಳಿಗೆ ವಿಶೇಷ ಖಾದ್ಯಗಳನ್ನು ಸಹ ಅವರು ಮಾಡಿದ್ದಾರೆ.
Ranbir Kapoor
ಟೈಮ್ಸ್ 100 ಪಟ್ಟಿಯಲ್ಲಿ ಈ ಬಾರಿ ಮೂವರು ಭಾರತೀಯರು ಮಾತ್ರವೇ ಸ್ಥಾನ ಪಡೆದಿದ್ದು, ರಣ್ಬೀರ್ ಕಪೂರ್, ವಿಕಾಸ್ ಖನ್ನಾ ಬಳಿಕ ಗೂಗಲ್ನ ಸಿಇಓ ಸುಂದರ್ ಪಿಚಾಯ್ ಅವರು ಸಹ ಈ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಸುಂದರ್ ಪಿಚಾಯ್ ಅಮೆರಿಕ ನಿವಾಸಿ ಆಗಿದ್ದರೂ ಸಹ ಅವರ ಮೂಲ ಭಾರತವೇ ಆಗಿದೆ. ವಿಶ್ವದ ಅತ್ಯಂತ ದೊಡ್ಡ ಮತ್ತು ಜನಪ್ರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಗೂಗಲ್ನ ಸಿಇಓ ಆಗಿದ್ದಾರೆ ಸುಂದರ್ ಪಿಚಾಯ್.
ಇದನ್ನೂ ಓದಿ:‘ಆಪರೇಷನ್ ಸಿಂಧೂರ್’ ಚಿತ್ರಕ್ಕೆ ಸಿಕ್ಕರು ಹೀರೋ; ಬಾಲಿವುಡ್ ನಟನಿಗೆ ಆಫರ್
ಟೈಮ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಒಬ್ಬ ಕಲಾವಿದನಿಗೆ ಜಾಗತಿಕ ಮಟ್ಟದಲ್ಲಿ ಸಿಗುವ ಅತ್ಯುನ್ನತ ಮನ್ನಣೆಗಳಲ್ಲಿ ಒಂದಾಗಿದೆ. ಈ ಹಿಂದೆ ಬಾಲಿವುಡ್ನ ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಅಂತಹ ನಟರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ರಣ್ಬೀರ್ ಕಪೂರ್ ಅವರು ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ರಣ್ಬೀರ್ ಕಪೂರ್ ಹೆಸರು ಸೇರಿಕೊಳ್ಳುತ್ತಿರುವುದು ಇದು ಮೊದಲೇ ಬಾರಿ ಆಗಿದೆ.
ರಣ್ಬೀರ್ ಕಪೂರ್ ನಟಿಸಿರುವ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಬ್ರಹ್ಮಾಸ್ತ್ರ 2’ ಮತ್ತು ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲಿ ರಣ್ಬೀರ್ ಕಪೂರ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ