Headlines

ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ: ಅನ್ಬು ಕುಮಾರ್ – Kannada News | Chief Electoral Officer Anbu Kumar Addresses Concerns on Voter List Revision and Facilitation Centres

ಬೆಂಗಳೂರು, ಜು.15: ಸುದ್ದಿಗೋಷ್ಠಿಯಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿ ನೀಡಿದರು. ಫಾರ್ಮ್‌ಗಳ ವಿತರಣೆ, ಮತದಾರರ ಪಟ್ಟಿಗಳಲ್ಲಿನ ವಿಳಾಸದ ವ್ಯತ್ಯಾಸಗಳು ಮತ್ತು ದೂರುಗಳ ನಿರ್ವಹಣೆಯ ಕುರಿತು ಮಾಧ್ಯಮಗಳಿಂದ ಎದುರಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಮತದಾರರ ಪಟ್ಟಿಗೆ ಸಂಬಂಧಿಸಿದ ಒಂದೇ ಒಂದು ಫಾರ್ಮ್ ಸಹ ತಪ್ಪು ಪೋಲಿಂಗ್ ಸ್ಟೇಷನ್‌ಗೆ ತಲುಪಿಲ್ಲ ಎಂದು ಅನ್ಬು ಕುಮಾರ್ ಸ್ಪಷ್ಟಪಡಿಸಿದರು. ದೂರುಗಳಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಮತ್ತು ಸರಿಪಡಿಸುವುದಾಗಿ ಅವರು ಭರವಸೆ ನೀಡಿದರು. ಮತದಾರರಿಗೆ ಅನುಕೂಲವಾಗುವಂತೆ ವಿಲೇಜ್ ಮಟ್ಟದಲ್ಲಿ ಮತದಾರರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ತಾಂತ್ರಿಕ ಬೆಂಬಲ ಮತ್ತು ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ಬಿಎಲ್ಒಗಳಿಗಾಗಿ ಪ್ರತಿ ತಾಲ್ಲೂಕಿನಲ್ಲಿ ಎರಡು ಮೂರು ಫೆಸಿಲಿಟೇಶನ್ ಕೇಂದ್ರಗಳನ್ನು ತೆರೆಯಲಾಗಿದೆ. ನಗರ ಪ್ರದೇಶಗಳಲ್ಲಿ ಮತದಾರರಿಗೆ ಹೆಚ್ಚಿನ ಅನುಕೂಲವಾಗುವಂತೆ ವಿಶೇಷ ಅಭಿಯಾನದ ದಿನಗಳನ್ನು ಶನಿವಾರ ಮತ್ತು ಭಾನುವಾರಗಳಂದು ಆಯೋಜಿಸಲು ಸೂಚನೆ ನೀಡಲಾಗಿದೆ. ಪ್ರತಿಯೊಬ್ಬ ಮತದಾರರಿಗೂ ಫಾರ್ಮ್ ತುಂಬಲು ಮತ್ತು ಹಿಂತಿರುಗಿಸಲು ಸಹಾಯ ಮಾಡುವುದು ತಮ್ಮ ಗುರಿಯಾಗಿದೆ ಎಂದು ಅನ್ಬು ಕುಮಾರ್ ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *