Headlines

ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ: 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ – Kannada News | Married Woman Dies by Suicide Over Alleged Harassment by Mother in Law in Basavakalyan, Bidar

ಮೃತ ಅಂಜನಾಬಾಯಿ ಶೇಖರ್ ಪಾಟೀಲ್Image Credit source: Tv9 Kannada

ಬೀದರ್​​, ಫೆಬ್ರವರಿ 08: ವೇಶ್ಯಾವಾಟಿಕೆಗೆ ಅತ್ತೆಯಿಂದ ಒತ್ತಾಯ ಆರೋಪ ಹಿನ್ನೆಲೆ 11 ತಿಂಗಳ ಮಗು ಬಿಟ್ಟು ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ನಡೆದಿದೆ. ಅಂಜನಾಬಾಯಿ ಶೇಖರ್ ಪಾಟೀಲ್(22) ಮೃತ ಯುವತಿಯಾಗಿದ್ದು, ಪತಿ ಮನೆಯವರಿಂದ ನಿತ್ಯ ಕಿರುಕುಳ ಹಿನ್ನೆಲೆ ಮನನೊಂದು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜತೆ ಅಂಜನಾಬಾಯಿ ವಿವಾಹ ನಡೆದಿದ್ದು, ಮದುವೆ ಬಳಿಕ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಿ ಯುವತಿಗೆ ನಿತ್ಯವೂ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಅಂಜನಾಬಾಯಿ ಪತಿ ಶೇಖರ್​​ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದ್ದು, ನಿತ್ಯವೂ ರಾತ್ರಿ 11-12 ಗಂಟೆ ಅವಧಿಯಲ್ಲಿ ಮನೆಗೆ ಬರುತ್ತಿದ್ದ. ಈ ಬಗ್ಗೆ ತಕರಾರು ಮಾಡಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದಳು. ಆದರೆ ಇದೇ ವಿಚಾರವಾಗಿ ಅತ್ತೆ ಮಾವ ಆಕೆ ಜೊತೆ ಜಗಳ ಮಾಡಿದ್ದಾರೆ. ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ ಎಂದೆಲ್ಲ ಹೀಯಾಳಿಸಿದ್ದಾರೆ. ಜೊತೆಗೆ ನೀನು ವೇಶ್ಯಾವಾಟಿಕೆ ಮಾಡು ಎಂದು ಆಕೆಯನ್ನು ಪೀಡಿಸಿದ್ದು, ಆ ಬಗ್ಗೆ ಅಂಜನಾಬಾಯಿ ಹೆತ್ತವರ ಬಳಿಯೂ ಹೇಳಿಕೊಂಡಿದ್ದಳು. ಆದರೆ ಈ ಬಗ್ಗೆ ಪೋಷಕರು ಆಕೆಗೆ ಸಮಾಧಾನ ಮಾಡಿದ್ದು, ಇಂದೆಲ್ಲ ನಾಳೆ ಸರಿಹೋಗಬಹುದು ಎಂದು ತಿಳುವಳಿಕೆ ಹೇಳಿದ್ದರು.  ಈ ನಡುವೆ ಕಿರುಕುಳ ತಾಳಲಾರದೆ ಅಂಜನಾಬಾಯಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಆಕೆಯ ತಂದೆ ವಿಜಯಕುಮಾರ್ ದೂರಿನ ಮೇರೆಗೆ ಮೃತಳ ಗಂಡ ಶೇಖರ್ ಸೇರಿ ಮೂವರ ವಿರುದ್ಧ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸ್ಪಿರಿಟ್ ಕುಡಿದು ಇಬ್ಬರು ಯುವಕರ ಸಾವು

ಪಾರ್ಟಿಗೆಂದು ಹೋದಾಗ ಸ್ಪಿರಿಟ್ ಕುಡಿದು ಅಸ್ವಸ್ಥರಾಗಿದ್ದ ಇಬ್ಬರು ಯುವಕರು ಮೃತಪಟ್ಟಿರವ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿಯಲ್ಲಿ ನಡೆದಿದೆ. ಫೆಬ್ರವರಿ 4ರಂದು ಸ್ಪಿರಿಟ್ ಸೇವಿಸಿದ್ದ ಬಳಿಕ ನಾಲ್ವರು ಅಸ್ವಸ್ಥಗೊಂಡಿದ್ದರು. ಆ ಪೈಕಿ ಹುಬ್ಬಳ್ಳಿಯ ಕಿಮ್ಸ್​​ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಮೇಶ್ ಹೊಸಹಳ್ಳಿ ಮತ್ತು ಅಮರಯ್ಯ ಹಿರೇಮಠ ಪ್ರಾಣ ಕಳೆದುಕೊಂಡಿದ್ದರೆ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *