ವೈಭವ್ ಸೂರ್ಯವಂಶಿಯ ಅಂತರರಾಷ್ಟ್ರೀಯ ಪಾದಾರ್ಪಣೆಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಡಿವಿಲಿಯರ್ಸ್, ಐಪಿಎಲ್‌ನಲ್ಲಿ ವೈಭವ್ ಪ್ರದರ್ಶನ ನೀಡಿದ ರೀತಿಯನ್ನು ಗಮನಿಸಿದರೆ, ಅವರಿಗೆ ಐರ್ಲೆಂಡ್ ವಿರುದ್ಧ ಅವಕಾಶ ಸಿಗಬೇಕಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ವೈಭವ್ಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೂಕ್ತವಾಗಿತ್ತು.