
‘ಬಾಸ್’ ಸಿನಿಮಾ ರಿಲಿಸ್ಗೆ ವಿಜಯಲಕ್ಷ್ಮೀ ದರ್ಶನ್ ಅಡ್ಡಗಾಲು ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ವಿಷಯದಲ್ಲಿ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಆದರೆ, ಸದ್ಯದ ಪರಿಸ್ಥಿತಿ ನೋಡಿ ಹಂಚಿಕೆದಾರರು, ಥಿಯೇಟರ್ ಮಾಲೀಕರು ಈ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಲವ ಮಾತನಾಡಿದ್ದಾರೆ. ‘ದಯವಿಟ್ಟು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನೀವು ಅನೇಕ ಯುವಕರಿಗೆ ಬೆಂಬಲ ನೀಡಿದ್ದೀರಾ. ಅದೇ ರೀತಿ ನಮಗೂ ಬೆಂಬಲ ಕೊಡಿ’ ಎಂದು ಅವರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.