ವ್ಯಕ್ತಿ ಅನುಮಾಸ್ಪದ ಸಾವು: ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಪೊಲೀಸರಿಗೆ ಗಾಯ

ವ್ಯಕ್ತಿ ಅನುಮಾಸ್ಪದ ಸಾವು: ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಪೊಲೀಸರಿಗೆ ಗಾಯ

ಹಾಸನ, ಮಾರ್ಚ್​ 06: ಬಾರ್ ಎದುರು ಕಾರಿನೊಳಗೆ ವ್ಯಕ್ತಿ ಅನುಮಾನಾಸ್ಪದ ಸಾವನ್ನಪ್ಪಿರುವಂತಹ ಘಟನೆ ಹಾಸನ ತಾಲೂಕಿನ ರಾಯಪುರ ಬಳಿಯ ಲಕ್ಷ್ಮೀ ವೆಂಕಟೇಶ್ವರ ಬಾರ್​​​ ಬಳಿ ನಿನ್ನೆ ನಡೆದಿದೆ. ವೀರಾಪುರದ ದೊರೆಸ್ವಾಮಿ(42) ಶವ ಪತ್ತೆ ಆಗಿತ್ತು. ಬಾರ್ ಎದುರು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿರುವ ಸಂಬಂಧಿಕರು ಘಟನೆ ಖಂಡಿಸಿ ಬಾರ್ ಎದುರು ಶವವಿಟ್ಟು ಪ್ರತಿಭಟಿಸಿದ್ದಾರೆ. ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಲಘು ಲಾಠಿಪ್ರಹಾರ ನಡೆಸಿ ಪೊಲೀಸರು ಗುಂಪು ಚದುರಿಸಿದ್ದಾರೆ. ಈ ವೇಳೆ ಹಾಸನ ಡಿವೈಎಸ್‌ಪಿ ಗಂಗಾಧರಪ್ಪ, ಗ್ರಾಮಾಂತರ ಠಾಣೆ ಎಸ್‌ಐ ಕುಮಾರ್​, ಕಾನ್ಸ್‌ಟೇಬಲ್‌ಗಳಾದ ಜಮಾಲುದ್ದೀನ್, ಕುಮಾರ್ ಎಂಬುವವರಿಗೆ ಗಾಯಗಳಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *