
ಹಾಸನ, ಮಾರ್ಚ್ 06: ಬಾರ್ ಎದುರು ಕಾರಿನೊಳಗೆ ವ್ಯಕ್ತಿ ಅನುಮಾನಾಸ್ಪದ ಸಾವನ್ನಪ್ಪಿರುವಂತಹ ಘಟನೆ ಹಾಸನ ತಾಲೂಕಿನ ರಾಯಪುರ ಬಳಿಯ ಲಕ್ಷ್ಮೀ ವೆಂಕಟೇಶ್ವರ ಬಾರ್ ಬಳಿ ನಿನ್ನೆ ನಡೆದಿದೆ. ವೀರಾಪುರದ ದೊರೆಸ್ವಾಮಿ(42) ಶವ ಪತ್ತೆ ಆಗಿತ್ತು. ಬಾರ್ ಎದುರು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿರುವ ಸಂಬಂಧಿಕರು ಘಟನೆ ಖಂಡಿಸಿ ಬಾರ್ ಎದುರು ಶವವಿಟ್ಟು ಪ್ರತಿಭಟಿಸಿದ್ದಾರೆ. ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಲಘು ಲಾಠಿಪ್ರಹಾರ ನಡೆಸಿ ಪೊಲೀಸರು ಗುಂಪು ಚದುರಿಸಿದ್ದಾರೆ. ಈ ವೇಳೆ ಹಾಸನ ಡಿವೈಎಸ್ಪಿ ಗಂಗಾಧರಪ್ಪ, ಗ್ರಾಮಾಂತರ ಠಾಣೆ ಎಸ್ಐ ಕುಮಾರ್, ಕಾನ್ಸ್ಟೇಬಲ್ಗಳಾದ ಜಮಾಲುದ್ದೀನ್, ಕುಮಾರ್ ಎಂಬುವವರಿಗೆ ಗಾಯಗಳಾಗಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.