All posts by nagaraj11081993

‘ಶಾರುಖ್​ ಕೇವಲ ಸಹೋದ್ಯೋಗಿ, ಅವರು ಎಂದಿಗೂ ಗೆಳೆಯರಾಗಲ್ಲ’; ಸನ್ನಿ ಡಿಯೋಲ್  – Kannada News | Sunny Deol Reveals Reasons Behind Darr Movie Fight With Shah Rukh Khan

1993ರಲ್ಲಿ ತೆರೆಕಂಡ ‘ಡರ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಟ ಸನ್ನಿ ಡಿಯೋಲ್ ಹಾಗೂ ಶಾರುಖ್ ಖಾನ್ ನಡುವೆ ದೊಡ್ಡ ಜಟಾಪಟಿ ನಡೆದಿತ್ತು. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯ ಸನ್ನಿ ಡಿಯೋಲ್ ಅವರ ತೀವ್ರ ಕೋಪಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ಅವರು ತಮ್ಮ ಕೈಗಳಿಂದಲೇ ಜೀನ್ಸ್ ಪ್ಯಾಂಟ್ ಹರಿದುಕೊಂಡಿದ್ದರು. ಈ ಘಟನೆಯ ನಂತರ ಇಬ್ಬರ ನಡುವೆ ಮಾತುಕತೆ ಸಂಪೂರ್ಣವಾಗಿ ನಿಂತುಹೋಗಿತ್ತು.

ಅಭದ್ರತೆಯೇ ಜಗಳಕ್ಕೆ ಮುಖ್ಯ ಕಾರಣ:

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ ಈ ಹಳೆಯ ಘಟನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ನಟರಿಗೆ ಕಾಡುವ ಅಭದ್ರತೆಯೇ ಇಂತಹ ಘಟನೆಗಳಿಗೆ ಕಾರಣ ಎಂದು ಅವರು ಹೇಳಿದ್ದಾರೆ. ‘ಸಣ್ಣ ವಯಸ್ಸಿನಲ್ಲಿ ಇಂತಹ ತಪ್ಪುಗಳು ಸಹಜವಾಗಿ ನಡೆಯುತ್ತವೆ. ನಟರು ತಮ್ಮ ಪಾತ್ರವನ್ನು ಮಾತ್ರ ನಿರ್ವಹಿಸಬೇಕು. ಆದರೆ ಕೆಲವೊಮ್ಮೆ ಅಭದ್ರತೆಯಿಂದಾಗಿ ಅನಗತ್ಯ ಗೊಂದಲಗಳು ಹಾಗೂ ಕೆಟ್ಟ ವಾತಾವರಣ ನಿರ್ಮಾಣವಾಗುತ್ತದೆ’ ಎಂದಿದ್ದಾರೆ.

ಶಾರುಖ್ ಖಾನ್ ನನ್ನ ಸ್ನೇಹಿತನಲ್ಲ, ಕೇವಲ ಸಹದ್ಯೋಗಿ:

ಶಾರುಖ್ ಖಾನ್ ಅವರೊಂದಿಗಿನ ಪ್ರಸ್ತುತ ಬಾಂಧವ್ಯದ ಬಗ್ಗೆಯೂ ಸನ್ನಿ ಸ್ಪಷ್ಟನೆ ನೀಡಿದ್ದಾರೆ. ತಾವು ಎಂದು ಶಾರುಖ್ ಅವರ ಶತ್ರುವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ಶಾರುಖ್ ಖಾನ್ ತಮಗೆ ಕೇವಲ ಸಹದ್ಯೋಗಿ ಮಾತ್ರ, ಆಪ್ತ ಸ್ನೇಹಿತನಲ್ಲ ಎಂದು ಹೇಳಿದ್ದಾರೆ. ನೈಜ ಸ್ನೇಹ ಎಂಬುದು ಬಾಲ್ಯದಲ್ಲಿ ಮಾತ್ರ ಸಿಗುತ್ತದೆ. ಚಿತ್ರರಂಗದಲ್ಲಿರುವವರೆಲ್ಲರೂ ಕೇವಲ ಕೆಲಸದ ಸಹೋದ್ಯೋಗಿಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

16 ವರ್ಷಗಳ ಸುದೀರ್ಘ ಮೌನದ ನಂತರ ಆದ ಸಂಧಾನ:

‘ಡರ್’ ಚಿತ್ರದಲ್ಲಿ ಸನ್ನಿ ಡಿಯೋಲ್ ನಾಯಕನಾಗಿದ್ದರು. ಶಾರುಖ್ ಖಾನ್ ಖಳನಾಯಕನ ಪಾತ್ರದಲ್ಲಿದ್ದರು. ಆದರೆ ನಾಯಕನಿಗಿಂತ ಖಳನಾಯಕನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದ್ದು ಸನ್ನಿ ಅವರಿಗೆ ಬೇಸರ ತಂದಿತ್ತು. ಈ ಕಾರಣದಿಂದಾಗಿ ಇಬ್ಬರೂ ಸುಮಾರು 16 ವರ್ಷಗಳ ಕಾಲ ಪರಸ್ಪರ ಮಾತನಾಡಲಿಲ್ಲ. 2023ರಲ್ಲಿ ‘ಗದರ್ 2’ ಸಿನಿಮಾ ಯಶಸ್ವಿಯಾದಾಗ ಇಬ್ಬರ ನಡುವಿನ ಸುದೀರ್ಘ ಸುದೀರ್ಘ ವೈರತ್ವ ಕೊನೆಗೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೆಎಸ್​ಆರ್​ಟಿಸಿ ಸೇರಿ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಬಹುತೇಕ ಫಿಕ್ಸ್: ಸಿಎಂ ಗ್ರೀನ್ ಸಿಗ್ನಲ್ ಒಂದೇ ಬಾಕಿ – Kannada News | Karnataka Bus Ticket Fare Hike Likely: KSRTC, BMTC Fare Revision Committee

ಬೆಂಗಳೂರು, ಆಗಸ್ಟ್ 18: ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಏರಿಕೆ (Bus Ticket Price Hike) ಮಾಡುವ ಕುರಿತು ಚರ್ಚೆ ತೀವ್ರಗೊಂಡಿದೆ. ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಕಾರಣ ಡೀಸೆಲ್ ದರ ಏರಿಕೆಯಾಗಿದ್ದು, ಇದರಿಂದ ನಾಲ್ಕು ಸಾರಿಗೆ ನಿಗಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ನಿಗಮಗಳ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ ಶೇ 33ರಷ್ಟು ಹಾಗೂ ಬಿಎಂಟಿಸಿ ಶೇ 44ರಷ್ಟು ಟಿಕೆಟ್ ದರ ಏರಿಕೆಗೆ ಮನವಿ ಮಾಡಿದೆ ಎನ್ನಲಾಗಿದೆ.

ಸಾರಿಗೆ ನಿಗಮಗಳಿಗೆ 40 ಕೋಟಿ ರೂ. ಹೆಚ್ಚುವರಿ ಹೊರೆ

ಡೀಸೆಲ್ ದರ ಏರಿಕೆಯಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, NWKRTC ಮತ್ತು KKRTC ನಿಗಮಗಳಿಗೆ ತಿಂಗಳಿಗೆ ಸುಮಾರು 40 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ವಾರ್ಷಿಕವಾಗಿ ಸುಮಾರು 480 ಕೋಟಿ ರೂ. ನಷ್ಟವಾಗುವ ಸಾಧ್ಯತೆಯಿದೆ.

ಆರು ಬಾರಿ ಡೀಸೆಲ್ ದರ ಏರಿಕೆ: ಸಚಿವ

ದರ ಏರಿಕೆ ಕುರಿತು ಮಾತನಾಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಈಗಾಗಲೇ ಆರು ಬಾರಿ ಡೀಸೆಲ್ ದರ ಹೆಚ್ಚಳವಾಗಿದೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ. ಡೀಸೆಲ್ ದರ ಏರಿಕೆಯಿಂದ ವಾರಕ್ಕೆ 7ರಿಂದ 8 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಟಿಕೆಟ್ ದರ ನಿಗದಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಮಿತಿ ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ದರ ಏರಿಕೆ ಕುರಿತು ಶಿಫಾರಸು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ. ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅಧ್ಯಕ್ಷರಾಗಿದ್ದು, ದ್ವಾರಕನಾಥ್ ಬಾಬು, ನಿವೃತ್ತ ಸರ್ಕಾರಿ ಕಾರ್ಯದರ್ಶಿ ಡಾ. ಅಬ್ದುಲ್ ಪಿಂಜರಿ ಹಾಗೂ ಐಐಎಸ್‌ಸಿ ಪ್ರತಿನಿಧಿ ಸದಸ್ಯರಾಗಿದ್ದಾರೆ.

ಸಮಿತಿ ತನ್ನ ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಗಮನಕ್ಕೆ ತಂದು ಟಿಕೆಟ್ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ರಯಾಣಿಕರಿಂದ ದರ ಏರಿಕೆಗೆ ವಿರೋಧ

ಇನ್ನೊಂದೆಡೆ, ಟಿಕೆಟ್ ದರ ಏರಿಕೆ ಕುರಿತು ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಮತ್ತೆ ದರ ಹೆಚ್ಚಿಸುವುದು ಸರಿಯಲ್ಲ ಎಂದು ಪ್ರಯಾಣಿಕರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ: ಶೇ 25 ರ ಹೆಚ್ಚಳಕ್ಕೆ ಸಿಎಂಗೆ ಮನವಿ

ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ, ಡೀಸೆಲ್ ದರ ಏರಿಕೆಯ ಪರಿಣಾಮ ಹಾಗೂ ಪ್ರಯಾಣಿಕರ ಮೇಲಿನ ಹೊರೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸಮಿತಿ ವರದಿ ನೀಡಲಿದೆ. ವರದಿ ಬಳಿಕ ಮುಖ್ಯಮಂತ್ರಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಲಿಂಗೈಕ್ಯ: ಬೆಳಗಾವಿಯಲ್ಲಿ ಇಂದು ಕ್ರಿಯಾ ಸಮಾಧಿ – Kannada News | Kedarnath Temple Former Head Priest Gurulingayya Passes Away in Bengaluru

ಕೇದಾರನಾಥ ದೇಗುಲದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ ಲಿಂಗೈಕ್ಯ

ಬೆಂಗಳೂರು, ಆಗಸ್ಟ್ 18: ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯದ ಪವಿತ್ರ ಕೇದಾರನಾಥ ಕ್ಷೇತ್ರಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನ ಅರ್ಚಕ ಗುರುಲಿಂಗಯ್ಯ (76) ಅವರು ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದು, ಹಿಮಾಲಯದ ಪುಣ್ಯಕ್ಷೇತ್ರದ ಸನ್ನಿಧಿಯಲ್ಲಿ ದಶಕಗಳ ಕಾಲ ಶಿವನ ಆರಾಧನೆ ಮಾಡಿದ್ದ ಶ್ರೇಷ್ಠ ಅರ್ಚಕರೊಬ್ಬರನ್ನು ಧಾರ್ಮಿಕ ಲೋಕ ಇಂದು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ದೇಶಾದ್ಯಂತ ಇರುವ ಅಪಾರ ಭಕ್ತವೃಂದ ತೀವ್ರ ಶೋಕ ವ್ಯಕ್ತಪಡಿಸಿದೆ.

ಗುರುಲಿಂಗಯ್ಯ ಯಾರು?

ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕ ಬಾಗೇವಾಡಿ ಗ್ರಾಮದವರಾದ ಗುರುಲಿಂಗಯ್ಯ ಅವರ ಕುಟುಂಬವು ಕಳೆದ ಮೂರು ತಲೆಮಾರಿನಿಂದ ಉತ್ತರಾಖಂಡದಲ್ಲೇ ನೆಲೆಸಿದೆ. ಇವರು, ಕೇದಾರಪೀಠದ 322ನೇ ಜಗದ್ಗುರು ರಾವಲ್ ಶಾಂತ ಶಿವಾಚಾರ್ಯ ಭಗವತ್ಪಾದರ ಕಾಲದಲ್ಲಿ ಅರ್ಚಕರಾಗಿ ಸೇವೆಗೆ ಸೇರಿದ್ದರು. 1970 ರಿಂದ ಸುಮಾರು 40 ವರ್ಷಗಳ ಕಾಲ ಕೇದಾರನಾಥೇಶ್ವರನ ಪ್ರಧಾನ ಅರ್ಚಕರಾಗಿ ನಿಷ್ಠೆ ಹಾಗೂ ಭಕ್ತಿಯಿಂದ ಸುದೀರ್ಘ ಸೇವೆ ಸಲ್ಲಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಕೇದಾರನಾಥ ಪೀಠದ (ಹಿಮವತ್ ಕೇದಾರ ವೈರಾಗ್ಯ ಪೀಠ) ಸಾಂಪ್ರದಾಯಿಕ ನಿಯಮಗಳ ಪ್ರಕಾರ, ದಕ್ಷಿಣ ಭಾರತದ (ವಿಶೇಷವಾಗಿ ಕರ್ನಾಟಕದ) ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಂಗಮ ಅರ್ಚಕರೇ ಇಲ್ಲಿ ಪೂಜೆ ಸಲ್ಲಿಸುವ ರಾವಲ್ ಅಥವಾ ಪ್ರಧಾನ ಅರ್ಚಕರಾಗುತ್ತಾರೆ. ಗುರುಲಿಂಗಯ್ಯ ಅವರು ಈ ಪವಿತ್ರ ಪರಂಪರೆಯನ್ನು ಮುನ್ನಡೆಸಿದವರಾಗಿದ್ದಾರೆ.

ಇಂದು ಸ್ವಗ್ರಾಮದಲ್ಲಿ ಕ್ರಿಯಾ ಸಮಾಧಿ

ಗುರುಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಅವರ ಸ್ವಗ್ರಾಮವಾದ ಬೆಳಗಾವಿಯ ಚಿಕ್ಕ ಬಾಗೇವಾಡಿಗೆ ತರಲಾಗಿದೆ. ಇಂದು ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಕಲ ಗೌರವಗಳೊಂದಿಗೆ ಅವರ ಕ್ರಿಯಾ ಸಮಾಧಿ ನೆರವೇರಲಿದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:38 am, Tue, 18 August 26

Source link

ಹೀಗಾದ್ರೆ ಟೀಮ್ ಇಂಡಿಯಾ ಸೋಲುತ್ತೆ! ಮಾಜಿ ಕ್ರಿಕೆಟಿಗನ ಎಚ್ಚರಿಕೆ – Kannada News | IND vs SL Test : Aggressive Approach Could Backfire on Team India

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡತ್ತಿರುವ ಟೀಮ್ ಇಂಡಿಯಾಗೆ ಮಾಜಿ ಆರಂಭಿಕ ಆಟಗಾರ ಹಾಗೂ ಖ್ಯಾತ ವಿಶ್ಲೇಷಕ ಆಕಾಶ್ ಚೋಪ್ರಾ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಸಾಧಿಸಿದ್ದರೂ, ದ್ವಿತೀಯ ಇನಿಂಗ್ಸ್‌ನ ತಂತ್ರಗಾರಿಕೆಯಲ್ಲಿ ಸಣ್ಣ ತಪ್ಪಾದರೂ ಪಂದ್ಯ ಕೈತಪ್ಪಿ ಶ್ರೀಲಂಕಾ ಪಾಲಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ 178 ರನ್‌ಗಳ ಭರ್ಜರಿ ಮುನ್ನಡೆ:

ಪಂದ್ಯದ ಮೂರನೇ ದಿನದಂದು ಶ್ರೀಲಂಕಾ ತಂಡವನ್ನು 284 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 178 ರನ್‌ಗಳ ಭಾರೀ ಮುನ್ನಡೆಯನ್ನು ತನ್ನದಾಗಿಸಿಕೊಂಡಿದೆ. ಮೇಲ್ನೋಟಕ್ಕೆ ಭಾರತ ಸುಸ್ಥಿತಿಯಲ್ಲಿದ್ದರೂ, ಪಂದ್ಯದ ಮುಂದಿನ ಎರಡು ದಿನಗಳು ಅತ್ಯಂತ ನಿರ್ಣಾಯಕವಾಗಿವೆ.

ಆಕಾಶ್ ಚೋಪ್ರಾ ನೀಡಿದ ಎಚ್ಚರಿಕೆ ಏನು?

ನಾಯಕ ಶುಭ್‌ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಜೋಡಿಗೆ ಗಂಭೀರ ಸಲಹೆ ನೀಡಿರುವ ಆಕಾಶ್ ಚೋಪ್ರಾ, ಭಾರತ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದಿದ್ದಾರೆ. ಇದಕ್ಕೆ ಅವರು ಪ್ರಮುಖವಾಗಿ ಮೂರು ಕಾರಣಗಳನ್ನು ಮುಂದಿಟ್ಟಿದ್ದಾರೆ:

ಮಳೆಯ ಭೀತಿ: ಗಾಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಪಂದ್ಯದ ಸಮಯ ವ್ಯರ್ಥವಾಗುವ ಸಾಧ್ಯತೆ ದಟ್ಟವಾಗಿದೆ.

ವೇಗದ ಬ್ಯಾಟಿಂಗ್‌ನ ಅನಿವಾರ್ಯತೆ: ಮಳೆಯಿಂದ ಸಮಯ ವ್ಯರ್ಥವಾಗುವುದನ್ನು ತಡೆಯಲು ಭಾರತ 4ನೇ ದಿನದಂದು ಅತ್ಯಂತ ವೇಗವಾಗಿ ರನ್ ಗಳಿಸಬೇಕಿದೆ. ಕೇವಲ 40 ಓವರ್‌ಗಳ ಬ್ಯಾಟಿಂಗ್ ನಡೆಸಿ ಶ್ರೀಲಂಕಾ ತಂಡಕ್ಕೆ ಸುಮಾರು 350 ರನ್‌ಗಳ ಕಠಿಣ ಗುರಿ ನೀಡಬೇಕು. ಆಗ ಮಾತ್ರ ಲಂಕಾವನ್ನು ಎರಡನೇ ಇನಿಂಗ್ಸ್‌ನಲ್ಲಿ ಆಲೌಟ್ ಮಾಡಲು ಭಾರತಕ್ಕೆ ಸಾಕಷ್ಟು ಸಮಯ ಸಿಗುತ್ತದೆ.

ಕುಸಿತದ ಆತಂಕ: ಟಿ20 ಶೈಲಿಯಲ್ಲಿ ಅತಿ ವೇಗವಾಗಿ ರನ್ ಗಳಿಸಲು ಹೋಗಿ ಭಾರತದ ವಿಕೆಟ್‌ಗಳು ಸರಣಿ ರೂಪದಲ್ಲಿ ಉರುಳಿದರೆ, ಅದು ಶ್ರೀಲಂಕಾ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ವರದಾನವಾಗಲಿದೆ. ರನ್ ವೇಗ ಹೆಚ್ಚಿಸುವ ಭರದಲ್ಲಿ ಭಾರತೀಯ ಬ್ಯಾಟರ್‌ಗಳು ಎಡವಿದರೆ ‘ಸೋಲಿನ ಸುಳಿಗೆ’ ಸಿಲುಕುವ ಅಪಾಯವಿದೆ ಎಂದು ಚೋಪ್ರಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಒಟ್ಟಾರೆಯಾಗಿ ಹೇಳುವುದಾದರೆ, ಗಾಲೆ ಟೆಸ್ಟ್‌ನಲ್ಲಿ ಭಾರತ ಮೊದಲ ಇನಿಂಗ್ಸ್‌ನ ಮುನ್ನಡೆಯೊಂದಿಗೆ ಬಲಿಷ್ಠ ಸ್ಥಿತಿಯಲ್ಲಿದ್ದರೂ, ಮಳೆಯ ಭೀತಿ ಮತ್ತು ಅತಿಯಾದ ಆಕ್ರಮಣಕಾರಿ ಆಟದ ಅಪಾಯ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲದು. ಶುಭ್‌ಮನ್ ಗಿಲ್ ಮತ್ತು ಗೌತಮ್ ಗಂಭೀರ್ ಅವರ ಚಾಣಾಕ್ಷ ತಂತ್ರಗಾರಿಕೆ ಮಾತ್ರ ಈ ಕಠಿಣ ಸವಾಲನ್ನು ಗೆಲುವಾಗಿ ಪರಿವರ್ತಿಸಿ, ಭಾರತದ WTC ಫೈನಲ್ ಕನಸನ್ನು ಜೀವಂತವಾಗಿಡಬಲ್ಲದು. ಅದರಂತೆ ಕೊನೆಯ ಎರಡು ದಿನಗಳ ಮೂಲಕ ಟೀಮ್ ಇಂಡಿಯಾ ಪಂದ್ಯವನ್ನು ಗೆಲ್ಲಲಿದೆಯಾ ಕಾದು ನೋಡಬೇಕಿದೆ.

Source link

ಆ್ಯಂಕರಿಂಗ್​ಗೆ ಗುಡ್​ ಬೈ ಹೇಳಿದ ಅನುಪಮಾ ಗೌಡ; ಕಾರಣ ಕೊಟ್ಟ ನಟಿ – Kannada News | Anupama Gowda Bids Adieu to Anchoring: Actress Reveals Reasons Behind Sudden Decision

ನಟಿ ಅನುಪಮಾ ಗೌಡ ಅವರು (Anupama Gowda) ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗಮನ ಸೆಳೆದವರು. ಅವರು ಸೋಶಿಯಲ್ ಮೀಡಿಯಾದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಆ್ಯಂಕರಿಂಗ್ ಕೂಡ ಮಾಡುತ್ತಿದ್ದರು. ಕಲರ್ಸ್ ಕನ್ನಡದಲ್ಲಿ ಹಲವು ಶೋಗಳನ್ನು ಅವರು ಹೋಸ್ಟ್ ಮಾಡಿದ್ದರು. ಆದರೆ, ಈಗ ಅವರು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅನಿವಾರ್ಯವಾಗಿ ಆ್ಯಂಕರಿಂಗ್​ಗೆ ಗುಡ್​ಬೈ ಹೇಳುವ ಕೆಲಸ ಮಾಡಿದ್ದಾರೆ. ಈ ವಿಷಯದಲ್ಲಿ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಅವರು ನಿರ್ಧಾರ ಬದಲಿಸಬೇಕು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಮುಂದಿನ ಜರ್ನಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಅರ್ಧಕ್ಕೆ ನಿಂತ ಕಿರುತೆರೆ ಪಯಣ

‘ಮಜಾ ಭಾರತ್​’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್​ಸ್ಟಾರ್ಸ್’, ‘ಸುವರ್ಣ ಜ್ಯಾಕ್​ಪಾಟ್’, ‘ಗರ್ಲ್ಸ್ vs ಬಾಯ್ಸ್’, ‘ಕ್ವಾಟ್ಲೆ ಕಿಚನ್’ ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಅನುಪಮಾ ಭಾವುಕ ಮಾತು

ವಿಡಿಯೋದಲ್ಲಿ ಅವರು ತಮ್ಮ ಆ್ಯಂಕರಿಂಗ್ ಜರ್ನಿ ನೆನೆದಿದ್ದಾರೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅದೇನು ಎಂಬುದು ನಾನು ಮಾಡಿಲ್ಲ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ’ ಎಂದಿದ್ದಾರೆ ಅನುಪಮಾ. ‘ಸೀರಿಯಲ್​ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅನುಪಮಾ ಗೌಡ ಎದುರು ಹುಡುಗಿ ವಿಚಾರಕ್ಕೆ ನಾಚಿ ನೀರಾದ ರಾಜ್ ಬಿ ಶೆಟ್ಟಿ

ಅನುಪಮಾ ಗೌಡ ಜರ್ನಿ

2003ರಲ್ಲಿ ರಿಲೀಸ್ ಆದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅನುಪಮಾ ಗಮನ ಸೆಳೆದರು. ಆ ಬಳಿಕ 2014ರಲ್ಲಿ ರಿಲೀಸ್ ಆದ ‘ಅಕ್ಕ’ ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ದ್ವಿಪಾತ್ರದಲ್ಲಿ ಮಿಂಚಿದ್ದರು. ಇದು ಅವರಿಗೆ ದೊಡ್ಡ ಸವಾಲಾಗಿತ್ತು. 2017-18ರಲ್ಲಿ ಬಿಗ್ ಬಾಸ್​ನಲ್ಲಿ ಸ್ಪರ್ಧೆ ಮಾಡಿದರು. ಅವರು ಕೆಲವು ಸಿನಿಮಾ ಕೂಡ ಮಾಡಿದ್ದು, ರಾಜ್ಯ ಪ್ರಶಸ್ತಿ ಗೆದ್ದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ: ಗಾಳಿಯ ವೇಗ ಹೆಚ್ಚಳ! – Kannada News | Karnataka Weather Forecast: Light to Moderate Rain Alert Across Coastal and Inland Districts

ಬೆಂಗಳೂರು, ಆಗಸ್ಟ್ 18: ರಾಜ್ಯದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಹವಾಮಾನದಲ್ಲಿ (Monsoon) ಪ್ರಮುಖ ಬದಲಾವಣೆ ಕಂಡುಬರಲಿದ್ದು, ವಿವಿಧ ಜಿಲ್ಲೆಗಳಲ್ಲಿ తేಲಾದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕ

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಸ್ಥಿರವಾಗಿರಲಿದೆ.

ಉತ್ತರ ಒಳನಾಡು

ಕಲಬುರಗಿ, ವಿಜಯಪುರ, ಬಾಗಲಕೋಟೆ, ಗದಗ, ರಾಯಚೂರು ಮತ್ತು ಧಾರವಾಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ಬೆಳಗಾವಿ, ಬಿದರ್, ಹಾವೇರಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗಲಿದೆ.

ದಕ್ಷಿಣ ಒಳನಾಡು

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಹಾಗೂ ರೈತರು ಗಾಳಿಯ ವೇಗ ಹೆಚ್ಚಿರುವ ಕಾರಣ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Madhya Pradesh Accident: ಗ್ವಾಲಿಯರ್‌ನಲ್ಲಿ ಭೀಕರ ಅಪಘಾತ, ಕಾರ್ಮಿಕರಿದ್ದ ವಾಹನಕ್ಕೆ ಟ್ರಕ್ ಡಿಕ್ಕಿಯಾಗಿ 8 ಮಂದಿ ಸಾವು – Kannada News | Gwalior Road Accident: 8 Labourers From Uttar Pradesh Killed, Over 25 Injured in Truck Collision

ಭೋಪಾಲ್, ಆಗಸ್ಟ್ 18: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-79ರಲ್ಲಿ ರಾತ್ರಿ 12ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಿಂಕಾ ಸಮೀಪದಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಲೋಡಿಂಗ್ ವಾಹನಕ್ಕೆ ಎದುರಿನಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲೋಡಿಂಗ್ ವಾಹನ ಪಲ್ಟಿಯಾಗಿದ್ದು, ಅದರಲ್ಲಿದ್ದ ಹಲವು ಮಂದಿ ವಾಹನದೊಳಗೆ ಸಿಲುಕಿಕೊಂಡಿದ್ದರು.

ಅಪಘಾತದ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು, ಸ್ಥಳೀಯರು ಹಾಗೂ ವಾಹನ ಸವಾರರು ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳನ್ನು ಗ್ವಾಲಿಯರ್‌ನ ಜಯ ಆರೋಗ್ಯ ಆಸ್ಪತ್ರೆಯ ಟ್ರಾಮಾ ಸೆಂಟರ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.

ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರ

ಪೊಲೀಸ್ ಅಧಿಕಾರಿಗಳ ಪ್ರಕಾರ, ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಇನ್ನು ಕೆಲವರ ಆರೋಗ್ಯ ಸ್ಥಿರವಾಗಿದೆ. ಮೃತಪಟ್ಟವರಲ್ಲಿ ಕೆಲವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ.

ಭತ್ತ ನಾಟಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕರು

ಅಪಘಾತಕ್ಕೀಡಾದ ಕಾರ್ಮಿಕರು ಉತ್ತರ ಪ್ರದೇಶದವರು ಎನ್ನಲಾಗಿದ್ದು, ಭತ್ತ ನಾಟಿ ಕೆಲಸಕ್ಕಾಗಿ ಡಬ್ರಾ ಪ್ರದೇಶದ ಚನೋರ್‌ ಭಾಗಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ಊರಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ತಾರಾಪೀಠದ ಖಾಸಗಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ, 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

ಸದ್ಯ ಟ್ರಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರ ಚಾಲಕನಿಗೂ ಗಾಯಗಳಾಗಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Freedom Park protest: ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಪಾರ್ಕ್ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ – Kannada News | Bengaluru Traffic Advisory: Routes Diverted Near Freedom Park Due to JDS Protest Today

ಬೆಂಗಳೂರು, ಆಗಸ್ಟ್ 18: ಫ್ರೀಡಂಪಾರ್ಕ್‌ನಲ್ಲಿ ಇಂದು ಜೆಡಿಎಸ್ (JDS) ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಫ್ರೀಡಂಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿ ಸಂಚಾರ ಪೊಲೀಸರು ಆದೇಶಿಸಿದ್ದಾರೆ.

ಕೆ.ಜಿ.ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲತಿರುವು ಪಡೆದು ಫ್ರೀಡಂಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ರಸ್ತೆಯ ಮಹಾರಾಣಿ ಅಂಡರ್‌ಪಾಸ್ ರಸ್ತೆಯನ್ನು ಬಳಸಬೇಕಾಗುತ್ತದೆ. ಫ್ರೀಡಂಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಇನ್ನು ಖೋಡೆ ಜಂಕ್ಷನ್ ಕಡೆಯಿಂದ ಕೆ.ಆರ್.ಸರ್ಕಲ್ ಕಡೆಗೆ ಹೋಗುವ ಸವಾರರು ಸಂಚಾರ ದಟ್ಟಣೆ ತಡೆಯಲು ಹಳೆಯ ಜೆಡಿಎಸ್ ಕಚೇರಿ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸಬಹುದು. ಗಾಂಧಿನಗರ ಕಡೆಗೆ ಹೋಗುವ ವಾಹನ ಸವಾರರ ಅನುಕೂಲಕ್ಕಾಗಿ ಸುಬ್ಬಣ್ಣ ಜಂಕ್ಷನ್‌ನಿಂದ ಎಂ.ಟಿ.ಆರ್ ಜಂಕ್ಷನ್ ವರೆಗಿನ ಏಕಮುಖ ಸಂಚಾರ ರಸ್ತೆಯನ್ನು ತಾತ್ಕಾಲಿಕವಾಗಿ ದ್ವಿಮುಖ (Two-way) ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ.

ಸುಗಮ ಸಂಚಾರಕ್ಕಾಗಿ ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್‌ವರೆಗೆ, ವೈ.ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ ಹಾಗೂ ಕೆ.ಜಿ. ರಸ್ತೆಗಳಲ್ಲಿ ಯಾವುದೇ ರೀತಿಯ ವಾಹನ ಪಾರ್ಕಿಂಗ್ ಮಾಡಲು ಅವಕಾಶವಿರುವುದಿಲ್ಲ ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Mangala Gowri Vrat 2026: Horoscope Today for All 12 Zodiac Signs on August 18

ಇಂದು 2026 ಆಗಸ್ಟ್ 18, ಮಂಗಳವಾರ, ಪರಾಭವ ನಾಮ ಸಂವತ್ಸರ, ಶ್ರಾವಣ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿ ಇದ್ದು, ಚಿತ್ತಾ ನಕ್ಷತ್ರ, ಶುಭ ಯೋಗ, ಕೌಲವ ಕರಣಗಳ ಪ್ರಭಾವವಿದೆ. ಈ ದಿನದ ರಾಹುಕಾಲ ಮಧ್ಯಾಹ್ನ 3:29 ರಿಂದ 5:03ರ ವರೆಗೆ ಇರಲಿದೆ. ಸಂಕಲ್ಪ ಕಾಲ, ಸರ್ವಸಿದ್ಧಿ ಕಾಲವು ಮಧ್ಯಾಹ್ನ 12:23 ರಿಂದ 1:57ರ ವರೆಗೆ ಇದೆ. ಶ್ರಾವಣ ಮಾಸದ ಮಂಗಳವಾರವು ವಿಶೇಷವಾಗಿದ್ದು, ಪತಿಯ ಶ್ರೇಯಸ್ಸು, ಕುಟುಂಬದ ಯಶಸ್ಸು, ಸುಖ-ಶಾಂತಿ, ನೆಮ್ಮದಿ ಹಾಗೂ ಸಂತಾನಕ್ಕಾಗಿ ಮಹಿಳೆಯರು ಮಂಗಳಗೌರಿ ವ್ರತವನ್ನು ಆಚರಿಸುವ ಶುಭದಿನ ಇದಾಗಿದೆ. ಈ ದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Source link

Horoscope Today 18 August : ಇಂದು ಈ ರಾಶಿಯವರು ದುರ್ಬಲರ‌ ಮೇಲೆ‌ ಪ್ರಹಾರ ಮಾಡಬಹುದು… – Kannada News | 18 August Daily Horoscope: Know Your Today’s Rashifala and Astrological Guide

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ಮಂಗಳವಾರದಂದು ವಿಶೇಷ ಭೋಜನ, ದೇಹದಂಡನೆ, ದೂರ ಪ್ರಯಾಣ, ಹೊಣೆಗಾರಿಕೆ ಮುಕ್ತಾಯ, ಋಣಮುಕ್ತಿಯ ಸಂತಸ, ಸ್ವಚಿಂತನೆಯಿಂದ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಸ್ವಾತೀ, ಯೋಗ : ಶುಭ, ಕರಣ : ಭದ್ರ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:04, ಯಮಗಂಡ ಕಾಲ 09:16 – 10:50, ಗುಳಿಕ ಕಾಲ 12:23 – 13:57

ಮೇಷ ರಾಶಿ :

ಸಿಗುವ ಸೌಕರ್ಯಗಳಿಂದ ಜಾಡ್ಯವು ಬರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ವಿಶ್ವಾಸದ ದುರುಪಯೋಗ ಮಾಡಿಕೊಳ್ಳಬಾರದು. ಬಂಧುಗಳ ಜೊತೆ ವ್ಯವಹಾರ ಮಾಡುವಾಗ ಪಾರದರ್ಶಕತೆ ಬೇಕಾದೀತು. ಎಲ್ಲರಿಂದಲೂ ಒಂದೇ ವಿಚಾರವನ್ನು ಕೇಳಿ ಮನಸ್ಸಿಗೆ ಭಾರವಾಗುವುದು. ಇಷ್ಟು ವರ್ಷ ನಡೆಸಿದ ಉದ್ಯಮವು ನಿಮಗೆ ಸಾಕೆನಿಸಬಹುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಶುಭ ಸಮಾರಂಭಗಳಿಗೆ ಆಹ್ವಾನ ಬರಲಿದೆ.

ವೃಷಭ ರಾಶಿ :

ಪ್ರಯಾಣಕ್ಕಾಗಿ ಹಾಗೂ ಅನಾರೋಗ್ಯವನ್ನು ಸರಿಮಾಡಿಕೊಳ್ಳಲೂ ಖರ್ಚು ಮಾಡಬೇಕಾಗಬಹುದು. ಅವಿವಾಹಿತರು ಯೋಗ್ಯ ಸಂಬಂಧವನ್ನು ನಿರೀಕ್ಷಿಸಬಹುದು. ಮಂಗಳ ಕಾರ್ಯದಿಂದ ಮನಸ್ಸು ಅರಳುವುದು. ಬದಲಾವಣೆಗಾಗಿ ನೀವು ಹಾಕಿಕೊಂಡ ಮಾರ್ಗ ಪರಿಶೀಲಿಸಿ. ಹುಡುಗಾಟ ಬುದ್ಧಿಯನ್ನು ಕಡಿಮೆ ಮಾಡುವುದು ಒಳ್ಳೆಯದು. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ.

ಮಿಥುನ ರಾಶಿ :

ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಅಪವಾದದಿಂದ ದೂರವಿರಬೇಕು ಎಂದರೂ ಏನಾದರೂ ಬಂದು ಸುತ್ತಿಕೊಳ್ಳುವುದು. ನಿರುದ್ಯೋಗಿಗಳು ಸ್ನೇಹಿತರ ಜೊತೆ ಚರ್ಚಿಸಿ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವರು. ಸಂಗಾತಿಯ ಜೊತೆ ಭವಿಷ್ಯವನ್ನು ಚಿಂತಿಸುವಿರಿ. ವಚನ ಭ್ರಷ್ಟರಾಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ಮಕ್ಕಳಿಗೆ ನೀವು ನಿರ್ಬಂಧವನ್ನು ಹಾಕಿ ಪ್ರಯೋಜನವಾಗದು.

ಕರ್ಕಾಟಕ ರಾಶಿ :

ತಂದೆಯಿಂದ ನಿಮಗೆ ಹಿತಕರವಾಗದ ಮಾತುಗಳನ್ನು ಕೇಳಬೇಕಾದೀತು. ನಿಮ್ಮ ಕೋಪವನ್ನು ಆದಷ್ಟು ಕಡಿಮೆ‌ಮಾಡಿಕೊಳ್ಳುವುದು ಉತ್ತಮ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವ್ಯವಹಾರವು ಮುಕ್ತಾಯವಾಗಬಹುದು. ಬೇಡದ ಮಾತಿಗಳನ್ನಾಡಿ ಕಲಹ ಮಾಡಿಕೊಳ್ಳುವಿರಿ. ಅವಕಾಶಗಳಿಗೆ ಕಾಯುತ್ತ ಕಾಲಹಣವಾಗುವುದು. ನಿಮ್ಮಿಂದ ಇನ್ನೊಬ್ಬರಿಗೆ ಅನಿವಾರ್ಯತೆ ಸೃಷ್ಟಿಯಾಗುವಂತೆ ಮಾಡುವಿರಿ.

ಸಿಂಹ ರಾಶಿ :

ನಿಮ್ಮ ಕೆಲಸವನ್ನು ಬೇರೆಯವರ ಮುಇಲಕ ಮಾಡಿಸಿಕೊಳ್ಳುವಿರಿ. ಇಂದಿನ ದಿನವು ಸುತ್ತಾಟದಲ್ಲಿ ಕಳೆಯಬಹುದು. ವಿವಾಹಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು. ಸಮಯಕ್ಕೆ ಸರಿಯಾಗಿ ಹೋಗದೇ ಮನೆಯಲ್ಲಿ ಆತಂಕ. ಹಿರಿಯರ ಸಹಕಾರದಿಂದ ದೈಹಿಕಬಲ, ಮನೋಬಲವು ಆರ್ಥಿಕಬಲ ಹೆಚ್ಚಾಗಬಹುದು. ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮಗೆ ಕೊಟ್ಟ ಹುದ್ದೆಯನ್ನು ನಿರ್ವಹಿಸುವಾಗ ಅದರ ಭಾರವೆಷ್ಟು ಎಂದು ಅರಿಯಿರಿ.

ಕನ್ಯಾ ರಾಶಿ :

ನೀವು ಹೂಡಿಕೆಯನ್ನು ಗೌಪ್ಯವಾಗಿ ಇಡಲಾಗದು. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಭಯಭೀತರನ್ನಾಗಿ‌ ಮಾಡೀತು. ನಿಮ್ಮ ಧ್ವನಿಯನ್ನು ಅರ್ಥಮಾಡಿಕೊಳ್ಳುವವನು ನಿಮ್ಮ ಜೊತೆಗಿರಬೇಕು. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌. ಇಂದು ನೀವು ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕಂಡಿದ್ದನ್ನು ಮಾತ್ರ ಸತ್ಯವೆಂದು ನಂಬಬೇಡಿ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು.

ತುಲಾ ರಾಶಿ :

ಆಗಬೇಕಾದ ಸೂಚನೆಯನ್ನು ಕಾಲಕಾಲಕ್ಕೆ ಕೊಟ್ಟರೆ ಸಾಕು. ನಿಮ್ಮ ಸಂತೋಷವನ್ನು ಕಹಿಯಾದ ಮಾತುಗಳು ಇಂದು ಕಸಿದುಕೊಳ್ಳಬಹುದು. ನೀವು ಇಂದು ಇತರರ ದೃಷ್ಟಿಯಲ್ಲಿ ಸಣ್ಣ ಮನಸ್ಸಿನವರಂತೆ ಕಾಣಿಸುವಿರಿ. ಸಹೋದ್ಯೋಗಿಗಳ ಸಹವಾಸದಿಂದ ದುಶ್ಚಟಕ್ಕೆ ಬೀಳುವವರಿದ್ದೀರಿ. ಎಲ್ಲ ಆಟವನ್ನು ಗೆಲ್ಲಬೇಕು ಎನ್ನುವುದು ಸರಿಯಾದರೂ, ಗೆಲ್ಲಲಾಗದೂ ಎಂಬುದೂ ಸತ್ಯ. ಹಾಗಾಗಿ ನಿಮ್ಮ ವರ್ತನೆಯು ಭಾಗವಹಿಸುವುದಕ್ಕೆ ಇರಲಿ. ಆಸ್ತಿಯ ಆಧಾರದ ಮೇಲೆ ನೀವು ಸಾಲ ಪಡೆಯುವಿರಿ.

ವೃಶ್ಚಿಕ ರಾಶಿ :

ಸಂಗಾತಿಯ ಕಾರಣದಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಉದ್ಯೋದಲ್ಲಿ ಉಂಟಾದ ರಾಜಕೀಯ ಉನ್ನತಿಗೆ ಆಪ್ತರಿಂದ ಪ್ರಶಂಸೆ ಸಿಗಬಹುದು. ಸ್ತ್ರೀಯರು ನಿಮ್ಮನ್ನು ಮುಚ್ಚಿಕೊಳ್ಳಬಹುದು. ನಿಮ್ಮ ಗುರಿಯು ಅಸ್ಪಷ್ಟವಾಗಿ ತೋರಬಹುದು. ಹಳೆಯ ನೋವು ಪುನಃ ಬರಬಹುದು. ಹಿತಶತ್ರುಗಳ ಭಯದಿಂದ ಮುಕ್ತರಾಗುವಿರಿ. ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಕಾಳಜಿ ನಿಮಗೆ ಅಪರೂಪವೆನಿಸುವಂತೆ ಆಗುವುದು.‌

ಧನು ರಾಶಿ :

ವ್ಯಾಪಾರದಲ್ಲಿ ಪ್ರಮಾಣಿಕತೆ ಇದ್ದರೆ ಆದಾಯವು ತಾನಾಗಿಯೇ ಹೆಚ್ಚುವುದು. ನಿಮಗೆ ಉಂಟಾದ ನೋವಿಗೆ ಸರ್ಕಾರ ಪರಿಹಾರವನ್ನೂ ಕೊಡಬಹುದು. ಸಂಗಾತಿಯು ನಿಮ್ಮ ಎಲ್ಲ ವಿಷಯಕ್ಕೂ ತಗಾದೆ ತೆಗೆಯಬಹುದು. ನಿಮ್ಮ ಬಗ್ಗೆ ತಿಳಿಯದೇ ಮನೆಯಲ್ಲಿ ಆತಂಕ ಸೃಷ್ಟಿಯಾಗಬಹುದು. ದುಡುಕಿನಿಂದ ನಿಮ್ಮ ವ್ಯಕ್ತಿತ್ವವು ಬೇರೆ ರೀತಿ ಕಾಣಿಸುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು.

ಮಕರ ರಾಶಿ :

ಇಂದಿನ ನಿಮ್ಮ ಪ್ರಯಾಣವು ಆಕಸ್ಮಿಕವಾಗಬಹುದು. ಹೆಚ್ಚಿ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ತೆರಳುವ ಮನಸ್ಸು ಬರುವುದು. ಕೆಟ್ಟ ಮಾರ್ಗದಿಂದ ಬರುವ ಹಣವನ್ನು ನೀವು ನಿರಾಕರಿಸುವಿರಿ. ಸಾಲವನ್ನು ಹಂತಹಂತವಾಗಿ ತೀರಿಸಲು ನೀವು ಯೋಜನೆ ರೂಪಿಸಿಕೊಳ್ಳುವಿರಿ. ಮಧ್ಯಮವರ್ಗದವರಿಗೆ ಇಂದಿನ ಖರ್ಚನ್ನು ಸಹಿಸಲಾಗದು. ಧನಸಂಗ್ರಹದ ತುರ್ತು ಸ್ಥಿತಿ ನಿಮಗೆ ಬರಬಹುದು. ಎಂದೂ ನಂಬದವರ ಮಾತನ್ನು ನೀವು ಇಂದು ನಂಬಬೇಕಾಗುವುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು.

ಕುಂಭ ರಾಶಿ :

ಹಳೆಯ ಸಂಪತ್ತನ್ನು ನೀವು ಬಳಸಬೇಕಾಗುವುದು. ಬೌದ್ಧಿಕ ಕಸರತ್ತನ್ನು ಮಾಡಲು ಹೋಗಿ ತಲೆಕೆಡಿಸಿಕೊಳ್ಳುವಿರಿ. ಬೆಳಗಿನಿಂದಲೇ‌ ನೀವು ಮೋಜಿನ ಮಾನಸಿಕತೆಯನ್ನು ಬೆಳೆಸಿಕೊಂಡಿರುವಿರಿ. ನಿಮ್ಮ ಅಧ್ಯಯನ ಬಗ್ಗೆ ನಿಮಗೇ ಅನುಮಾನ ಬರಬಹುದು. ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವಾತಾವರಣವು ಇರುವುದು. ಅವರ ಮಾತನ್ನು ಧಿಕ್ಕರಿಸಬೇಡಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ.

ಇದನ್ನೂ ಓದಿ: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

ಮೀನ ರಾಶಿ :

ಒತ್ತಡದ ಕಾರಣದಿಂದ ಕಲಹ,‌ ಮನಸ್ತಾಪಗಳು ಕಾಣಿಸುವುದು. ಆಕಸ್ಮಿಕವಾಗಿ ನೀವು ಆಪ್ತರ ಅಗಲುವಿಕೆಯ ವಾರ್ತೆಯನ್ನು ‌ಕೇಳುವಿರಿ. ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡುವಿರಿ. ಉಡುಗೊರೆಗೆ ಪ್ರತಿಯಾಗಿ ಏನನ್ನಾದರೂ ಕೊಡಬೇಕಾದೀತು. ಸಹೋದರಿಯ ಜೊತೆ ಹೆಚ್ಚಿನ ವಿಚಾರವನ್ನು ಹಂಚಿಕೊಳ್ಳುವಿರಿ. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link