Headlines

ಶಸ್ತ್ರಚಿಕಿತ್ಸೆ ವೇಳೆ ಜಪಾನ್​​ನಲ್ಲಿ 7.1 ತೀವ್ರತೆಯ ಭೂಕಂಪ, ವೈದ್ಯರು ರೋಗಿಯ ಜೀವ ಉಳಿಸಿದ್ಹೇಗೆ ನೋಡಿ – Kannada News | Doctors Stay Focused as Powerful Earthquake Strikes During Critical Surgery in Japan

ಟೋಕಿಯೊ, ಆಗಸ್ಟ್​ 07: ಜಪಾನ್‌ನ ಕುಮಾಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡವೊಂದು ರೋಗಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ(Surgery) ನಡೆಸುತ್ತಿದ್ದಾಗ ಬೃಹತ್ ಭೂಕಂಪ ಸಂಭವಿಸಿದೆ. ಇಡೀ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಉಪಕರಣಗಳು ತೀವ್ರವಾಗಿ ನಲುಗುತ್ತಿದ್ದರೂ, ಧೈರ್ಯಗೆಡದ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಶಸ್ತ್ರಚಿಕಿತ್ಸಾ ಟೇಬಲ್ ಹಿಡಿದುಕೊಂಡು ರೋಗಿಯ ಜೀವ ಉಳಿಸಿದ್ದಾರೆ. ಈ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗ ಏಕಾಏಕಿ ಭೂಮಿ ಕಂಪಿಸಿದ್ದು, ಕೊಠಡಿಯ ದೀಪಗಳು ಮಿನುಗುತ್ತಿದ್ದವು ಹಾಗೂ ಉಪಕರಣಗಳು ಅಕ್ಕಪಕ್ಕಕ್ಕೆ ಓಲಾಡಿದವು.

ಕಂಪನದ ರಭಸಕ್ಕೆ ಓರ್ವ ವೈದ್ಯರು ನೆಲಕ್ಕೆ ಬಿದ್ದರೂ, ಇತರ ಇಬ್ಬರು ಶಸ್ತ್ರಚಿಕಿತ್ಸಕರು ಆಪರೇಟಿಂಗ್ ಟೇಬಲ್ ಜಾರದಂತೆ ಗಟ್ಟಿಯಾಗಿ ಹಿಡಿದುಕೊಂಡರು. ಕಂಪನ ನಿಂತ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸಿದ ವೈದ್ಯರು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ರೋಗಿಯನ್ನು ರಕ್ಷಿಸಿದರು.

ವಿಡಿಯೋ

ದಕ್ಷಿಣ ದ್ವೀಪದಲ್ಲಿ ಭೀಕರ ಕಂಪನ: ಜುಲೈ 28 ರಂದು ಜಪಾನ್‌ನ ದಕ್ಷಿಣ ದ್ವೀಪವಾದ ಕ್ಯುಶುದಲ್ಲಿ (Kyushu) ಸಂಭವಿಸಿದ 7,1 ತೀವ್ರತೆಯ ಭೀಕರ ಭೂಕಂಪಕ್ಕೆ ಕನಿಷ್ಠ 38 ಜನರು ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. 3,500ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, 29,000ಕ್ಕೂ ಹೆಚ್ಚು ಜನರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಈ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಜಪಾನ್‌ನ ಗಡಿ ದಾಟಿ ದಕ್ಷಿಣ ಕೊರಿಯಾದ ಕರಾವಳಿ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *