Headlines

ಷೇರುಪೇಟೆಯಲ್ಲಿ ಮಂಡೇ ಧಮಾಕ; ಸತತ ಕುಸಿತದ ಬಳಿಕ ಸಖತ್ ಚೇತರಿಸಿಕೊಂಡ ಮಾರುಕಟ್ಟೆ; ಏನು ಕಾರಣ? – Kannada News | Indian stock market rises on July 27th after last week’s big fall, key reasons for this comeback

ನವದೆಹಲಿ, ಜುಲೈ 27: ಕಳೆದ ವಾರವಿಡೀ ಸತತವಾಗಿ ಕುಸಿತ ಕಂಡಿದ್ದ ಭಾರತೀಯ ಷೇರುಪೇಟೆಗೆ (stock market) ಇವತ್ತು ಸೋಮವಾರ ಸಖತ್ ಕಳೆ ಪಡೆದಿದೆ. ಸೆನ್ಸೆಕ್ಸ್ 800ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ. ಶೇ. 1ಕ್ಕಿಂತಲೂ ಹೆಚ್ಚು ಉಬ್ಬಿದೆ. ನಿಫ್ಟಿ ಕೂಡ 24,000 ಅಂಕಗಳ ಗಡಿ ಮುಟ್ಟಲು ಯಶಸ್ವಿಯಾಗಿದೆ. ಕಳೆದ ವಾರ ಕಳೆದುಕೊಂಡಿದ್ದ ಸಾಕಷ್ಟ ಅಂಕಗಳಲ್ಲಿ ಒಂದಷ್ಟು ಚೇತರಿಕೆ ಸಿಕ್ಕಿದೆ. ಈ ವರದಿ ಬರೆಯುವ ಹೊತ್ತಲ್ಲಿ ಸೆನ್ಸೆಕ್ಸ್ 76,860 ಅಂಕಗಳಲ್ಲಿತ್ತು. ನಿಫ್ಟಿ 24,002 ಅಂಕಗಳ ಮಟ್ಟದಲ್ಲಿತ್ತು. ಬಿಎಸ್​ಇ ಮತ್ತು ಎನ್​ಎಸ್​ಇ ಇನ್ನೂ ಹಲವಾರು ಸೂಚ್ಯಂಕಗಳು ಹಸಿರು ಬಣ್ಣದಲ್ಲಿರುವುದು ಹೂಡಿಕೆದಾರರ ಮೊಗ ಅರಳಿಸಿದೆ. ಅದರಲ್ಲೂ ಐಟಿ ಸೆಕ್ಟರ್ ಸಖತ್ತಾಗಿ ಕಂಬ್ಯಾಕ್ ಮಾಡುತ್ತಿದೆ.

ಷೇರು ಬಜಾರು ಸೋಮವಾರ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣಲು ಹಲವು ಕಾರಣಗಳಿವೆ. ಜಾಗತಿಕ ವಿದ್ಯಮಾನಗಳೇ ಹೆಚ್ಚಾಗಿ ಮಾರುಕಟ್ಟೆಯನ್ನು ಪ್ರಭಾವಿತಗೊಳಿಸಿದೆ. ಈ ಕೆಲ ಕಾರಣಗಳೇನು ಎನ್ನುವ ವಿವರ ಇಲ್ಲಿವೆ:

ಜಾಗತಿಕವಾಗಿ ಕವಿದಿದ್ದ ಆತಂಕದ ಛಾಯೆ ಸರಿದಿದೆ

ಮಧ್ಯಪ್ರಾಚ್ಯದಲ್ಲಿ (ಅಮೆರಿಕ ಮತ್ತು ಇರಾನ್ ನಡುವೆ) ಎದುರಾಗಿದ್ದ ಉದ್ವಿಗ್ನತೆಯು ಕೊಂಚ ತಿಳಿಯಾಗಿದೆ. ಸೇನಾ ದಾಳಿಗಳನ್ನು ಅಮೆರಿಕ ತಾತ್ಕಾಲಿಕವಾಗಿ ತಡೆಹಿಡಿದಿರುವ ವರದಿಗಳು ಬಂದ ಬೆನ್ನಲ್ಲೇ ಜಾಗತಿಕ ಹೂಡಿಕೆದಾರರಲ್ಲಿ ಭರವಸೆ ಮೂಡಿದ್ದು, ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಂಡಿವೆ.

ಇದನ್ನೂ ಓದಿ: ಸಿಇಒರಂಥ ಸಿಇಒರನ್ನೇ ದಾಸರನ್ನಾಗಿ ಮಾಡಿಕೊಳ್ಳುತ್ತೆ ರೀಲ್ಸ್… ಬೇಸ್ತುಬಿದ್ದ ಸ್ಯಾಮ್ ಟಿಕ್​ಟಾಕ್ ಆ್ಯಪನ್ನೇ ಡಿಲೀಟ್ ಮಾಡಿದ ಕಥೆ

ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಇಳಿಕೆ

ಕಳೆದ ವಾರ ಬ್ಯಾರೆಲ್‌ಗೆ $100 ದಾಟಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡಾ 5ಕ್ಕಿಂತಲೂ ಹೆಚ್ಚು ಕುಸಿದು, $91 ರಿಂದ $95ರ ಸಾಗದಲ್ಲಿದೆ. ತೈಲ ಬೆಲೆ ಇಳಿಕೆಯು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಹಣದುಬ್ಬರ ಮತ್ತು ಆರ್ಥಿಕ ಹೊರೆಯನ್ನು ತಗ್ಗಿಸುವುದರಿಂದ ಮಾರುಕಟ್ಟೆಗೆ ಸಕಾರಾತ್ಮಕ ಶಕ್ತಿ ನೀಡಿದೆ.

ಬಲವರ್ಧನೆಗೊಂಡ ಭಾರತೀಯ ರೂಪಾಯಿ

ಕಚ್ಚಾ ತೈಲದ ಬೆಲೆ ಕಡಿಮೆಯಾದಂತೆ ಹಾಗೂ ಅಮೆರಿಕನ್ ಡಾಲರ್ ಮೌಲ್ಯ ಕೊಂಚ ಕುಸಿದ ಪರಿಣಾಮವಾಗಿ, ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು 28 ಪೈಸೆಗಳಷ್ಟು ಏರಿಕೆಯಾಗಿ ₹96.14 ಮಟ್ಟಕ್ಕೆ ಬಲಗೊಂಡಿದೆ. ಇದು ಹೂಡಿಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಏಷ್ಯನ್ ಮಾರುಕಟ್ಟೆಗಳ ಬೆಂಬಲ

ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ಜಪಾನ್‌ನ ಟೋಪಿಕ್ಸ್, ಆಸ್ಟ್ರೇಲಿಯಾದ ಎಸ್‌ಆಂಡ್‌ಪಿ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಹಾಗೂ ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕಗಳು ಸಕಾರಾತ್ಮಕವಾಗಿ ವಹಿವಾಟು ನಡೆಸಿದ್ದು, ದೇಶೀಯ ಮಾರುಕಟ್ಟೆಗೆ ಬೆಂಬಲ ನೀಡಿವೆ (Asian Cues).

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಬ್ಯಾಂಕಿಂಗ್ ಮತ್ತು ಐಟಿ ವಲಯಗಳ ಪ್ರಬಲ ಚೇತರಿಕೆ

ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ (ಬ್ಯಾಂಕ್ ನಿಫ್ಟಿ), ಐಟಿ ಮತ್ತು ವಿಮಾನಯಾನ (Aviation) ವಲಯದ ಷೇರುಗಳು ಮುಂಚೂಣಿಯಲ್ಲಿವೆ. ಇನ್ಫೋಸಿಸ್ (Infosys), ಟಿಸಿಎಸ್ (TCS), ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇಂಡಿಗೋ (IndiGo) ಷೇರುಗಳು ಶೇ. 1 ರಿಂದ ಶೇ. 3 ರವರೆಗೆ ಪ್ರಬಲ ಜಿಗಿತ ಕಂಡಿವೆ.

ತೈಲ ಬೆಲೆ ಇಳಿಕೆ ಮತ್ತು ಜಾಗತಿಕ ಮಾರುಕಟ್ಟೆಯ ಬೆಂಬಲದಿಂದ ಮಾರುಕಟ್ಟೆ ಚೇತರಿಸಿಕೊಂಡಿದ್ದರೂ, ಈ ವಾರ ನಡೆಯಲಿರುವ ಅಮೆರಿಕದ ಫೆಡರಲ್ ರಿಸರ್ವ್ (US Fed) ಸಭೆ ಮತ್ತು ಪ್ರಮುಖ ಜಾಗತಿಕ ಟೆಕ್ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳ ಮೇಲೆ ಹೂಡಿಕೆದಾರರು ಗಮನ ಹರಿಸಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *