
ಬಿಳಿಯ ಬಟ್ಟೆಯಲ್ಲಿ ಅವರೇ ಕಾಳನ್ನು ಕಟ್ಟಿ, ವೀಳ್ಯದೆಲೆ- ಅಡಿಕೆ, ದಕ್ಷಿಣೆ ಸಹಿತವಾಗಿ ದಾನ ಮಾಡಿ. ನಿಮಗೆ ಬರಬೇಕಾದ ಹಣಕ್ಕೆ ನಾನಾ ಅಡೆತಡೆ ಎದುರಾಗುತ್ತಾ ಇದ್ದಲ್ಲಿ ಅದರ ನಿವಾರಣೆ ಆಗುತ್ತದೆ ಹಾಗೂ ಮಾನಸಿಕವಾಗಿ ಧೈರ್ಯ ಹೆಚ್ಚಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ವಿವಾಹ ವಯಸ್ಕರಾಗಿದ್ದು, ವಧು ಅಥವಾ ವರ ಅನ್ವೇಷಣೆಯಲ್ಲಿ ತೊಡಗಿರುವಂಥವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ಸ್ವಂತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಇರುವವರು ಹೊಸದಾಗಿ ಹೂಡಿಕೆ ಬೇಕು ಎಂಬ ಕಾರಣಕ್ಕೆ ಪಾಲುದಾರರನ್ನು ಹುಡುಕಿಕೊಳ್ಳಲಿದ್ದೀರಿ. ಕೆಲವರು ತಾವಾಗಿಯೇ ಈ ಬಗ್ಗೆ ನಿಮ್ಮ ಬಳಿ ಪ್ರಸ್ತಾವ ತರುವ ಸಾಧ್ಯತೆ ಕೂಡ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಸಾವಯವ ಕೃಷಿ ಮಾಡುವಂಥ ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗೋಪಾಯಗಳು ಕಾಣಿಸಿಕೊಳ್ಳಲಿವೆ. ಇಷ್ಟು ಸಮಯ ಒತ್ತಡ ಎನಿಸಿದ್ದ ಪ್ರಾಜೆಕ್ಟ್ ನಿಮ್ಮ ಕೈ ಹಿಡಿಯಲಿದೆ. ನಿಮ್ಮಲ್ಲಿ ಯಾರು ಮನೆ ನಿರ್ಮಾಣ ಅಥವಾ ನವೀಕರಣ ಮಾಡಬೇಕು ಎಂದಿದ್ದೀರಿ, ಆಗ ಆರ್ಥಿಕ ಅಗತ್ಯಗಳು ಇದೆ ಎಂದಾದರೂ ಹೊಸದಾಗಿ ನಿಮಗೆ ಸ್ನೇಹಿತರಾದವರ ಮೇಲೆ ಹಣಕಾಸು ವಿಚಾರಕ್ಕೆ ಅವಲಂಬಿತರಾಗುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದೆ. ಹೆಣ್ಣುಮಕ್ಕಳು ಇರುವಂಥವರು ಅವರ ಶಿಕ್ಷಣ, ಮದುವೆಗಾಗಿ ಹೂಡಿಕೆ ಮಾಡುವುದಕ್ಕೆ ಸಂಗಾತಿ ಜೊತೆಗೂಡಿ ಚರ್ಚೆ ಮಾಡಲಿದ್ದೀರಿ. ನೀವು ಬಹಳ ಇಷ್ಟಪಡುವಂಥ- ರುಚಿಕಟ್ಟಾದ ಊಟ- ತಿಂಡಿಗಳನ್ನು ಈ ದಿನ ಸವಿಯಲಿದ್ದೀರಿ. ಕುಟುಂಬ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.